ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ನಿತ್ಯ ಒಂದೆಲ್ಲಾ ಒಂದು ವಿಚಾರಕ್ಕೆ ಟ್ರೋಲ್ ಗೆ ಒಳಗಾಗುತ್ತಿರುತ್ತಾರೆ. ಮೊದಮೊದಲು ಟ್ರೋಲ್ ಗಳ ಬಗ್ಗೆ ತಲೆ ಕೆಡಿಸಿಕೊಳ್ಳದ್ದೆ ಇದ್ದ ನಟಿ ರಶ್ಮಿಕಾ ಮಂದಣ್ಣ, ಇದೀಗ ಆಗಾಗ ಟ್ರೋಲ್ ಗಳ ವಿರುದ್ಧ ಗರಂ ಆಗುತ್ತಿದ್ದಾರೆ.
ಇತ್ತೀಚೆಗಷ್ಟೇ ರಶ್ಮಿಕಾ ಕುರಿತು ಅನುಮಾನ ವ್ಯಕ್ತಪಡಿಸುವ ಘಟನೆಗಳು ನಡೆದಿವೆ. ರಶ್ಮಿಕಾ ಕೂಡ ಎಲ್ಲಾ ನಟ ನಟಿಯರಂತೆಯೇ ಸ್ಟ್ರಗಲ್ ಮಾಡಿ ಬಂದಿದ್ದಾರೆ. ನಾನು ರಾತ್ರೋರಾತ್ರಿ ಸ್ಟಾರ್ ಆದಂತಹ ನಟಿಯಲ್ಲ, ಅನೇಕ ಭಾಷೆಗಳಲ್ಲಿ ನಟಿಸಿದ್ದೇನೆ.
ಅನೇಕ ಸ್ಟಾರ್ ನಟರ ಜೊತೆಗೆ ಕೆಲಸ ಮಾಡಿದ್ದೇನೆ. ಪ್ರತಿ ಸಿನಿಮಾದಲ್ಲಿ ಕೂಡ ನಾನು ಕಷ್ಟ ಪಟ್ಟಿದ್ದೇನೆ. ಈ ಯಶಸ್ಸಿನಲ್ಲಿ ನನ್ನ ಕಷ್ಟದ ಪಾಲು ಕೂಡ ಇದೆ ಎನ್ನುವ ಅರ್ಥದಲ್ಲಿ ನಟಿ ರಶ್ಮಿಕಾ ಮಾತನಾಡಿದ್ದಾರೆ. ಈ ಮೂಲಕ ನಾನು ಕೂಡ ಕಷ್ಟ ಪಟ್ಟೆ ಮೇಲಕ್ಕೆ ಬಂದಿದ್ದೇನೆ ಎಂದು ನಟಿ ರಶ್ಮಿಕಾ ತಿಳಿಸಿದ್ದಾರೆ.
ಕನ್ನಡದ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ನಟಿ ರಶ್ಮಿಕಾ ಮಂದಣ್ಣ ಬಳಿಕ ತೆಲುಗು ಹಾಗೂ ತಮಿಳು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟರು. ನಟಿ ನಟಿಸಿದ್ದ ಬಹುತೇಕ ಸಿನಿಮಾಗಳು ಸೂಪರ್ ಹಿಟ್ ಆದವು.
ಒಂದಾದ ಮೇಲೆ ಒಂದು ಹಿಟ್ ಸಿನಿಮಾಗಳಲ್ಲಿ ನಟಿಸುತ್ತಾ ನತು ರಶ್ಮಿಕಾ ಮಂದಣ್ಣ ಸಿನಿಮಾರಂಗದ ಟಾಪ್ ನಟಿಯರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ತಮ್ಮ ಅದ್ಭುತ ನಟನೆ ಹಾಗೂ ಗ್ಲಾಮರ್ ನ ಮೂಲಕ ನಟಿ ರಶ್ಮಿಕಾ ಮಂದಣ್ಣ ನ್ಯಾಷನಲ್ ಕ್ರಶ್ ಆಗಿ ಗುರುತಿಸಿಕೊಂಡಿದ್ದಾರೆ.
ಇನ್ನು ಇತ್ತೀಚೆಗೆ ನಟಿ ರಶ್ಮಿಕಾ ಬಾಲಿವುಡ್ ಗೂ ಸಹ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಬಾಲಿವುಡ್ ನಲ್ಲಿ ತಮ್ಮ ಎರಡು ಸಿನಿಮಾಗಳ ಶೂಟಿಂಗ್ ಮುಗಿಸಿದ್ದು, ಇನ್ನೆನ್ನು ಕೆಲವೇ ದಿನಗಳಲ್ಲಿ ರಶ್ಮಿಕಾ ಮಂದಣ್ಣ ಅವರ ಬಿ ಟೌನ್ ಸಿನಿಮಾಗಳು ಸಹ ತೆರೆ ಮೇಲೆ ಅದ್ದೂರಿಯಾಗಿ ಬಿಡುಗಡೆಯಾಗಲಿದೆ.
ಇನ್ನು ನಟಿ ಇತ್ತೀಚೆಗೆ ಮಲಯಾಳಂ ಸಿನಿಮಾರಂಗಕ್ಕೂ ಸಹ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ. ಶೀಘ್ರದಲ್ಲೇ ನಟಿ ರಶ್ಮಿಕಾ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ಸಹ ಕಾಣಿಸಿಕೊಳ್ಳಲಿದ್ದಾರೆ. ಇನ್ನು ನಟಿ ರಶ್ಮಿಕಾ ಮಾತನಾಡಿರುವ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..