ಮೇಘನಾ ರಾಜ್ ಅವರು ಸ್ಯಾಂಡಲ್ವುಡ್ ನ ಖ್ಯಾತ ನಟಿಯಾಗಿದ್ದು . ಉದ್ಯೋನ್ಮುಖ ನಟಿಯಾಗಿ ಸ್ಯಾಂಡಲ್ವುಡ್ ಅಲ್ಲಿ ಮಿಂಚುತ್ತಿರುವ ವೇಳೆಯಲ್ಲಿ ನಟ ಚಿರಂಜೀವಿ ಸರ್ಜಾ ಅವರ ಜೊತೆ ಪ್ರೀತಿ ನಂತರ ಮದುವೆ ನಂತರ ಸಾವಿರಾರು ಕನಸಿನ ಜೊತೆ ಹೊಸ ಜೀವನದ ಆರಂಭ ಮಾಡಿದ್ದರು.
ಆದರೆ ಆ ಹೊಸ ಜೀವನದ ಆರಂಭ ಪ್ರಾರಂಭದಲ್ಲಿ ಅಂತ್ಯವಾಗಿದ್ದು ನಿಜಕ್ಕೂ ಅವರ ಜೀವನದ ಪರಿಸ್ಥಿತಿ ಕಣ್ಣೀರು ತರಿಸುವಂತಿತ್ತು . ಚಿರು ಇಲ್ಲದ ನೋವಿನ ಜೊತೆಯೇ ಮಗನ ಹಾರೈಕೆಯ ಜೊತೆ ವರ್ಷಗಳನ್ನು ಕಳೆದ ಮೇಘನಾ ರಾಜ್ ಮತ್ತೆ ತೆರೆಯ ಮೇಲೆ ಕಾಣಿಸಿಕೊಳ್ಳುವ ಮೂಲಕ ತಮ್ಮ ವೃತ್ತಿ ಬದುಕಿನ ಆರಂಭ ಮಾಡಿದ್ದಾರೆ.
ಹಲವು ಸಿನಿಮಾಗಳ ಜೊತೆಗೆ ಕಿರುತೆರೆಯ ಶೋ ಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಾಲು ಸಾಲು ಜಾಹೀರಾತುಗಳಲ್ಲೂ ಕಾಣಿಸಿಕೊಳ್ಳುತ್ತಿದ್ದು . ಇದೀಗ ಮೇಘನಾ ರಾಜ್ ತಮ್ಮ ಎರಡನೇ ಮದುವೆಯ ಬಗ್ಗೆ ಮಾತನಾಡಿದ್ದು ನನ್ನ ಜೀವನದ ನಿರ್ಧಾರ ನನ್ನದು ಎಂದಿದ್ದಾರೆ.
ಹೌದು ಕೆಲವರು ಕೆಲ ದಿನದ ಹಿಂದಷ್ಟೇ, ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಮೇಘನಾ ಅವರು ಚಿರು ಅವರನ್ನು ಮರೆತು ತಮ್ಮ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದು ಅದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ ನಟಿ ಮೇಘನಾ ರಾಜ್.
ನಾನು ಯಾವುದನ್ನು ಯಾರಿಗೂ ಸಾಬೀತು ಮಾಡಬೇಕಿಲ್ಲ ಅಷ್ಟೇ ಅಲ್ಲದೆ ತುಂಬಾ ಖುಷಿಯಾಗಿರುವ ಮೇಘನಾ ರಾಜ್ ಅವರು ಆಗಾಗ ಡ್ಯಾನ್ಸ್ ಕೂಡ ಮಾಡುತ್ತಾ ಅದನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.
ಇದೀಗ ತಮಿಳಿನ ಹಾಬೀಬಾ ಹಾಡಿಗೆ ಡ್ಯಾನ್ಸ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ವಿಡಿಯೋ ನೋಡಿ ಕೆಲವರು ಮೇಘನಾ ಅವರ ಸಕ್ಕತ್ ಡ್ಯಾನ್ಸ್ ಗೆ ಫಿದಾ ಆಗಿದ್ದಾರೆ. ಇನ್ನು ಕಾಮೆಂಟ್ ಮಾಡುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಇದೀಗ ಸಿನಿಮಾರಂಗಕ್ಕೆ ಮರಳಿರುವ ನಟಿ ಮೇಘನಾ ರಾಜ್ ಸದ್ಯ ಸೋಷಿಯಲ್ ಮಿಡಿಯಾ ಹಾಗೂ ಸಿನಿಮಾರಂಗದಲ್ಲಿ ಸಕತ್ ಬ್ಯುಸಿಯಾಗಿದ್ದಾರೆ. ನಿಮಗೂ ಮೇಘನಾ ಎಂದರೆ ಇಷ್ಟವಾದರೆ ತಪ್ಪದೇ ಕಮೆಂಟ್ ಮಾಡಿ ತಿಳಿಸಿ.