ನಮಸ್ಕಾರ ವೀಕ್ಷಕರೆ ಮೇಘನಾ ರಾಜ್ ಸರ್ಜಾ ಬಹು ಭಾಷೆಯಲ್ಲಿ ನಟಿಸಿ ಹೆಸರು ಮಾಡಿರುವ ನಟಿ. ಚಿರಂಜೀವಿ ಅವರದ್ದು ಮೇಘನಾ ಅವರ ಜೊತೆ ಪ್ರೇಮ ವಿವಾಹ. ಅವರ ಮದುವೆಯಾಗಿ ಕೇವಲ ನಾಲ್ಕು ವರ್ಷಗಳಾಗಿತ್ತು ಅಷ್ಟೇ . ಚಿರಂಜೀವಿ ಮತ್ತು ಮೇಘನ ಬಹಳಷ್ಟು ಕಾಲ ಅಂದರೆ ಸುಮಾರು ಎಂಟು ವರ್ಷಗಳ ಕಾಲ ಪರಸ್ಪರ ಪ್ರೀತಿಸಿ ಮದುವೆಯಾದರು.
ಆದರೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟರು ರಾಜ್ಯಕ್ಕೆ ರಾಜ್ಯವೇ ಚಿರು ಅವರ ನಿಧನಕ್ಕೆ ಕಣ್ಣೀರು ಹಾಕಿತ್ತು ಮೇಘನಾ ಅವರು ಆಗ ಐದು ತಿಂಗಳ ಗರ್ಭಿಣಿ, ಚಿರು ನೆನಪನ್ನೇ ಜೀವಂತವಾಗಿಟ್ಟು ಅವರು ರಾಯನ್ ರಾಜ್ ಸರ್ಜಾ ಅವರಿಗೆ ಜನ್ಮ ನೀಡಿದರು.
ಸಾಕಷ್ಟು ಸಮಯದ ನಂತರ ಅವರು ಮನೋರಂಜನ ಮಾಧ್ಯಮಕ್ಕೆ ಮತ್ತೆ ಮರಳಿದ್ದಾರೆ . ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ ಇದು ಅವರ ಇತ್ತೀಚಿನ ಚಿತ್ರ ಮತ್ತು ಇತ್ತೀಚಿನ ಮಾಧ್ಯಮದ ಸಂದರ್ಶನದಲ್ಲಿ ಮೇಘನಾ ರಾಜ್ ಅವರು ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ನಾನು ನಮ್ಮ ಸಮಾಜದ ಮೈಂಡ್ ಸೆಟ್ ಬಗ್ಗೆ ಯೋಚಿಸುತ್ತಿರುತ್ತೇನೆ ಇಲ್ಲಿ ಕೆಲವರು ನನಗೆ ಮರು ವಿವಾಹದ ಬಗ್ಗೆ ಸಲಹೆ ನೀಡುತ್ತಾರೆ ಇನ್ನೂ ಕೆಲವರು ನಿಮ್ಮ ಮಗನ ಜೊತೆ ಸಂತೋಷದಿಂದಿರಿ ಮತ್ತು ಮರು ಮದುವೆಯ ಮಾತು ಬೇಡ? ಸೋ ನಾನು ಯಾರು ಮಾತು ಕೇಳಲಿ ಎಂದು ಮೇಘನಾ ಹೇಳಿದ್ದಾರೆ.
ಆದರೆ ಮೇಘನಾ ಹೇಳಿದಂತೆ ಅವರಿನ್ನು ಮರು ವಿವಾಹದ ಬಗ್ಗೆ ಯೋಚನೆ ಮಾಡಿಲ್ಲ . ಚಿರು ನನ್ನ ಜೊತೆಗೆ ಅವರ ಯೋಚನಾ ಕ್ರಮವನ್ನು ಬಿಟ್ಟು ಹೋಗಿದ್ದಾರೆ ಅವರೇ ಹೇಳಿರುವಂತೆ ನಾಳೆ ಏನಾಗುತ್ತದೆ ಎನ್ನುವುದರ ಬಗ್ಗೆಯಾಗಲಿ , ಮುಂದಿನ ದಿನದ ನನ್ನ ಬದುಕು ಹೇಗೆ ಇರುತ್ತದೆ ಎನ್ನುವುದರ ಬಗ್ಗೆ ಆಗಲಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ ನಾನು ಈ ಕ್ಷಣದಲ್ಲಿ ಜೀವಿಸುವವಳು.
ಕೆಲವರು ನೀವು ಇತ್ತೀಚಿಗೆ ಚಿರು ಅವರ ಫೋಟೋವನ್ನು ಪೋಸ್ಟ್ ಮಾಡುತ್ತಿಲ್ಲ ಚಿರುವವರನ್ನು ಮರೆತಿದ್ದೀರಿ ಎಂಬ ಮಾತುಗಳನ್ನೆಲ್ಲ ಹೇಳಿದ್ದಾರೆ. ನಾನು ಚಿರು ಅವರ ಮೇಲಿನ ಪ್ರೀತಿಯನ್ನು ಫೋಟೋ ಹಾಕುವ ಮೂಲಕ ಪ್ರೂವ್ ಮಾಡಬೇಕಿಲ್ಲ.
ನಾನು ಆತನ ಬಗ್ಗೆ ಯಾವಾಗ ಯೋಚಿಸುತ್ತೇನೆ ಎನ್ನುವುದನ್ನು ಹೇಳಬೇಕಿಲ್ಲ. ಅದು ಸಂಪೂರ್ಣವಾಗಿ ನನ್ನೊಬ್ಬಳೇ ಸಂಬಂಧಿಸಿದ್ದು ನನ್ನ ಬದುಕಿನ ಎಲ್ಲಾ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತೇನೆ . ಏನೇ ನಿರ್ಧಾರ ತೆಗೆದುಕೊಂಡರು ಅದರ ಹಿಂದೆ ಚಿರು ಇರುತ್ತಾರೆ.
ನನ್ನ ಮನಸ್ಸಿನ ಮಾತಷ್ಟೆ ಕೇಳಬೇಕು ಅನ್ನುವುದನ್ನೇ ಬದುಕಿನ ಕೊನೆಯವರೆಗೂ ಪಾಲಿಸಿಕೊಂಡು ಬರುತ್ತೇನೆ . ಎನ್ನುವ ಮಾತುಗಳನ್ನ ಮೇಘನಾ ಅವರು ಹೇಳಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.