ಜೀ ಕನ್ನಡ ವಾಹಿನಿಯ ಪ್ರಮುಖ ಧಾರಾವಾಹಿಗಳಲ್ಲಿ ಜೊತೆಜೊತೆಯಲಿ ಧಾರವಾಹಿ ಮೊದಲ ಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಮನೆಮನೆಗಳಲ್ಲೂ ಕೇಳುವ ಹೆಸರು ಆರ್ಯವರ್ಧನ್ ಮತ್ತು ಅನು ಸಿರಿಮನೆ.
ಜೊತೆ ಜೊತೆಯಲಿ ಧಾರಾವಾಹಿಯಲ್ಲಿನ ಪಾತ್ರಧಾರಿಗಳು ಒಂದು ರೀತಿ ಎಲ್ಲಾ ವೀಕ್ಷಕರ ಮನೆಯವರಂತೆಯೇ ಆಗಿದ್ದಾರೆ. ಆರ್ಯ, ಅನು, ಪುಷ್ಪ, ಸುಬ್ಬು ಎಲ್ಲರನ್ನು ಸಹ ಕರ್ನಾಟಕದ ಜನ ಬಹಳ ಇಷ್ಟಪಟ್ಟಿದ್ದಾರೆ. ಮನ ಮುಟ್ಟುವಂತಹ ಕಥೆ, ಒಳ್ಳೆಯ ತಿರುವುಗಳು, ಕಲಾವಿದರ ಉತ್ತಮವಾದ ಅಭಿನಯ ಈ ಎಲ್ಲಾ ಕಾರಣಗಳಿಂದ ಕನ್ನಡ ಕಿರುತೆರೆಯ ಇತಿಹಾಸದಲ್ಲಿ ಹೊಸದಾದ ಸಂಚಲನ ಮೂಡಿಸಿದ ಧಾರಾವಾಹಿ ಜೊತೆ ಜೊತೆಯಲಿ.
ಉಳಿದೆಲ್ಲ ಪಾತ್ರಕ್ಕಿಂತಲು ವೀಕ್ಷಕರನ್ನು ಹೆಚ್ಚು ಆಕರ್ಷಿಸಿದ್ದು ಆರ್ಯವರ್ಧನ್ ಮತ್ತು ಅನು ಸಿರಿಮನೆ ಪಾತ್ರಗಳು. ಆರ್ಯವರ್ಧನ್ ರ ಜಾಣ್ಮೆ, ಸರಳತೆ, ಗಾಂಭೀರ್ಯ ಅನು ಸಿರಿಮನೆಯ ಮುಗ್ಧತೆ ಇವೆಲ್ಲವೂ ಸಹ ವೀಕ್ಷಕರಿಗೆ ಬಹಳ ಇಷ್ಟವಾಯಿತು.
ಅದರಲ್ಲೂ ವರ್ಧನ್ ಗ್ರೂಪ್ ಆಫ್ ಕಂಪನಿಸ್ ನ ಸಂಸ್ಥಾಪಕ ಆರ್ಯವರ್ಧನ್ ಪಾತ್ರ ಹಿರಿಯರಿಂದ ಕಿರಿಯರವರೆಗೂ ಎಲ್ಲರ ಮೆಚ್ಚುಗೆ ಪಡೆದಿದೆ. ಪಾತ್ರಕ್ಕೆ ಮತ್ತು ವಯಸ್ಸಿಗೆ ತಕ್ಕಂತೆ ಇರುವ ಅನಿರುದ್ಧ್ ಅವರ ನಟನೆಯಲ್ಲಿ ಗಾಂಭೀರ್ಯತೆ, ಪ್ರಬುದ್ಧತೆ ಮ್ಯಾನರಿಸಮ್ ಇವೆಲ್ಲವೂ ಸಹ ಎಲ್ಲರಿಗೂ ಮೆಚ್ಚುಗೆಯಾಗಿದೆ.
ಇನ್ನು ಈ ಧಾರವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟ ಅನಿರುಧ್ ಇದೀಗ ಬಸವನಗುಡಿಯ ಬಳಿ ಸಾಕಷ್ಟು ಕಸದ ರಾಶಿಯನ್ನು ಕಂಡು ಈ ಬಗ್ಗೆ ವೀಡಿಯೊ ಮಾಡಿ ಸರ್ಕಾರದ ಬಳಿ ಆದಷ್ಟು ಬೇಗ ಇದನ್ನು ತೆಗೆಸುವಂತೆ ಮನವಿ ಮಾಡಿಕೊಂಡಿದ್ದಾರೆ.
ನಮಸ್ಕಾರ ಎಲ್ಲರಿಗೂ ನಾನು ಇದೀಗ ಪಟಾಲಮ್ಮ ವೃತ್ತ ಬಸವನಗುಡಿ ಹತ್ತಿರ ಇದ್ದೇನೆ, ಇಲ್ಲಿ ನೋಡಿ ಇಲ್ಲಿ ತುಂಬಾ ಕಸ ಬಿದ್ದಿದೆ, ಹಾಗೂ ಅಲ್ಲಿ ಒಂದು ಬ್ಯಾರಿಕೆಡ್ ಇದ್ದು, ಅದು ತುಂಬಾ ದಿನಗಳಿಂದ ಅಲ್ಲೇ ಇದೆ. ದಯವಿಟ್ಟು ಇದರ ಕಡೆ ಘಮನ ಹರಿಸಿ ಎಂದು ಅಧಿಕಾರಿಗಳಲ್ಲಿ ನಾನು ಕೇಳಿ ಕೊಳ್ಳುತ್ತೇನೆ.
ಇದು ನಮ್ಮ ನಾಡು ನಮ್ಮ ದೇಶ ನಾವು ಸ್ವಚ್ಛವಾಗಿರಬೇಕು, ಇದು ನಮ್ಮ ಜಾವಾಬ್ದಾರಿ ಧನ್ಯವಾದಗಳು ಎಂದು ವಿಡಿಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ ಸಕತ್ ವೈರಲ್ ಆಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.