ಅವ್ರಿಗೆ ಯಾರ್ ಬೇಕೋ ಅವರನ್ನು ಸೆಲೆಕ್ಟ್ ಮಾಡ್ಕೊಂಡು ಆಡ್ತಿದ್ದಾರೆ..ಎಂದು ಕೆಂಡ ಕಾರಿದ ಜಯಶ್ರೀ.. ಒಮ್ಮೆ ನೀವೇ ನೋಡಿ..

Bigboss News

ಕನ್ನಡದ ಮೊದಲ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಈಗಾಗಲೆ ಶುರುವಾಗಿ ಎಲ್ಲರ ಘಮನ ಸೆಳೆಯುತ್ತಿದೆ. ಪ್ರಸಾರವಾದ ಮೊದಲ ದಿನದಿಂದಲೂ ಸ್ಪರ್ಧಿಗಳು ವೀಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ವಿಚಾರಕ್ಕೆ ಇನ್ನು ಊಟದ ವಿಚಾಕ್ಕೆ ಇನ್ನು ಬೇರೆ ಬೇರೆ ರೀತಿಯ ವಿಚಾರಕ್ಕೆ ಜಗಳವಾಗುವುದು ಕಾಮನ್, ಇದೀಗ ಮತೊಮ್ಮೆ ಬಿಗ್ ಮನೆಯಲ್ಲಿ ಕಿಡಿ ಅತ್ತಿಕೊಂಡಿದೆ.
ಹೌದು ಬಿಗ್ ಬಾಸ್ ಮನೆಯಲ್ಲಿ ಟಾಸ್ಕ್ ನ ವೇಳೆ ದೊಡ್ಡ ಜಗಳವೇ ನಡುವೆ ಹೋಗಿದೆ.

ಇದೀಗ ಬಿಗ್ ಬಾಸ್ ಮನೆಯಲ್ಲಿ ಬಿಗ್ ಬಾಸ್ ಹೊಸ ಟಾಸ್ಕ್ ಅನ್ನು ನೀಡಿದ್ದಾರೆ. ಈ ಟಾಸ್ಕ್ ಕುರಿತು ಇದೀಗ ಮನೆಯಲ್ಲಿ ದೊಡ್ಡ ಜಗಳವೇ ನಡೆದು ಹೋಗಿದೆ. ಹೌದು ಬಿಗ್ ಬಾಸ್ ಮನೆಯಲ್ಲಿ ಇದೀಗ ಮತೊಮ್ಮೆ ದೊಡ್ಡ ಜಗಳ ಶುರುವಾಗಿದೆ ಹಾಗಾದರೆ ಈ ಜಗಳ ಆಗಿದ್ದು ಹೇಗೆ ತಿಳಿಸುತ್ತೇವೆ ಬನ್ನಿ..

ಬಿಗ್ ಬಾಸ್ ಇದೀಗ ಸ್ಪರ್ಧಿಗಳಿಗೆ ಮತ್ತೊಂದು ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್ ನ ಹೆಸರು ಕಾಲಿಗೊಂದು ಹೆಜ್ಜೆ, ಈ ಟಾಸ್ಕ್ ನಲ್ಲಿ ಮೂರು ಸ್ಪರ್ಧಿಗಳು ಭಾಗವಹಿಸಬೇಕಾಗುತ್ತದೆ, ಅದೇ ರೀತಿ ಒಬ್ಬ ಸ್ಪರ್ಧಿ ತಮ್ಮ ಬಳಿ ಇರುವ ಪ್ಲೇಟ್ಸ್ ಗಳನ್ನು ಎಸೆಯಬೇಕು ಅದರ ಮೇಲೆ ಹೆಜ್ಜೆ ಹಾಕುತ್ತಾ ಮತ್ತೊಬ್ಬ ಸ್ಪರ್ಧಿ ಬರಬೇಕು.

ಆ ಪ್ಲೇಟ್ಸ್ ನ ಹೊರತು ಪಡಿಸಿ ಹೊರಗೆ ಹೆಜ್ಜೆ ಇಟ್ಟರೆ ಆ ಸ್ಪರ್ಧಿ ಆಟದಿಂದ ಹೊರಗೆ ಹೋಗುತ್ತಾರೆ. ಈ ವೇಳೆ ನಂದಿನಿ, ಚೈತ್ರಾ ಹಾಗೂ ಜಸ್ವಂತ್ ಈ ಟಾಸ್ಕ್ ಆಡಲು ಮುಂದಾಗುತ್ತಾರೆ. ಇದನ್ನು ಕಂಡು ಜಯಶ್ರೀ ಇದೀಗ ರೊಚ್ಚಿಗೆದ್ದಿದ್ದಾರೆ. ತಾನು ಈ ಟಾಸ್ಕ್ ನಲ್ಲಿ ಭಾಗಿಯಗಬೇಕಿತ್ತು ಎನ್ನುವುದು ಜಯಶ್ರೀ ಅವರ ಅಭಿಪ್ರಾಯ.

ಈ ಕಾರಣಾಕ್ಕೆ ಇದೀಗ ಜಯಶ್ರೀ ನಂದಿನಿ ಅವರ ಮೇಲೆ ಗುಡುಗಿದ್ದಾರೆ. ನನ್ನನ್ನು ಒಂದು ಮಾತು ಕೇಳದೆ ನೀವು ನಿಮ್ಮಲೆ ಎಲ್ಲವನ್ನು ಡಿಸೈಡ್ ಮಾಡಿಕೊಳ್ಳಿ ಎಂದು ಜಯಶ್ರೀ ನಂದಿನಿ ಮೇಲೆ ಮುನಿಸಿಕೊಂಡಿದ್ದಾರೆ. ಇದನ್ನು ಕಂಡು ನಂದಿನಿ ಜಯಶ್ರೀ ಅವರಿಗೆ ತಿಳಿ ಹೇಳಲು ಹೋಗಿದ್ದಾರೆ.

ಈ ವೇಳೆ ಜಯಶ್ರೀ ಅವರನ್ನು ಲೆಕ್ಕಿಸದೆ ಅವರ ಮೇಲೆ ಕೋಪ ಮಾಡಿಕೊಂಡು ಕಣ್ಣೀರು ಹಾಕಿದ್ದಾರೆ. ಈ ಪ್ರೊಮೋ ಇದೀಗ ಬಿಗ್ ಬಾಸ್ ತಂಡ ಬಿಡುಗಡೆ ಮಾಡಿದೆ. ಈ ಪ್ರೊಮೋ ನೋಡಿ ಅಭಿಮಾನಿಗಳು ಇವತ್ತಿನ ಎಪಿಸೋಡ್ ರೋಚಕವಾಗಿರುತ್ತದೆ ಎನ್ನುವ ಭಾವನೆಯಲ್ಲಿದ್ದಾರೆ. ಈ ಜಗಳ ಎಲ್ಲಿಗೆ ಹೋಗಿ ಮುಟ್ಟುತ್ತದೆ ಎನ್ನುವುದನ್ನು ನಾವು ಕಾದು ನೋಡಬೇಕು.

Leave a Reply

Your email address will not be published. Required fields are marked *