ಚಿರು ಮರೆತು ಮತ್ತೆ ಮದುವೆಯಾಗಿ ಎಂದವರಿಗೆ ಖಡಕ್ ಆಗಿ ಉತ್ತರಿಸಿದ ನಟಿ ಮೇಘನಾ ರಾಜ್… ಎಲ್ಲರೂ ಶಾಕ್ ನೀವೇ ನೋಡಿ..

ಸ್ಯಾಂಡಲವುಡ್

ನಟಿ ಮೇಘನಾ ರಾಜ್ ಚಿರುವನ್ನು ಪ್ರೀತಿಸಿ ಮದುವೆಯಾಗಿ ಎರಡೇ ವರ್ಷಕ್ಕೆ ಚಿರುವನ್ನು ಕಳೆದುಕೊಂಡವರು. ಇನ್ನು ಚಿರುವನ್ನು ಅವರು ಕಳೆದುಕೊಂಡಾಗ ನಟಿ ಮೇಘನಾ ರಾಜ್ ತುಂಬು ಗರ್ಭಿಣಿ. ಇನ್ನು 32ರ ಹರಿಯದ ಮೇಘನಾ ಅವರ ಬದುಕಿಗೊಂದು ಆಸರೆ ಬೇಕು.

ಮೇಘನಾ ಮರು ಮದುವೆಯಾಗಿ ಅವರು ಮತ್ತೆ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಬಹಳಷ್ಟು ಜನರ ಅಭಿಪ್ರಾಯ. ಮತ್ತೆ ಮದುವೆಯಾಗಿ ಎಂದು ಹಲವಾರು ಜನ ಮೇಘನಾ ಅವರಿಗೆ ಹೇಳಿದ್ದರು. ಇದೀಗ ನಟಿ ಈ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಅವರ ಬಗ್ಗೆ ಜನ ಬೇಕಾಬಿಟ್ಟಿ ಕಾಮೆಂಟ್ ಮಾಡುವುದನ್ನು ಬಿಟ್ಟಿಲ್ಲ. ಮೇಘನಾ ರಾಜ್ ಅವರ ಮನಸ್ಸಿಗೆ ಗಾಸಿಯಾಗುವಂತಹ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ. ವ-ರಿಜಿನ-ಲ್ ಹೆಸರು ಮರೆಮಾಚಿ ಹೀಗೆಲ್ಲಾ ಕಾಮೆಂಟ್ ಮಾಡುವವರ ವಿರುದ್ಧ ಮೇಘನಾ ರಾಜ್ ನಿರ್ಲಕ್ಷ್ಯ ಮಾಡಿದ್ದಾರೆ.

ಕೆಸರಿಗೆ ಕೈ ಹಾಕುವುದಕ್ಕಿಂತ ಅದನ್ನು ಅ-ವೊಯ್ಡ್ ಮಾಡಿ ಮುಂದೆ ಹೋಗುವುದು ಉತ್ತಮ ಎನ್ನುವುದು ಮೇಘನಾ ಅವರ ಅಭಿಪ್ರಾಯ. ಇದೀಗ ಮೇಘನಾ ತಮ್ಮ ಮರು ಮದುವೆಯ ಬಗ್ಗೆ ಇಂ-ಗ್ಲೀಷ್ ವೆ-ಬ್ಸೈಟ್ ನ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.

ನಾನು ನಮ್ಮ ಸಮಾಜದ ಮೈಂಡ್ ಸೆಟ್ ಬಗ್ಗೆ ಯೋಚಿಸುತ್ತಿರುತ್ತೇನೆ. ಇಲ್ಲಿ ಕೆಲವರು ನನಗೆ ಮರು ವಿವಾಹ ಆಗುವಂತೆ ಸಲಹೆ ನೀಡುತ್ತಾರೆ. ಇನ್ನು ಕೆಲವರು ನಿಮ್ಮ ಮಗನ ಜೊತೆಗೆ ಸಂತೋಷದಿಂದಿರಿ ಮರುಮದುವೆ ಬೇಡ ಅಂತಿದ್ದಾರೆ. ಸೋ ನಾನು ಯಾರ ಮಾತು ಕೇಳಲಿ ಎಂದು ಮೇಘನಾ ಹೇಳಿದ್ದಾರೆ.

ಆದರೆ ಮೇಘನಾ ಅವರು ಹೇಳಿದ್ದಂತೆ ಅವರು ಇನ್ನು ಮರು ವಿವಾಹದ ಬಗ್ಗೆ ಯೋಚನೆ ಮಾಡಿಲ್ಲ. ಚಿರು ನನ್ನ ಜೊತೆ ಅವರ ಯೋಚನಾ ಕ್ರಮವನ್ನು ಬಿಟ್ಟು ಹೋಗಿದ್ದಾರೆ. ಅವರೇ ಹೇಳಿದಂತೆ ನಾಳೆ ಏನಾಗುತ್ತದೆ ಎನ್ನುವುದರ ಬಗ್ಗೆಯಾಗಲಿ, ಇನ್ನು ಇಷ್ಟು ದಿನಗಳು ಆದ ಮೇಲೆ ನನ್ನ ಬದುಕು ಏನಾಗುತ್ತದೆ ಎನ್ನುವ ಬಗ್ಗೆಯಾಗಲಿ ನಾನು ತಲೆಕೆಡಿಸಿಕೊಳ್ಳಲ್ಲ.

ನಾನು ಈ ಕ್ಷಣದಲ್ಲಿ ಜೀವಿಸುವವಳು, ಆದರೆ ನಾನು ನನ್ನ ಬದುಕಿನ ಬಗ್ಗೆ ಏನೇ ನಿರ್ಧಾರ ತೆಗೆದುಕೊಂಡರು ಅದರ ಹಿಂದೆ ಚಿರು ಇದ್ದೆ ಇರುತ್ತಾರೆ. ನಿನ್ನ ಮನಸ್ಸಿನ ಮಾತನಷ್ಟೇ ಕೇಳಬೇಕು ಅನ್ನೋದನ್ನೇ, ನಾನು ಬದುಕಿನ ಕೊನೆಯವರೆಗೂ ಪಾಲಿಸಿಕೊಂಡು ಬರುತ್ತೇನೆ ಎಂದಿದ್ದಾರೆ ನಟಿ ಮೇಘನಾ..

Leave a Reply

Your email address will not be published. Required fields are marked *