ಸದ್ಯ ಸಿನಿಮಾರಂಗದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಸಿನಿಮಾ ಎಂದರೆ ಅದು ಲೈಗರ್ ಎಂದರ್ಸ್ ತಪ್ಪಾಗುವುದಿಲ್ಲ. ಸೌತ್ ಸಿನಿಮಾರಂಗದ ಖ್ಯಾತ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಪೂರಿ ಜಗ್ಗನಾಥ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ.
ಇನ್ನು ಲೈಗರ್ ಸಿನಿಮಾದಲ್ಲಿ ಟಾಲಿವುಡ್ ನ ಮೋಸ್ಟ್ ಹ್ಯಾಂ-ಡ್-ಸಂ ನಟ ವಿಜಯ್ ದೇವರಕೊಂಡ ಹಾಗೂ ಬಾಲಿವುಡ್ ಬೆಡಗಿ ಅನನ್ಯ ಪಾಂಡೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಇನ್ನು ಈ ಸಿನಿಮಾದ ನಿರ್ಮಾಣ ಎ ಎ ಫಿಲ್ಮ್ಸ್ ಮಾಡಿದ್ದಾರೆ.
ಈ ಸಿನಿಮಾದಲ್ಲಿ ನಟಿ ರಮ್ಯಾ ಕೃಷ್ಣ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಇನ್ನು ನಟ ವಿಜಯ್ ದೇವರಕೊಂಡ ಅವರ ಲೈಗರ್ ಸಿನಿಮಾ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಈಗಾಗಲೇ ಹುಟ್ಟಿಕೊಂಡಿದೆ.
ವಿಜಯ್ ಅವರ ಲೈಗರ್ ಸಿನಿಮಾ ಇದೆ ತಿಂಗಳು 25 ಆಗಸ್ಟ್ ಅಂದು ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಈ ಸಿನಿಮಾಗಾಗಿ ವಿಜಯ್ ಅಭಿಮಾನಿಗಳು ಸಾಕಷ್ಟು ದಿನಗಳಿಂದ ಕಾತುರರಾಗಿದ್ದಾರೆ. ಇನ್ನು ಈ ಸಿನಿಮಾ ಧಾಖಲೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎನ್ನುತ್ತಿದ್ದಾರೆ ವಿಜಯ್ ಅಭಿಮಾನಿಗಳು.
ಸದ್ಯ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯ ಪಾಂಡೆ ಲೈಗರ್ ಸಿನಿಮಾದ ಪ್ರಚಾರ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸಿನಿಮಾದ ಪ್ರಚಾರವನ್ನು ನಟಿ ಅನನ್ಯ ಪಾಂಡೆ ಹಾಗೂ ವಿಜಯ್ ದೇವರಕೊಂಡ ಬೇರೆ ಬೇರೆ ವಿಭಿನ್ನ ರೀತಿಯಲ್ಲಿ ಮಾಡುತ್ತಿದ್ದಾರೆ.
ಇನ್ನು ಲೈಗರ್ ಸಿನಿಮಾದ ಪ್ರಚಾರದ ವೇಳೆ ನಟಿ ಅನನ್ಯ ಅವರಿಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ನಟಿ ತುಂಬಾ ಬೋಲ್ಡ್ ಆಗಿ ಉತ್ತರಿಸಿದ್ದಾರೆ. ಹೌದು ನಿಮಗೆ ವಿಜಯ್ ಜೊತೆ ಯಾವ ಸೀನ್ ಕಷ್ಟ ಹಾಗೂ ಯಾವ ಸೀನ್ ಬಹಳ ಇಷ್ಟವಾಗಿತ್ತು ಎಂದು ಮಾಧ್ಯಮದವರು ನಟಿಗೆ ಪ್ರಶ್ನೆ ಕೇಳಿದ್ದರು.
ಇದಕ್ಕೆ ಉತ್ತರಿಸಿದ ನಟಿ ಅನನ್ಯ ಪಾಂಡೆ, ನನಗೆ ವಿಜಯ್ ಜೊತೆ ರೋ-ಮ್ಯಾ-ನ್ಸ್ ಮಾಡುವುದು ಬಹಳ ಈಸಿಯಾಗಿತ್ತು. ಜೊತೆಗೆ ಒಂದು ಸೀನ್ ನಲ್ಲಿ ನಾನು ವಿಜಯ್ ಜೊತೆಗೆ ಮೋಟರ್ ಬೈಕ್ ನಲ್ಲಿ ಹಿಂದೆಗೆ ಮುಖ ಮಾಡಿ ಕುಳಿತುಕೊಳ್ಳಬೇಕಿತ್ತು ಆ ಸೀನ್ ನನಗೆ ಬಹಳ ಕಷ್ಟವಾಗಿತ್ತು ಎಂದಿದ್ದಾರೆ.