ದೊಡ್ಡ ಗುಡ್ ನ್ಯೂಸ್ ಹಂಚಿಕೊಂಡ ನಟಿ ಮೇಘನಾ ರಾಜ್.. ಎಲ್ಲರೂ ಶಾಕ್ ನೀವೇ ನೋಡಿ..

ಸ್ಯಾಂಡಲವುಡ್

ನಟಿ ಮೇಘನಾ ರಾಜ್ ಅವರು ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಮಗ ರಾಯನ್ ಆರೈಕೆ ಜೊತೆ ಹಲವಾರು ಸಿನಿಮಾಗಳ ಶೂಟಿಂಗ್ ಕೆಲಸಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

ನೆನ್ನೆ ಮಗನ ಜೊತೆ ಮೇಘನಾ ರಾಜ್ ಅವರು ಕ್ಯಾಲಿಫೋರ್ನಿಯಾ ಗೆ ತೆರಳಿದ್ದರು. ಹೌದು ನಟಿ ಮೇಘನಾ ರಾಜ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಕ್ಯಾಲಿಫೋರ್ನಿಯಾ ದಲ್ಲಿ ತೆಗೆದ ಕೆಲವು ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಹೌದು ,ಮೇಘನಾ ರಾಜ್ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿಯೊಂದು ಹುಡುಕಿಕೊಂಡು ಬಂದಿದ್ದು ಮೇಘನಾ ರಾಜ್ ಅವರಿಗೆ ಬಾರಿಯ ಪ್ರತಿಷ್ಠಿತ ಫಾಗ್ ಹೀರೋ ಅವಾರ್ಡ್ ಲಭಿಸಿದೆ.

ನಮ್ಮ ಭಾರತದಿಂದ ಅದು ನಮ್ಮ ಕನ್ನಡದ ನಟಿಯಾಗಿರುವ ಮೇಘನಾ ರಾಜ್ ಅವರಿಗೆ ಈ ಪ್ರಶಸ್ತಿ ದೊರೆಕಿರುವುದು ನಿಜಕ್ಕೂ ಸಂತೋಷ ಹಾಗೂ ಹೆಮ್ಮೆಯ ವಿಚಾರ. ಸದ್ಯ ಮೇಘನಾ ರಾಜ್ ತಮ್ಮ ಗೆಲುವಿನ ದೋಣಿಯಲ್ಲಿ ತೇಲುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಈ ಕಾರ್ಯಕ್ರಮ ಕ್ಯಾಲಿಫೋರ್ನಿಯ ದ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ನಡೆಯುತ್ತಿದೆ . ಈ ಫಾಗ್ ಸಮಾರಂಭ ಕಳೆದ 40 ವರ್ಷಗಳಿಂದ ಅದ್ದೂರಿಯಾಗಿ ನಡೆಯುತ್ತಿದೆ. ಈ ವರ್ಷ ಮೊನ್ನೆ ಆಗಸ್ಟ್ 19 20 21ರಂದು ಸಮಾರಂಭವನ್ನು ಆಯೋಜಿಸಲಾಗಿದ್ದು ಸುಮಾರು ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಅಲ್ಲಿ ವಾಸಿಸುವ ಅಲ್ಲಿನ ಭಾರತೀಯರು ಸೇರಿದಂತೆ ಹಲವಾರು ಜನ ಭಾಗವಹಿಸಿದ್ದಾರೆ.

ನಮ್ಮ ಭಾರತದಲ್ಲಿ ನಟರಿಗಷ್ಟೇ ಸಿಕ್ಕಿದ ಈ ಪ್ರಶಸ್ತಿ ಇದೀಗ ಮೊದಲಬಾರಿ ನಟಿ ಒಬ್ಬರಿಗೆ ಅದು ಮೇಘನಾ ರಾಜ್ ಅವರಿಗೆ ಸಿಕ್ಕಿದ್ದು ಈ ಪ್ರಶಸ್ತಿ ಪಡೆದ ಮೇಘನಾ ರಾಜ್ ಸಂತೋಷಪಟ್ಟಿದ್ದಾರೆ. ಅಭಿಮಾನಿಗಳು ಮೇಘನಾ ಅವರ ಸಾಧನೆಗೆ ಮೆಚ್ಚುಗೆ ಸೂಚಿಸಿದ್ದಾರೆ.

ಇನ್ನು ಕನ್ನಡ ಚಿತ್ರರಂಗದಲ್ಲಿ ಈ ಪ್ರಶಸ್ತಿಯನ್ನು ಪಡೆದ ಮೊದಲ ನಟಿ ಮೇಘನಾ ರಾಜ್ ಆಗಿದ್ದು, ಇನ್ನು ಹೀಗೆ ನಟಿ ಸಾಕಷ್ಟು ಸಾಧನೆ ಮಾಡಲಿ ಎಂದು ಹಾರೈಸೋಣ. ಈ ಪ್ರಶಸ್ತಿ ಪಡೆದ ಮೊದಲ ಕನ್ನಡತಿಯಾದ ಮೇಘನಾ ರಾಜ್ ಅವರಿಗೆ ನೀವು ಕೂಡ ಕಮೆಂಟ್ ಮಾಡಿ ಶುಭಾಶಯ ತಿಳಿಸಿ.

Leave a Reply

Your email address will not be published. Required fields are marked *