ಮೇಘನಾ ರಾಜ್ ಅವರು ಇಂದು ಸಿಹಿ ಸುದ್ದಿ ಒಂದನ್ನು ಹಂಚಿಕೊಂಡಿದ್ದಾರೆ. ಇದು ಇಡೀ ಕರ್ನಾಟಕ ಖುಷಿ ಪಡುವ ಸುದ್ದಿ ಎಂದರೆ ತಪ್ಪಾಗಲಾರದು. ಹೌದು ನಟಿ ಮೇಘನಾ ರಾಜ್ ಇದೀಗ ಮಾಡಿರುವ ಸಾಧನೆ ಬಗ್ಗೆ ಎಷ್ಟು ಕೊಂಡಾಡಿದರು ಕಡಿಮೆಯಾಗುತ್ತದೆ.
ಗ್ಲೋಬಲ್ ಮತ್ತು ಇಂಡೋ ಅಮೆರಿಕನ್ ಫೆಡರಲ್ ಚಿತ್ರರಂಗದಲ್ಲಿನ ಪಯಣವನ್ನು ಗೌರವಿಸಿ ಸ್ಯಾಂಡಲ್ವುಡ್ ನಟಿ ಮೇಘನಾ ರಾಜ್ ಅವರಿಗೆ ನೆನ್ನೆ ಹೀರೋ ಪ್ರಶಸ್ತಿ ನೀಡಿ ಗೌರವಿಸಿದೆ. ಇನ್ನು ಇದೀಗ ನಟಿ ತಮ್ಮ ಯಶಸ್ಸಿನಲ್ಲಿ ತೇಲಾಡುತ್ತಿದ್ದಾರೆ.
ಮೇಘನಾ ಕರ್ನಾಟಕ ರಾಜ್ಯ ಮಾತ್ರವಲ್ಲದೆ ದಕ್ಷಿಣ ಭಾರತವನ್ನು ಪ್ರಧಾನಿಸುತ್ತಾರೆ. ಅಲ್ಲದೆ ಮೊದಲ ಬಾರಿಗೆ ಮೇಘನಾ ರಾಜ್ ಅವರಿಗೆ ಹೀರೋ ಅವಾರ್ಡ್ ನೀಡಲಾಗಿದೆ. ಇನ್ನು ಕನ್ನಡದ ಒಬ್ಬ ನಟಿ ಈ ರೀತಿಯ ಅವಾರ್ಡ್ ಪಡೆದಿರುವುದು ನಿಜಕ್ಕೂ ಹೆಮ್ಮೆಯ ವಿಚಾರ.
ಈಗ ಈ ಪ್ರಶಸ್ತಿ ಬಗ್ಗೆ ಮಾತನಾಡಿದ ಮೇಘನಾ ರಾಜ್ , ನನ್ನ ಬದುಕಿನಲ್ಲಿ ಏರಿಳಿತಗಳು ನಡೆದಿದೆ ಕೋಟಿ ಕೋಟಿ ಜನರಲ್ಲಿ ನನ್ನನ್ನು ಗುರುತಿಸಿ ಅವಾರ್ಡ್ ಕೊಟ್ಟಿದ್ದಕ್ಕೆ ನಾನು ತುಂಬಾನೇ ಚಿರಋಣಿ ಮತ್ತು ಇದು ನನಗೆ ತುಂಬಾನೇ ಸ್ಪೆಷಲ್ ಎಂದು ಅವರು ಸಂತೋಷವನ್ನು ಹಂಚಿಕೊಂಡಿದ್ದಾರೆ .
1983ರಿಂದ ಈ ಅವಾರ್ಡ್ ಕೊಡಲಾಗುತ್ತಿದೆ ಆದರೆ ಸೌತ್ ಇಂಡಿಯನ್ ಆಯ್ಕೆಯಾಗಿರುವುದು ಅಭಿಮಾನಿಗಳಿಗೂ ಖುಷಿ ಕೊಟ್ಟಿದೆ. ಮೂರು ದಿನಗಳಿಂದ ಅಮೆರಿಕಾದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮೇಘನಾ ಭಾಗವಹಿಸಿದ್ದರು.
ನೆನ್ನೆ ಅವರನ್ನು ಭಾರತದ ಪರವಾಗಿ ಸನ್ಮಾನಿಸಿ ಗೌರವಿಸಿ ಈ ಪ್ರಶಸ್ತಿ ನೀಡಿದ್ದಾರೆ. ಕನ್ನಡ ಸಿನಿಮಾವನ್ನು ಈಗ ಪ್ರತಿಯೊಬ್ಬರು ತಿರುಗಿ ನೋಡುವ ಹಾಗಾಗಿದೆ . ಬಾಲಿವುಡ್ ನ ಧರ್ಮೇಂದ್ರ ಮತ್ತು ಅಮಿತಾಬಚ್ಚನ್ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು.
ಮೇಘನಾ ರಾಜ್ ಅವರಿಗೆ ಅದು ಕನ್ನಡದವರಿಗೆ ಈ ಪ್ರಶಸ್ತಿ ಸಿಕ್ಕಿರುವುದು ಖುಷಿಪಡುವ ವಿಚಾರ. ಅಲ್ಲದೆ ಇದೆ ಮೊದಲ ಬಾರಿಗೆ ಅದು ಕನ್ನಡದ ಒಬ್ಬ ನಟಿಗೆ ಈ ಪ್ರಶಸ್ತಿ ದೊರೆಕಿರುವುದು ಇದು ನಿಜಕ್ಕೂ ಹೆಮ್ಮೆಯ ವಿಚಾರ. ಇನ್ನು ನಿಮಗೂ ಕೂಡ ಮೇಘನಾ ರಾಜ್ ಸಾಧನೆ ಇಷ್ಟವಾಗಿದ್ದಾರೆ ಕಾಮೆಂಟ್ ಮಾಡಿ ಶುಭಾಶಯ ತಿಳಿಸಿ.