ಖ್ಯಾತ ನಟಿ ರಮ್ಯಾ ಕೃಷ್ಣ ಅವರ ಗಂಡ ಯಾರು ಗೊತ್ತಾ? ಇವರು ಕೂಡ ತುಂಬಾ ಫ್ಹೇಮಸ್…

ಸ್ಯಾಂಡಲವುಡ್

ರಮ್ಯಾ ಕೃಷ್ಣ ದಕ್ಷಿಣ ಭಾರತದ ಖ್ಯಾತ ನಟಿ 30 ವರ್ಷಗಳಿಂದ ಬಹು ಬೇಡಿಕೆಯುಳ್ಳ ನಟಿ ಕೂಡ ಹೌದು. ತಮಿಳು, ತೆಲುಗು, ಮಲಯಾಳಂ, ಕನ್ನಡ ,ಹಿಂದಿ ಎಲ್ಲ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

ರಮ್ಯಾಕೃಷ್ಣನ್ 1984ರಲ್ಲಿ ವೆಳ್ಳಿಮನಸ್ಸು ಎಂಬ ತಮಿಳು ಚಿತ್ರದ ಮೂಲಕ ಕೇವಲ 14 ವರ್ಷಕ್ಕೆ ಸಿನಿ ರಂಗಕ್ಕೆ ಕಾಲಿಟ್ಟರು. ಬಲೆ ಮಿತ್ರಲು ಚಿತ್ರದ ಮೂಲಕ ತೆಲುಗು ಸಿನಿಮಾಗೆ ಎಂಟ್ರಿ ಕೊಟ್ಟ ನಟಿ ರಮ್ಯಾ ಕೃಷ್ಣ ನಂತರ ತಿರುಗಿ ನೋಡಲೇ ಇಲ್ಲ.

1989ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಮ್ಯಕೃಷ್ಣ ಅವರು ಸೌಂದರ್ಯ, ಮೀನಾ, ರೋಜಾ, ನಗ್ಮಾ ಇನ್ನು ಅನೇಕರಿಗೆ ಪೈಪೋಟಿ ನೀಡಿದರು. ರಮ್ಯಾ ಕೃಷ್ಣ ತಮಿಳು ಮೂಲದವರಾದರೂ ತೆಲುಗು ಚಿತ್ರರಂಗದಲ್ಲಿ ಬಹುತೇಕವಾಗಿ ಮೀಸಲಿಟ್ಟರು.

ರಮ್ಯಾಕೃಷ್ಣ ತೆಲುಗಿನ ನಟಿಯೇನೋ ಎಂಬಂತೆ ತೆಲುಗಿನ ಚಿತ್ರದಲ್ಲಿ ನಟಿಸುತ್ತಾರೆ, ರಮ್ಯಾಕೃಷ್ಣ ಅವರನ್ನ ತೆಲುಗು ಚಿತ್ರರಂಗದ ಅಭಿಮಾನಿಗಳು ಇಷ್ಟಪಡುತ್ತಿದ್ದರು. ರಮ್ಯಾಕೃಷ್ಣ ಅವರು ತಮ್ಮ ವಯಸ್ಸಿಗೆ ತಕ್ಕಂತ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ ಇಂದು ಕೂಡ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ.

ಇತ್ತೀಚಿಗೆ ರಮ್ಯಕೃಷ್ಣ ಅವರು ತಮ್ಮ ಪೋಷಕ ಪಾತ್ರಗಳಲ್ಲಿ ಹೆಚ್ಚು ಫೇಮಸ್ ಆಗಿದ್ದಾರೆ. ರಾಜಮೌಳಿ ಅವರ ಬಹುದೊಡ್ಡ ಸಿನಿಮಾ ಎಂದು ಖ್ಯಾತಿಗಳಿಸಿದ ಬಾಹುಬಲಿ ಚಿತ್ರದಲ್ಲಿ ಶಿವಗಾಮಿಯಾಗಿ ಮಿಂಚಿದರು.

ಬಾಹುಬಲಿ ಸಿನಿಮಾದಲ್ಲಿ ಅವರ ನಟನೆಗೆ ಪ್ರಶಸ್ತಿ ಕೂಡ ಬಂತು. ನಂತರ ತೆಲುಗಿನ ಶೈಲಜಾ ರೆಡ್ಡಿ ಅಲ್ಲುಡು ಚಿತ್ರದಲ್ಲೂ ಕೂಡ ರಮ್ಯಕೃಷ್ಣ ಅವರು ಮಿಂಚುತ್ತಾರೆ. ನಂತರ ಇದೀಗ ವಿಜಯ್ ದೇವರಕೊಂಡ ಲೈಗರ್ ಸಿನಿಮಾದಲ್ಲಿ ಸಹ ನಟಿ ರಮ್ಯಾಕೃಷ್ಣ ವಿಶೇಷ ಪಾತ್ರದ ಮೂಲಕ ಎಲ್ಲರ ಘಮನ ಸೆಳೆದಿದ್ದಾರೆ.

ಇನ್ನು ನಟಿ ರಮ್ಯಾ ಕೃಷ್ಣ ಅವರ ವೈಯಕ್ತಿಕ ಜೀವನದ ಬಗ್ಗೆ ಮಾತನಾಡುವುದಾದರೆ,
ನಟಿ ರಮ್ಯಾ ಕೃಷ್ಣ ತೆಲುಗಿನ ಖ್ಯಾತ ನಿರ್ದೇಶಕ ಕೃಷ್ಣ ವಂಶೀ ಅವರನ್ನು 2003 ರಲ್ಲಿ ಮದುವೆಯಾದರೂ.
ರಮ್ಯಾ ಅವರ ಪತಿ ಕೃಷ್ಣ ವಂಶಿಯವರು ತೆಲುಗಿನಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ರ್ನಿದೇಶಿಸಿದ್ದಾರೆ. ನಿಮಗೂ ಕೂಡ ರಮ್ಯಕೃಷ್ಣ ಇಷ್ಟವಾದಲ್ಲಿ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *