ಸಾನಿಯಾ ಹಾಗೂ ರೂಪೇಶ್ ಲವ್ವರ್ಸಾ? ಈ ಬಗ್ಗೆ ಸ್ಪಷ್ಟನೆ ನೀಡಿದ ಬಿಗ್ ಬಾಸ್ ಮಾಜಿ ಸ್ಪರ್ಧಿ ಸ್ಫೂರ್ತಿ ಗೌಡ…

Bigboss News

ಬಿಗ್ ಬಾಸ್ ಕನ್ನಡ ಓಟಿಟಿ ಇದೀಗ ಶುರುವಾಗಿ ಎರಡು ವಾರಗಳನ್ನು ಪೂರೈಸಿದೆ. ಇದೀಗ ಮೂರನೇ ವಾರಕ್ಕೆ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದು, ವಾರದಿಂದ ವಾರಕ್ಕೆ ಆಟ ಕಷ್ಟವಾಗುತ್ತಾ ಬರುತ್ತಿದೆ. ಇದೀಗ ಮನೆಯಿಂದ ಈಗಾಗಲೇ 4 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ.

ಮೊದಲ ವಾರದಲ್ಲಿ ಕಿರಣ್ ಕಡಿಮೆ ವೋಟ್ ಪಡೆದ ಕಾರಣ ಮನೆಯಿಂದ ಹೊರಬಂದಿದ್ದರು. ನಂತರ ಲೋಕೇಶ್ ಹಾಗೂ ಅರ್ಜುನ್ ರಮೇಶ್ ಇಬ್ಬರೂ ಆರೋಗ್ಯ ಪರಿಸ್ಥಿತಿ ಸರಿಯಿಲ್ಲದ ಕಾರಣ ಮನೆಯಿಂದ ಹೊರ ಬರಬೇಕಾಯಿತು.

ಇನ್ನು ಈ ವಾರ ಮನೆಯಿಂದ ಸ್ಫೂರ್ತಿ ಗೌಡ ಹೊರ ಬಂದಿದ್ದಾರೆ. ಇನ್ನು ಮನೆಯಿಂದ ಹೊರ ಬಂದಿರುವ ಸ್ಫೂರ್ತಿ ಗೌಡ ಬಿಗ್ ಮನೆಯ ಕೆಲವು ಸೀಕ್ರೆಟ್ ಗಳನ್ನು ಬಿಟ್ಟುಕೊಟ್ಟಿದ್ದಾರೆ. ಹೌದು ಬಿಗ್ ಬಾಸ್ ಮನೆಯವರ ಗೇಮ್ ಪ್ಲಾನ್ ಬಗ್ಗೆ ಸ್ಫೂರ್ತಿ ಮಾತನಾಡಿದ್ದಾರೆ.

ಮನೆಯಿಂದ ಹೊರ ಬಂದ ತಕ್ಷಣ ಸ್ಫೂರ್ತಿ ಅವರನ್ನು ಹಲವು ಮಾಧ್ಯಮದವರು ಇಂಟರ್ವ್ಯೂ ಮಾಡಿದ್ದಾರೆ. ಈ ವೇಳೆ ಸ್ಫೂರ್ತಿ ಅವರಿಗೆ ಸಾಕಷ್ಟು ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ವೇಳೆ ರಾಕೇಶ್ ಹಾಗೂ ಸಾನಿಯಾ ಬಗ್ಗೆ ಸ್ಫೂರ್ತಿ ಅವರಿಗೆ ಕೇಳಿದ ಪ್ರಶ್ನೆಗೆ ನಟಿ ಈ ರೀತಿ ಉತ್ತರಿಸಿದ್ದಾರೆ.

ಸ್ಪೂರ್ತಿ ಗೌಡ, ಸಾನಿಯಾ ಮತ್ತು ರೂಪೇಶ್ ಶೆಟ್ಟಿ ಇಬ್ಬರು ತುಂಬಾ ಒಳ್ಳೆ ಫ್ರೆಂಡ್ಸ್ ಬೇರೆ ಏನು ಇಲ್ಲ . ಎಲ್ಲಿ ಅವರಿಗೆ ಕಂಫರ್ಟ್ ಸೋನಿದೆಯೋ ಅಲ್ಲಿ ಅವರು ಚೆನ್ನಾಗಿದ್ದಾರೆ . ಈಗ ನಾನು ಹಾಗೂ ರಾಕೇಶ್ ಹೇಗೆ ಮಾತನಾಡುತ್ತಿದ್ದೆವು ಹಾಗೆ ಅವರು ಸಾನಿಯಾ ಜೊತೆಗಿದ್ದಾರೆ.

ಸಾನಿಯಾ ಅವರು ಜಶ್ವಂತ್ ಜೊತೆಗೂ ಕೂಡ ಚೆನ್ನಾಗಿದ್ದಾರೆ. ಮತ್ತು ಎಲ್ಲೋ ಒಂದು ಎಲ್ಲರ ನಡುವೆ ಒಂದು ಕನೆಕ್ಷನ್ ಬೆಳೆದಿದೆ, ಮತ್ತು ನಾವು ಬೆಳಿಗ್ಗೆಯಿಂದ ಟಾಸ್ಕ್ ಕಿಚನ್ ಕ್ಲೀನಿಂಗ್ ಇದೆ ಆಗಿರುವುದರಿಂದ ರಾತ್ರಿ ಹೊತ್ತು ಲೈಟ್ ಆಫ್ ಆದ ಮೇಲೆ ಸ್ವಲ್ಪ ಹೊತ್ತು ಫ್ರೀ ಸಿಕ್ಕಾಗ , ಎಲ್ಲಿ ಏನು ತಪ್ಪು ನಡೆದಿದೆ ಬೆಳಗ್ಗೆಯಿಂದ ಏನಾಗಿರಬಹುದು ಏನೇನು ತಪ್ಪು ನಡೆದಿದೆ ಎಂದು ಡಿಸ್ಕಶನ್ ಮಾಡಲು ಆ ಟೈಮ್ ಸಿಗುತ್ತದೆ.

ಅಲ್ಲದೆ ಎಲ್ಲರೂ ಆ ಟೈಮ್ನಲ್ಲಿ ಸಿಗುತ್ತಾರೆ ಮತ್ತು ಆ ಟೈಮಲ್ಲಿ ಎಲ್ಲರೂ ಮಾತನಾಡುತ್ತಾರೆ ಆದರೆ ನನಗೆ ಗೊತ್ತಿಲ್ಲ ಅವರಿಬ್ಬರು ಯಾಕೆ ನೋಟೆಡ್ ಆಗಿದ್ದಾರೆ ಅಂತ. ನಾವೆಲ್ಲರೂ ಅಲ್ಲಿ ಇದ್ದರೂ ಸಹ ಅವರಿಬ್ಬರನ್ನು ಮಾತ್ರ ಕೆಲವು ಸಾರಿ ಬೆರಳು ಮಾಡಿ ತೋರಿಸುತ್ತಾರೆ ಏಕೆ ಎಂದು ಮಾತ್ರ ನನಗೆ ತಿಳಿದಿಲ್ಲ ಎಂದಿದ್ದಾರೆ ಸ್ಫೂರ್ತಿ ಗೌಡ.

Leave a Reply

Your email address will not be published. Required fields are marked *