ನಮಸ್ಕಾರ ವೀಕ್ಷಕರೇ ದೇಶದಲ್ಲಿ ಎಲ್ಲೆಡೆ 75ರ ಸ್ವಾತಂತ್ರ ದಿನಾಚರಣೆಯ ಕಳೆಕಟ್ಟಿದೆ ಅಮೃತ ಮಹೋತ್ಸವದ ಸಲುವಾಗಿ ಪ್ರತಿ ಮನೆ ಮನೆಯಲ್ಲೂ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ ನೀಡಿದರು. ಇದಕ್ಕೆ ಸಿನಿ ತಾರೆಗಳು ಕೊಡ ಕೈ ಜೋಡಿಸಿದ್ದು ತಮ್ಮ ಮನೆಯ ಟೆರಸ್ಗಳ ಮೇಲೆ ಧ್ವಜ ಹರಿಸಿದ್ದಾರೆ.
ಕನ್ನಡದಲ್ಲಿ ಒಂದೇ ಮಾತರಂ ಹಾಡಿಗೆ ಸಿನಿಮಾ ತಾರೆಯರು ಬಾವುಟ ಹಿಡಿದು ಬಂದಿದ್ದಾರೆ , ಗಾಯಕ ವಿಜಯ ಪ್ರಕಾಶ್ ಹಾಡಿರುವ ಈ ಹಾಡಿನಲ್ಲಿ ಕನ್ನಡದ ಸಿನಿಮಾ ತಾರೆಯರು ಮತ್ತು ಹಲವು ಸಾಧಕರು ಇದ್ದಾರೆ. ಈ ಹಾಡಿನ ಮೂಲಕ ಹರ್ಗರ್ ತಿರಂಗ ಅಭಿಯಾನವನ್ನು ಮಾಡಲಾಗಿದೆ.
ಆದರೆ ಈ ಹಾಡಿನಲ್ಲಿ ಪ್ರಮುಖ ನಟರಾದ ದರ್ಶನ್ ಯಶ್ ಉಪೇಂದ್ರ ಯಾಕಿಲ್ಲ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ. ಈ ಗೀತೆಯಲ್ಲಿ ಪ್ರಮುಖವಾಗಿ ನಟ ಜಗ್ಗೇಶ್, ಅನಂತ್ ನಾಗ್ ,ರಮೇಶ್ ರವಿಚಂದ್ರನ್, ಸುದೀಪ್ ,ಶಿವರಾಜ್ ಕುಮಾರ್, ಅರ್ಜುನ್ ಜನ್ಯ , ಸಾಲುಮರದ ತಿಮ್ಮಕ್ಕ, ರಿಷಬ್ ಶೆಟ್ಟಿ, ಅರ್ಜುನ್ ಸರ್ಜಾ , ಧ್ರುವ ಸರ್ಜಾ, ಧನಂಜಯ, ಮುರುಳಿ ಸೆರಿದಂತೆ ಹಲವು ಕಲಾವಿದರು ಸಾಧಕರು ಈ ಹಾಡಿನಲ್ಲಿದ್ದಾರೆ, ಮತ್ತು ಈ ರಿಲೀಸ್ ಆದ ಬಳಿಕ ಉತ್ತಮ ಪ್ರತಿಕ್ರಿಯೆ ಕೊಟ್ಟಿದೆ.
ಮತ್ತೊಂದು ಕಡೆ ಈ ಬಗ್ಗೆ ಆಸಮಾಧಾನ ವ್ಯಕ್ತವಾಗಿದೆ. ಈ ಹಾಡಿನಲ್ಲಿ ಪ್ರಮುಖ ನಟರಾದ ದರ್ಶನ್ ಯಶ್ ಮತ್ತು ಉಪೇಂದ್ರ ದುನಿಯಾ ವಿಜಯ್ ಯಾಕಿಲ್ಲ ಎಂಬ ಪ್ರಶ್ನೆ ಶುರುವಾಗಿದೆ. ಈ ಹಾಡಿಗೆ ಸಾರಥ್ಯವಹಿಸಿಕೊಂಡ ನಟ ಜಗ್ಗೇಶ್ ವಿರುದ್ಧ ಅಸಮಾಧಾನದ ಕೂಗು ಕೇಳಿ ಬಂದಿದೆ.
ಈ ಬಗ್ಗೆ ಜಗ್ಗೇಶ್ ಕೂಡ ಸ್ಪಷ್ಟನೆ ಕೊಟ್ಟಿದ್ದಾರೆ. ವೀಶೆಷ ಹಾಡಿನಲ್ಲಿ ದರ್ಶನ್ ಯಶ್ ರಕ್ಷಿತ್ ಶೆಟ್ಟಿ ಯಾಕಿಲ್ಲ ಎಂಬ ಬಗ್ಗೆ ಅವರು ಹೇಳಿದ್ದಾರೆ.
ಈ ಹಾಡಿಗೆ ವಿಜಯ್ ಪ್ರಕಾಶ ಅವರು ಹಾಡುಅಷ್ಟೇ ಅಲ್ಲ ಸಂಗೀತ ಕೂಡ ಮಾಡುತ್ತೇನೆಂದರೂ ಮಾಡುವುದಕ್ಕೆ ಎಲ್ಲಾ ನಟರು ಬರುವುದಕ್ಕೆ ಸಾಧ್ಯವೇ ಎಂಬ ಪ್ರಶ್ನೆ ಉಂಟಾಗಿತ್ತು.
ನಾನು ಆದಷ್ಟು ಪ್ರಯತ್ನ ಪಡುತ್ತೇನೆ ಎಂದು ಮಾತು ಕೊಟ್ಟೆ. ಆದರೆ ಮಗ ಇದ್ದದ್ದು ಕೇವಲ 13 ದಿನ ಟೈಮ್ ಅಷ್ಟರಲ್ಲಿ ಹಾಡು ರೆಕಾರ್ಡ್ ಆಗಬೇಕಿತ್ತು ಎಷ್ಟು ನಟರು ಇದ್ದಾರೆ ಎಂಬುದು ನಿಗದಿಯಾಗಬೇಕಿತ್ತು ಮತ್ತು ಹಾಡಿಗೆ ಶೂಟಿಂಗ್ ಕೂಡಾ ಆಗಬೇಕಿತ್ತು. ಎಲ್ಲಾ ಕಲಾವಿದರು ವೈಯಕ್ತಿಕವಾಗಿ ನಾನೇ ಕರೆ ಮಾಡಿದ್ದೆ ಆದರೆ ಎಲ್ಲಾ ಕಲಾವಿದರ ಬದುಕು ಮತ್ತು ಟೈಮಿಂಗ್ಸ್ ಫಿಕ್ಸ್ ಆಗಿರುತ್ತದೆ.
ಹಲವು ಪ್ರೋಗ್ರಾಮ್ ಗಳು ಇರುತ್ತದೆ ಸಿನಿಮಾ ರಂಗದ ಹಲವರು ನನಗೆ ಸ್ಪಂದಿಸಿ ನಮ್ಮ ಸೇರಿಕೊಳ್ಳುವಂತಹ ಕೆಲಸ ಮಾಡಿದರು ನಟ ದರ್ಶನ್ ಯಶ್ ಇದ್ದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಅದು ನನಗೆ ಕಾಡುತ್ತಿದೆ ಅವರು ಬರಲಿ ಎಂದು ನಾನು ಅಪ್ರೋಚ್ ಕೂಡ ಮಾಡಿದ್ದೆ ಅವರು ಕೂಡ ಬರ್ತೀವಿ ಎಂದು ಹೇಳಿದ್ದರು ಆದರೆ ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ ರಕ್ಷಿತ್ ಶೆಟ್ಟಿ ಯನ್ನು ಕೇಳಿದ್ದೆವು ಅವರು ಥೈಲ್ಯಾಂಡ್ ನಲ್ಲಿ ಇದ್ದ ಕಾರಣ ಬರಲು ಸಾಧ್ಯವಾಗಲಿಲ್ಲ ಎಂದು ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ .