ಜೊತೆಜೊತೆಯಲಿ ಧಾರವಾಹಿಗೆ ಅನಿರುದ್ಧ ಪಾತ್ರಕ್ಕೆ ಹೊಸ ನಾಯಕನ ಎಂಟ್ರಿ…ನೋಡಿ

curious

ನಮಸ್ಕಾರ ವೀಕ್ಷಕರೇ ವಿಭಿನ್ನ ಕಥೆ ಹೊಂದಿದ್ದ ಜೊತೆ ಜೊತೆಯಲಿ ಧಾರಾವಾಹಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಮತ್ತು ಟಿ ಆರ್ ಪಿ ರೇಟ್ ನಲ್ಲೂ ಸದಾ ಮುಂದಿದ್ದ ಧಾರವಾಹಿಯಲ್ಲಿ ಒಳಗೊಳಗೆ ಮಾತ್ರ ಯಾವುದು ಸರಿ ಇಲ್ಲ ಎಂಬ ಮಾತುಗಳು ಇತ್ತೀಚಿಗೆ ಗೊತ್ತಾಗಿದೆ.

ಈಗ ಅನಿರುದ್ಧವರನ್ನು ಕಿರುತೆರೆಯಿಂದ ಎರಡು ವರ್ಷಗಳ ಕಾಲ ಬ್ಯಾನ್ ಮಾಡಲಾಗಿದೆ. ಆದರೆ ಅನಿರುದ್ಧ ಅವರು ಮಾತ್ರ ಅವಕಾಶ ನೀಡಿದರೆ ಮತ್ತೆ ದಾರವಹಿಯಲ್ಲಿ ನಟಿಸುವುದಾಗಿ ಹೇಳಿದ್ದಾರೆ. ಆದರೆ ನಿರ್ದೇಶಕರು ಮಾತ್ರ ಇದಕ್ಕೆ ಸಮ್ಮತಿ ನೀಡುತ್ತಿಲ್ಲ.

ಇದೀಗ ಆರ್ಯವರ್ಧನ್ ಪಾತ್ರಕ್ಕೆ ಹೊಸ ನಟನ ಆಯ್ಕೆಯಾಗಿದೆ ಎನ್ನಲಾಗುತ್ತಿದೆ. ಆರ್ಯವರ್ಧನ್ ಪಾತ್ರಕ್ಕೆ ಇದೀಗ ಒಳ್ಳೆಯ ನಟನನ್ನೆ ತರಬೇಕಾದ ಅನಿವಾರ್ಯತೆ ಧಾರವಾಹಿ ತಂಡಕ್ಕಿದೆ . ಆ ಪಾತ್ರಕ್ಕೆ ಜೀವ ತುಂಬಲ್ಲ ಹಾಗೂ ಅನಿರುದ್ಧ ಗಿಂತ ಖಡಕ್ಕಾಗಿ ಇರುವ ನಟನ ಅವಶ್ಯಕತೆ ಇದೆ.

ಇದೇ ಕಾರಣಕ್ಕೆ ಈಗ ಧಾರಾವಾಹಿ ತಂಡ ಹಲವು ನಟರ ಆಡಿಷನ್ ಮಾಡಿದ್ದು ಅದರಲ್ಲಿ ಒಬ್ಬ ನಟನನ್ನು ಫೈನಲ್ ಮಾಡಲಾಗಿದೆಯಂತೆ . ಆರ್ಯವರ್ಧನ್ ಪಾತ್ರಕ್ಕೆ ಅಶ್ವಿನಿ ನಕ್ಷತ್ರದ ಫೇಮಸ್ ಪಾತ್ರಧಾರಿ ಜೆಕೆ ಅಲಿಯಾಸ್ ಜೈರಾಮ್ ಕಾರ್ತಿಕ್ ಅವರು ಬರ್ತಾರೆ ಎನ್ನಲಾಗುತ್ತಿದೆ .

ಅಶ್ವಿನಿ ನಕ್ಷತ್ರದಲ್ಲಿ ಜೆಕೆ ಪಾತ್ರವನ್ನು ಜನ ಬಹಳಷ್ಟು ಮೆಚ್ಚಿಕೊಂಡಿದ್ದರು ಇಲ್ಲಿಯೂ ಕೂಡ ಅದೇ ಗತ್ತಿನ ಅವಶ್ಯಕತೆ ಇರುವುದರಿಂದ ಜೆಕೆ ಅವರನ್ನು ಆಯ್ಕೆ ಮಾಡಲಾಗುತ್ತಿದೆ ಎನ್ನಲಾಗಿದೆ ಇದೇ ಅಲ್ಲದೆ ಜೆಕೆ ಅವರನ್ನು ಆಯ್ಕೆ ಮಾಡಿಕೊಳ್ಳಲು ಬೇರೆ ಕಾರಣಗಳು ಇವೆ.

ಈ ಹಿಂದೆ ಅಶ್ವಿನಿ ನಕ್ಷತ್ರವನ್ನು ಆರೂರು ಜಗದೀಶ್ ಅವರೇ ನಿರ್ದೇಶನ ಮಾಡಿದ್ದು . ಜೆಕೆ ಮತ್ತು ಆರೂರು ಜಗದೀಶ್ ಅವರ ನಡುವೆ ಒಳ್ಳೆಯ ಬಾಂಧವ್ಯ ಇರುವುದನ್ನು ಮತ್ತು ಆ ಜೋಡಿ ಯಶಸ್ಸನ್ನು ನೀಡಿತು ಈ ಕಾರಣಕ್ಕೆ ಆರ್ಯವರ್ಧನ್ ಪಾತ್ರಕ್ಕೆ ಜೆ ಕೆ ಬರಬಹುದು ಎನ್ನಲಾಗುತ್ತಿದೆ .

ಜೆಕೆ ಅವರು ಆರ್ಯವರ್ಧನ್ ಪಾತ್ರವನ್ನು ಹೇಗೆ ನಿಭಾಯಿಸುತ್ತಾರೆ. ಜೆಕೆ ಈ ಪಾತ್ರಕ್ಕೆ ಸೂಟ್ ಆಗುತ್ತಾರೋ ಇಲ್ಲವೋ ಎಂಬುದು ಸದ್ಯದ ಪ್ರಶ್ನೆ ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *