ಇತ್ತೀಚಿನ ದಿನಗಳಲ್ಲಿ ಹೊಸ ಪ್ರತಿಭೆಗಳು ಸಿನಿಮಾರಂಗಕ್ಕೆ ಬಂದರೂ ಸಹ ಆ ಸಿನಿಮಾ ಹೇಗಿರುತ್ತದೆಯೋ ಏನೋ ಎನ್ನುವ ಕಾರಣದಿಂದ ಅಷ್ಟರ ಮಟ್ಟಿಗೆ ಅವರ ಸಿನಿಮಾಗಳಿಗೆ ವೀಕ್ಷಕರು ಪ್ರೋತ್ಸಾಹ ನೀಡುತ್ತಿಲ್ಲ. ಇದೀಗ ಇದೆ ಸಾಲಿಗೆ ಮತ್ತೊಂದು ಸಿನಿಮಾ ಸೇರಿಕೊಂಡಿದೆ.
ಕನ್ನಡದ ನಿರ್ದೇಶಕ ಶಶಾಂಕ್ ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ಲವ್ 360 ಸಿನಿಮಾ ಇದೀಗ ಕಲೆಕ್ಷನ್ ವಿಚಾರದಲ್ಲಿ ಬಹಳ ಹಿಂದೆ ಉಳಿದಿದೆ. ಇದೀಗ ಈ ಬಗ್ಗೆ ಸ್ವತಃ ನಿರ್ದೇಶಕ ಶಶಾಂಕ್ ವೀಕ್ಷಕರಲ್ಲಿ ಮನ ಬಿಚ್ಚಿ ಮಾತನಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಶಶಾಂಕ್ ಮಾತನಾಡುತ್ತಾ ಇದ್ದೇನೆ . ನಿಮ್ಮ ಫೇವರೆಟ್ ಜಗವೆ ನೀನು ಹೇಳುತ್ತಿಯ ಹಾಡಿರುವ, ನನ್ನ ನಿರ್ದೇಶನ ಮತ್ತು ನಿರ್ಮಾಣದ ಲವ್ 360 ಸಿನಿಮಾ ಮೊನ್ನೆ ಶುಕ್ರವಾರ ಬಿಡುಗಡೆಯಾಗಿದೆ.
ಒಂದು ಖುಷಿ ವಿಚಾರ ಏನಪ್ಪಾ ಅಂತ ಅಂದರೆ ಮೊನ್ನೆ ಸಿನಿಮಾ ನೋಡಿದ ಪ್ರೇಕ್ಷಕರು ಮತ್ತು ಮಾಧ್ಯಮದಿಂದ ಒಳ್ಳೆ ಪ್ರಶಂಸೆ ವ್ಯಕ್ತವಾಗಿದೆ. ಆದರೆ ಬೇಸರದ ಸಂಗತಿ ಏನಪ್ಪಾ ಅಂದ್ರೆ ಕಲೆಕ್ಷನ್ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ?
ಬೆಂಗಳೂರಿನ ಕೆಲವು ನಿರೀಕ್ಷಿತ ಮಂದಿರಗಳಲ್ಲಿ ಮಾತ್ರ ಅಂದುಕೊಂಡಷ್ಟು ಕಲೆಕ್ಷನ್ ಆಗುತ್ತಿದೆ. ಹೊಸಬರ ಸಿನಿಮಾ ಆಗಿರುವುದರಿಂದ ಮತ್ತು ಸಿನಿಮಾ ಹೇಗಿದೆ ಎಂದು ಗೊತ್ತಾಗುವವರೆಗೂ ಜನ ಬರುವುದಿಲ್ಲ , ಎಂಬ ನಿರೀಕ್ಷೆ ನಮಗೂ ಇತ್ತು. ಆದರೆ ಶನಿವಾರದಿಂದ ಪಿಕಪ್ ಆಗಬಹುದು ಕಲೆಕ್ಷನ್ ನಲ್ಲಿ ಎಂಬ ನಿರೀಕ್ಷೆ ನಮ್ಮಲ್ಲೂ ಇತ್ತು.
ಅದು ನಿಜವಾಗಿಲ್ಲ ಮೊನ್ನೆ ಭಾನುವಾರ ಇಂದು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಆಗಿಲ್ಲ ಎಂದರೆ ನಾವು ಚಿತ್ರಮಂದಿರಗಳನ್ನ ಕೊಳ್ಳುವ ಪರಿಸ್ಥಿತಿ ಬರುತ್ತದೆ . ಹೊಸ ಪ್ರತಿಭೆಗಳನ್ನು ಇಟ್ಟುಕೊಂಡು ಒಂದು ಒಳ್ಳೆ ಸಿನಿಮಾ ಮಾಡಿದರು ಸಹ ರ್ನಿಮಾಪಕರಾಗಿ ನಷ್ಟಗಳನ್ನು ಅನುಭವಿಸುವ ಸಾಧ್ಯತೆ ಇರುತ್ತದೆ.
ಕನ್ನಡ ಸಿನಿಮಾನವನ್ನು ಪ್ರೀತಿಸುವ ಹಾಗೂ ಕನ್ನಡ ಸಿನಿಮಾದ ಬಗ್ಗೆ ಕಾಳಜಿ ಇರುವ ಎಲ್ಲರಿಗೂ ನಾನು ಕೈಮುಗಿದು ಕೇಳಿಕೊಳ್ಳುತ್ತೇನೆ . ಎಲ್ಲರೂ ಆದಷ್ಟು ಬೇಗ ಚಿತ್ರ ಮಂದಿರ ಗಳಿಗೆ ಹೋಗಿ ನೋಡಿ ಕುಶಲ್ ಮೀಡಿಯಾದಲ್ಲಿ ನಮ್ಮ ಚಿತ್ರದ ಪ್ರಚಾರಕ್ಕೆ ನಮಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ.