ನಮಸ್ಕಾರ ವೀಕ್ಷಕರೇ, ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳ ಫ್ಯಾನ್ಸ್ ವಾರ್ ಪ್ರತಿದಿನ ನಡೆಯುತ್ತಲೇ ಇರುತ್ತದೆ. ದರ್ಶನ್ ಕೊಟ್ಟ ಒಂದು ಹೇಳಿಕೆ ಈಗ ಪುನೀತ್ ರಾಜಕುಮಾರ್ ಅಭಿಮಾನಿಗಳ ಕೆಂಗಣ್ಣಿಗೆ ಕಾರಣವಾಗಿದೆ. ಇದೀಗ ಈ ಇಬ್ಬರೂ ಫ್ಯಾನ್ಸ್ ಗಳ ವಾರ್ ಸ್ಟಾರ್ಟ್ ಆಗಿದೆ.
ಕಳೆದ ಕೆಲವು ವಾರಗಳಿಂದ ದರ್ಶನ್ ಹಾಗೂ ಅಪ್ಪು ಫ್ಯಾನ್ಸ್ ಗಳ ನಡುವೆ ಸೋಸಿಯಲ್ ಮಿಡಿಯಾದಲ್ಲಿ ಕೋಲ್ಡ್ ವಾರ್ ಶುರುವಾಗಿದೆ. ಇದನ್ನು ಕಂಡು ಇದೀಗ ರಾಘಣ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೂ ದರ್ಶನ್ ಅವರ ಬಗ್ಗೆ ಕೆಲವು ಮಾತುಗಳನ್ನ ಆಡಿದ್ದಾರೆ.
ಆದರೆ ಡಿ ಬಾಸ್ ಮತ್ತು ಅಪ್ಪು ನಡುವೆ ಅಪಾರ ಸ್ನೇಹವಿತ್ತು. ಅಪ್ಪು ಗೆ ಫ್ಯಾನ್ಸ್ ವಾರ್ ಸೇರುತ್ತಿರಲಿಲ್ಲ ರಾಜಕುಮಾರ್ ಮನೆಗೆ ಮತ್ತು ಡಿ ಬಾಸ್ ನಡುವೆ ಅಪಾರ ಸ್ನೇಹವಿದೆ, ಶಿವಣ್ಣ, ದರ್ಶನ್ ಅನ್ನು ತಮ್ಮ ಎಂದಿದ್ದಾರೆ. ರಾಘಣ್ಣ ದರ್ಶನ್ ಅವರ ಫ್ಯಾನ್ ನಾನು ಎನ್ನುತ್ತಾರೆ.
ಈ ಫ್ಯಾನ್ ವಾರ್ ನಿಂದ ಬೇಸರಗೊಂಡ ರಾಘಣ್ಣ ಅಪ್ಪು ಮತ್ತು ದರ್ಶನ್ ನಡುವಿನ ಸ್ನೇಹ ಎಂತದ್ದು ಎಂದು ತಿಳಿಸಿದ್ದಾರೆ. ಅಪ್ಪು ಅಭಿನಯದ ಅರಸು ಸಿನಿಮಾದಲ್ಲಿ ದರ್ಶನ್ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಅರಸು ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಒಂದು ಸೀನ್ ನಲ್ಲಿ ಬಂದು ಹೋಗುವ ಪಾತ್ರವದು.
ಈ ಪಾತ್ರದ ಬಗ್ಗೆ ರಾಘಣ್ಣ ತಿಳಿಸಿದ್ದಾರೆ, ಅತಿಥಿ ಪಾತ್ರದಲ್ಲಿ ನಟಿಸಬೇಕೆಂದು ದರ್ಶನ್ ಬಳಿ ಕೇಳಿಕೊಂಡಾಗ ಆ ಕ್ಷಣಕ್ಕೆ ಅವರು ಏನನ್ನೂ ಯೋಚನೆ ಮಾಡದೆ, ಆಯ್ತು ಮಾಡುತ್ತೇನೆ ಎಂದಿದ್ದರು. ಮರುಕ್ಷಣಕ್ಕೆ ನನ್ನದು ಒಂದು ಕಂಡಿಶನ್ ಇದೆ ನೀವು ಯಾವುದೇ ಕಾರಣಕ್ಕೂ ನನಗೆ ಹಣ ಕೊಡಬಾರದು ಎಂದು ಹೇಳಿದರಂತೆ.
ದರ್ಶನ್ ದುಡ್ಡು ತೆಗೆದುಕೊಳ್ಳಬೇಕೆಂದು ನಾವು ಅವರ ಮನವೊಲಿಸಲು ಪ್ರಯತ್ನ ಮಾಡಿದೆವು ಆದರೆ ದರ್ಶನ್ ಒಪ್ಪದೇ ಇಲ್ಲ ಬಹಳ ಬಲವಂತ ಮಾಡಿದಾಗ ದರ್ಶನ್ ನಮ್ಮ ತಂದೆ ನಿಮ್ಮ ಕಂಪನಿಯಲ್ಲಿ ಸಿನಿಮಾ ಮಾಡುತ್ತಿದ್ದಾಗ ಯಾವತ್ತಿಗೂ ದುಡ್ಡಿನ ಬಗ್ಗೆ ಮಾತಾಡಿಲ್ಲ ಅಂತದ್ದರಲ್ಲಿ ನಾನು ಹೇಗೆ ದುಡ್ಡಿನ ಬಗ್ಗೆ ಮಾತನಾಡಲಿ ಎಂದಿದ್ದರು.
ನಮಗೆ ಒಂದು ಕ್ಷಣ ವಿಸ್ಮಯವಾಯಿತು ತಂದೆಯ ಗುಣ ಮಗನಲ್ಲಿ ಹಾಗೆಯೇ ಇತ್ತು. ನಂತರ ನಾವು ಹೇಳಿದ ಹಾಗೆ ಬಂದು ಅಚ್ಚುಕಟ್ಟಾಗಿ ಪಾತ್ರ ಮಾಡಿಕೊಟ್ಟು ಹೋದರು ದರ್ಶನ್ ಎಂದು ರಾಗಣ್ಣ ತಿಳಿಸಿದ್ದಾರೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.