ನಟಿ ಅಮೂಲ್ಯ ಸಿನಿಮಾರಂಗದಿಂದ ದೂರ ಉಳಿದಿದ್ದರು ಕೂಡ ಅವರ ಅಭಿಮಾನಿಗಳು ಮಾತ್ರ ಅವರನ್ನು ಮರೆತ್ತಿಲ್ಲ. ನಟಿ ಅಮೂಲ್ಯ ಅವರ ಅಭಿಮಾನಿಗಳ ಜೊತೆ ನಿರಂತರವಾಗಿ ಸೋಷಿಯಲ್ ಮಿಡಿಯಾದ ಮುಖಾಂತರ ಸಂಪರ್ಕದಲ್ಲಿ ಇರುತ್ತಾರೆ.
ನಟಿ ಅಮೂಲ್ಯ ಸಿನಿಮಾರಂಗದಿಂದ ದೂರ ಉಳಿದು ಮದುವೆಯಾಗುತ್ತಿದ್ದಾರೆ ಎಂದಾಗ ಅದೆಷ್ಟೋ ಅಭಿಮಾನಿಗಳು ನೊಂದುಕೊಂಡಿದ್ದು ಇದೆ. ಆಗಾಗಿ ಅಭಿಮಾನಿಗಳ ಮೇಲೆ ನಟಿ ಅಮೂಲ್ಯ ಅವರಿಗೂ ವಿಶೇಷ ಪ್ರೀತಿ.
ಮದುವೆಯಾದ ನಂತರ ತಮ್ಮ ಅಭಿಮಾನಿಗಳಿಗೆ ಒಂದಾದ ಮೇಲೆ ಒಂದು ವಿಷಯವನ್ನು ನಟಿ ಅಮೂಲ್ಯ ಸೋಷಿಯಲ್ ಮಿಡಿಯಾದ ಮುಖಾಂತರ ತಿಳಿಸುತ್ತಿದ್ದಾರೆ. ಈ ಬಾರಿ ಮೊದಲ ಬಾರಿಗೆ ನಟಿ ಅಮೂಲ್ಯ ತಮ್ಮ ಎರಡು ಮಕ್ಕಳ ಫೋಟೋವನ್ನು ಸೋಷಿಯಲ್ ಮಿಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಮೊದಲ ಬಾರಿಗೆ ತಮ್ಮ ಅವಳಿ ಮಕ್ಕಳ ಮುಖವನ್ನು ನಟಿ ಅಮೂಲ್ಯ ರಿವೀಲ್ ಮಾಡಿದ್ದಾರೆ. ಮಗು ಜನಿಸಿದಾಗ ಹಾಗೂ ಇತ್ತೀಚೆಗಷ್ಟೇ ತಮ್ಮ ಪುಟ್ಟ ಮಕ್ಕಳ ಬೆರಳು ಹಾಗೂ ಕಾಲುಗಳನಷ್ಟೇ ತೋರಿಸಿದ್ದ ಅಮೂಲ್ಯ ದಂಪತಿ, ಇದೀಗ ಮೊದಲ ಬಾರಿಗೆ ತಮ್ಮ ಮಕ್ಕಳ ಫೋಟೋ ತೋರಿಸಿದ್ದಾರೆ.
ಹೌದು ಇಂದು ಕೃಷ್ಣಜನ್ಮಾಷ್ಟಮಿಯ ವಿಶೇಷ ದಿನದಂದೇ ನಟಿ ಅಮೂಲ್ಯ ತಮ್ಮ ಮುದ್ದು ಕಂದಮ್ಮಗಳ ಮುದ್ದು ಮುಖವನ್ನು ರಿವೀಲ್ ಮಾಡಿದ್ದಾರೆ. ಈ ಫೋಟೋವನ್ನು ನಟಿ ಅಮೂಲ್ಯ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ನಟಿ ಅಮೂಲ್ಯ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಮಕ್ಕಳ ಫೋಟೋ ಶೇರ್ ಮಾಡಿಕೊಂಡು ನಮ್ಮ ಕಂದಮ್ಮಗಳಿಗೆ ನಿಮ್ಮ ಹಾರೈಕೆ ಸದಾ ಇರಲಿ ಎಂದು ನಟಿ ಕೇಳಿಕೊಂಡಿದ್ದಾರೆ. ಇನ್ನು ಈ ಫೋಟೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ತಮ್ಮ ನೆಚ್ಚಿನ ನಟಿ ಅಮೂಲ್ಯ ಅವರ ಮಕ್ಕಳ ಮುಖವನ್ನು ನೋಡಬೇಕು ಎಂಬುದು ಅವರ ಅಭಿಮಾನಿಗಳ ಬಹು ದಿನಗಳ ಆಸೆಯಾಗಿತ್ತು. ಕೊನೆಗೂ ಈ ಆಸೆಯನ್ನು ನಟಿ ಈಡೇರಿಸಿದ್ದಾರೆ. ನಿಮಗೂ ಕೂಡ ಅಮೂಲ್ಯ ಹಾಗೂ ಅವರ ಮಕ್ಕಳು ಇಷ್ಟವಾಗಿದ್ದರೆ, ಕಾಮೆಂಟ್ ಮಾಡುವ ಮೂಲಕ ತಿಳಿಸಿ.