ನಟಿ ಮೇಘನಾ ರಾಜ್ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಸಕ್ಕತ್ ಆಕ್ಟಿವ್ ಆಗಿದ್ದಾರೆ. ಮಗನ ಹಾರೈಕೆಯ ಜೊತೆಗೆ ಸಿನಿಮಾ ಶೂಟಿಂಗ್ ಕೆಲಸಗಳಲ್ಲಿ ನಟಿ ಮೇಘನಾ ರಾಜ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಇನ್ನು ಇದೀಗ ಇದ್ದಕ್ಕಿದ್ದಂತೆ ನಟಿ ಮೇಘನಾ ರಾಜ್ ಮಗ ರಾಯನ್ ರಾಜ್ ಜೊತೆ ಕ್ಯಾಲಿಫೋರ್ನಿಯಾಗೆ ತೆರಳಿದ್ದಾರೆ. ಕ್ಯಾಲಿಫೋರ್ನಿಯಾಗೆ ನಟಿ ಮೇಘನಾ ಹೋಗಿದ್ದೇಕೆ ಗೊತ್ತಾ? ಅಲ್ಲಿ ನಟಿ ಮೇಘನಾ ಮತ್ತು ಮಗ ರಾಯನ್ ಮಾಡಿದ್ದೇನು? ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಸಂಪೂರ್ಣ ಉತ್ತರ ನೀಡುತ್ತೆವೇ ಮುಂದಕ್ಕೆ ಓದಿ…
ನಟಿ ಮೇಘನಾ ರಾಜ್ ಅವರು ಇಂದು ಸೋಷಿಯಲ್ ಮಿಡಿಯಾದಲ್ಲಿ ಕ್ಯಾಲಿಫೋರ್ನಿಯಾದಲ್ಲಿ ತೆಗೆದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಮೇಘನಾ ರಾಜ್ ಅಲ್ಲಿಗೆ ಹೋಗಿದ್ದೇಕೆ ಗೊತ್ತಾ ಬನ್ನಿ ನೋಡೋಣ..
ಮೇಘನಾ ರಾಜ್ ಅವರನ್ನು ಅಂತರಾಷ್ಟ್ರೀಯ ಪ್ರಶಸ್ತಿಯೊಂದು ಉಡುಕಿಕೊಂಡು ಬಂದಿದೆ. ಹೌದು ಮೇಘನಾ ರಾಜ್ ಅವರಿಗೆ ಈ ಬಾರಿಯ ಪ್ರತಿಷ್ಠಿತ ಫಾಗ್ ಹೀರೋ ಅ-ವಾರ್ಡ್ ಲಭಿಸಿದೆ. ಈ ಕಾರ್ಯಕ್ರಮ ಕ್ಯಾಲಿಫೋರ್ನಿಯಾದಲ್ಲಿ ಸ್ಯಾನ್ಫ್ರಾನ್ಸಿಸ್ಸ್ಕೊ ನಲ್ಲಿ ಜರುಗಿದ್ದೆ.
ಇನ್ನು ಈ ಫೆಸ್ಟಿವಲ್ ಆಫ್ ಗ್ಲೋಬ್ ಸಮಾರಂಭ ಕಳೆದ 40 ವರ್ಷಗಳಿಂದ ಅದ್ದೂರಿಯಾಗಿ ನಡೆದುಕೊಂಡು ಬಂದಿದ್ದು, ಈ ಬಾರಿ ಸಹ ಇದೆ ಆಗಸ್ಟ್ 19, 20 ಹಾಗೂ 21 ರಂದು ಈ ಸಮಾರಂಭವನ್ನು ಅಯೋಜಿಸಲಾಗಿದೆ.
ಸುಮಾರು ಮೂರು ದಿನಗಳು ನಡೆಯುವ ಈ ಕಾರ್ಯಕ್ರಮದಲ್ಲಿ ಹಲವಾರು ಜನರು ಸೇರಿದಂತೆ ಅಲ್ಲಿನ ಜನರು ಸಹ ಭಾಗವಹಿಸುತ್ತಾರೆ. ಪ್ರತಿಭಾರಿ ಈ ಕಾರ್ಯಕ್ರಮಕ್ಕೆ ಅಲ್ಲಿನ ಲಕ್ಷ ಲಕ್ಷ ಜನ ಸೇರುತ್ತಾರೆ.
ಇನ್ನು ಇದೀಗ ಈ ಕಾರ್ಯಕ್ರಮಕ್ಕೆ ನಟಿ ಮೇಘನಾ ರಾಜ್ ಕೂಡ ಆಘಮಿಸಿದ್ದಾರೆ. ನಮ್ಮ ಭಾರತದಿಂದ ಮೇಘನಾ ರಾಜ್ ಅವರನ್ನು ಆಯ್ಕೆ ಮಾಡಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.