ಸುಮಲತಾ ಅಂಬರೀಷ್ ಅವರ ತಂದೆ ಯಾರು ಗೊತ್ತಾ? ಆಗಿನ ಕಾಲದ ದೊಡ್ಡ ಸ್ಟಾರ್!! ನೀವೇ ನೋಡಿ..

ಸ್ಯಾಂಡಲವುಡ್

ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅಂಬರೀಶ್ ಅವರ ಹೆಂಡತಿ ಸುಮಲತಾ. ಸುಮಲತಾ ಅಂಬರೀಶ್ ಅವರು ಕೂಡ ಖ್ಯಾತ ನಟಿ ಹಾಗೂ ಮಂಡ್ಯ ಕ್ಷೇತ್ರದ ಹಾಲಿಸಂಸದೆ, ಇದು ಎಲ್ಲರಿಗೂ ತಿಳಿದಿರುವ ವಿಷಯ. ಸುಮಲತಾ ಅವರ ತಂದೆ ಯಾರು ಎಂಬುದನ್ನು ನಾವು ಈ ವಿಡಿಯೋದಲ್ಲಿ ನೋಡೋಣ ಬನ್ನಿ.

ಸುಮಲತಾ ಅಂಬರೀಶ್ ಅವರ ಕೌಟುಂಬಿಕ ಹಿನ್ನೆಲೆಯನ್ನು ಹುಡುಕಿದಾಗ ರೆಬಲ್ ಸ್ಟಾರ್ ಅಂಬರೀಶ್ ಅವರ ಧರ್ಮಪತ್ನಿ ಹಾಗೂ ಇವರಿಗೆ ಅಭಿಷೇಕ್ ಎಂಬ ಮಗನಿದ್ದಾನೆ ಎಂಬ ಪ್ರಾರ್ಥಮಿಕ ಮಾಹಿತಿ ಒಂದು ಸಿಗುತ್ತೆ. ಸುಮಲತಾ ಮೂಲತಃ ಆಂಧ್ರದವರು ಎನ್ನುವುದನ್ನು ಬಿಟ್ಟರೆ ಅವರ ತಂದೆ ತಾಯಿ ಕೌಟುಂಬಿಕ ವಿಚಾರ ಏನು ಸಿಗುವುದಿಲ್ಲ.

ಕುತೂಹಲ ಏನಪ್ಪಾ ಎಂದರೆ ಸುಮಲತಾ ಅವರ ತಂದೆ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದವರು ಆಗಿನ ಕಾಲಕ್ಕೆ ಅವರು ಸ್ಟಾರ್ ನಟರಾಗಿದ್ದವರು. ತಮಿಳು ಮತ್ತು ಹಿಂದಿ ಚಿತ್ರದಲ್ಲಿ ಕೆಲಸ ಮಾಡಿದ್ದ ವಿ ಮದನ್ ಮೋಹನ್ ತುಂಬಾ ಪ್ರತಿಭೆವುಳ್ಳ ನಟರಾಗಿ ಗುರುತಿಸಿಕೊಂಡಿದ್ದರು.

ಅಷ್ಟೇ ಅಲ್ಲದೆ ಯಾರು ಈ ಮದನ್ ಮೋಹನ್ ಯಾವ ಕೆಲಸ ಮಾಡ್ತಿದ್ರು ಎಂಬುದನ್ನು ನೋಡೋಣ ಬನ್ನಿ . ವಿ ಮದನ್ ಮೋಹನ್ ರೂಪ ದಂಪತಿಯ ಐದು ಮಕ್ಕಳಲ್ಲಿ ನಾಲ್ಕನೇಯವರು ಸುಮಲತಾ. ಚೆನ್ನೈನಲ್ಲಿ ಹುಟ್ಟಿದ ಇವರು ಮುಂಬೈನಲ್ಲಿ ನೆಲೆಸಿದ್ರು ರೇಣುಕಾ ರೋಹಿಣಿ ಅಕ್ಕಂದಿರು ಅಣ್ಣ ರಾಜೇಂದ್ರ ಪ್ರಸಾದ್ ತಂಗಿ ಕೃಷ್ಣಪ್ರಿಯ.

ಆ ಕಾಲದಲ್ಲಿ ಇಂದಿನ ಬಿ ಎಫ್ ಎಕ್ಸ್ ಹಾಗೂ ಸಿಜಿ ಕೆಲಸಗಳನ್ನು ಸ್ಪೆಷಲ್ ಎಫೆಕ್ಟ್ ಎನ್ನುತ್ತಿದ್ದರು. ಅದನ್ನ ಮದನ್ ಮೋಹನ್ ಅವರು ಯುಕೆ ದೇಶದಲ್ಲಿ ತರಬೇತಿ ಪಡೆದು ಬಂದ ಏಕೈಕ ವ್ಯಕ್ತಿಯಾಗಿದ್ದು, ಪ್ರಸಾದ್ ಪ್ರೊಡಕ್ಷನ್ ಸಲ್ಲಿ ಕೆಲಸ ಮಾಡುತ್ತಿದ್ದರು.

ಹಿಂದಿ ಹಾಗೂ ತಮಿಳು ಸೇರಿದಂತೆ ಅನೇಕ ಚಿತ್ರದ ಟೈಟಲ್ ಮತ್ತು ಸ್ಪೆಷಲ್ ಎಫೆಕ್ಟ್ಸ್ ಮಾಡುತ್ತಿದ್ದರು. ಸುಮಲತಾ ಅವರಿಗೆ ಏಳು ವರ್ಷಗಳಿದ್ದಾಗ ಅವರ ತಂದೆ ತೀರಿಕೊಂಡರು. ಮಕ್ಕಳನ್ನ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು ಮದನ್ ಮೋಹನ್ ಕುಟುಂಬ ಮತ್ತು ಮಕ್ಕಳಿಗೆ ಹೆಚ್ಚು ಸಮಯವನ್ನು ಕೊಡುತ್ತಿದ್ದರು.

ಎಷ್ಟೇ ಕೆಲಸವಿದರು ಮದನ್ ಮೋಹನ್ ಮಕ್ಕಳ ಜೊತೆ ಕಾಲ ಕಳೆಯುತ್ತಿದ್ದರು ಫೋಟೋಗ್ರಫಿ ಹಾಗೂ ಸಂಗೀತದಲ್ಲಿ ಹೆಚ್ಚು ಆಸಕ್ತಿ ಹೊಂದಿದರು . ಇನ್ನು ಆ ಕಾಲದಲ್ಲಿ ಸ್ಪೆಷಲ್ ಎಫೆಕ್ಟ್ ತಂತ್ರಜ್ಞಾನದ ಕಲಾವಿದರು ಯಾರು ಇರಲಿಲ್ಲ.

ಹಾಗಾಗಿ ಸುಮಲತಾ ಅಂಬರೀಶ್ ಅವರ ತಂದೆ ಮದನ್ ಮೋಹನ್ ಅವರು ಆ ಕಾಲದಲ್ಲಿ ಸ್ಪೆಷಲ್ ಎಫೆಕ್ಟ್ ನಲ್ಲಿ ದೊಡ್ಡ ಸ್ಟಾರ್ ನಂತೆ ಹೆಸರು ಮಾಡಿದರು . ನಿಮಗೂ ಕೂಡ ಸುಮಲತಾ ಇಷ್ಟವೆಂದರೆ ನಿಮ್ಮ ಅಭಿಪ್ರಾಯ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *