ಕನ್ನಡ ಚಿತ್ರರಂಗದ ನಟ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ನಟ ಮನೋರಂಜನ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಗಸ್ಟ್ 21 ರಂದು 8:30ರ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ಮಾಡುವ ಮೂಲಕ ಸಂಗೀತ ಎಂಬವರ ಕೈ ಹಿಡಿದ್ದಿದ್ದಾರೆ.
ಸದ್ಯ ನಟ ಮನೋರಂಜನ್ ಹಾಗೂ ಸಂಗೀತ ಅವರ ಮದುವೆಯ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ. ಇನ್ನು ಈ ನವ ಜೋಡಿಗೆ ಚಿತ್ರರಂಗದವರೂ ಸೇರಿದಂತೆ ಅಭಿಮಾನಿಗಳು ಸೋಷಿಯಲ್ ಮಿಡಿಯಾದ ಮುಖಾಂತರ ಶುಭಕೋರುತ್ತಿದ್ದಾರೆ.
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿರುವ ವೈಟ್ ಪೆಟಲ್ಸ್ ತ್ರಿಪುರ ವಾಸಿನಿಯಲ್ಲಿ ನಡೆದ ಶುಭ ಗಳಿಗೆಯಲ್ಲಿ ಚಿತ್ರರಂಗದ ಹಲವು ಗಣ್ಯ ವ್ಯಕ್ತಿಗಳು ಭಾಗವಹಿಸಿದ್ದರು. ಕನ್ನಡ ಚಿತ್ರರಂಗದವಾರ ಜೊತೆಗೆ ಬೇರೆ ಭಾಷೆಯ ಕಲಾವಿದರು ಸಹ ಈ ಮದುವೆಯಲ್ಲಿ ಭಾಗಿಯಾಗಿದ್ದರು.
ಇದೇ ವೇಳೆ ರವಿಚಂದ್ರನ್ ಅವರ ಆಪ್ತರೆನಿಸಿಕೊಂಡಿರುವ ಶಿವರಾಜ್ ಕುಮಾರ್ ,ರಾಘವೇಂದ್ರ ರಾಜಕುಮಾರ್, ನಟಿ ಖುಷ್ಬು , ಉಮಾಶ್ರೀ , ಶರಣ್ , ಮಾಸ್ಟರ್ ಆನಂದ್, ಗಾಯಕ ಹೇಮಂತ್, ಅಕುಲ್ ಬಾಲಾಜಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಇನ್ನು ಸಾಕಷ್ಟು ಕಹಿ ಘಟನೆಗಳ ಬಳಿಕ ಚಿತ್ರರಂಗದಲ್ಲಿ ಒಂದು ದೊಡ್ಡ ಸಂತೋಷದ ಸುದ್ದಿಯೆಂದರೆ ಅದು ಈ ಮದುವೆ. ಇನ್ನು ಈ ಮದುವೆ ಹಬ್ಬದಂತೆ ನಡೆದಿದ್ದು, ಇಡೀ ಕನ್ನಡ ಚಿತ್ರರಂಗ ಈ ಹಬ್ಬದಲ್ಲಿ ಭಾಗಿಯಾಗಿರುವುದು ವಿಶೇಷ.
ಇಡೀ ರವಿ ಕುಟುಂಬ ರವಿಚಂದ್ರನ್ ಕುಟುಂಬದವರು ಸೇರಿ ಸಂತೋಷದಿಂದ ಡಾನ್ಸ್ ಮಾಡಿದ್ದಾರೆ. ಮದುವೆಯನ್ನು ಸರಳವಾಗಿ ಮಾಡಿದ್ದ ಮಾಮ ನಾಳೆ ಚಿತ್ರರಂಗದವರಿಗಾಗಿ ವಿಶೇಷ ಆರತಕ್ಷತೆ ಸಮಾರಂಭವನ್ನು ಏರ್ಪಡಿಸಿದ್ದಾರೆ.
ನಾಳೆ ಯಾರೆಲ್ಲ ನಟ ನಟಿಯರು ಭಾಗವಹಿಸಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚುತ್ತಿದೆ .ನೀವು ಕೂಡ ಹೊಸ ಜೀವನಕ್ಕೆ ಕಾಲಿಟ್ಟ ಜೋಡಿಗೆ ಕಮೆಂಟ್ ಮಾಡಿ ಶುಭಾಶಯ ತಿಳಿಸಿ.