ನಮಸ್ಕಾರ ವೀಕ್ಷಕರೆ ಬಿಗ್ ಬಾಸ್ ಮನೆಯಲ್ಲಿ ಈಗ ಅಸಲಿ ಆಟ ಶುರುವಾಗಿದೆ. ಈ ಬಾರಿ ಓ ಟಿ ಟಿ ಯಲ್ಲಿ ಈ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ.
ದಿನದಿಂದ ದಿನಕ್ಕೆ ಸ್ಪರ್ಧಿಗಳ ಅಸಲಿ ಮುಖ ರಿವಿಲ್ ಆಗುತ್ತಿದೆ . 16 ಸ್ಪರ್ಧಿಗಳಿಂದ ಶುರುವಾದ ಈ ಶೋ ಈಗ 12 ಜನರ ನಡುವಿನ ಪೈಪೋಟಿ ನಡೆಯಲಿದೆ.
ಪ್ರತಿವಾರ ಕಿಚ್ಚ ಅವರು ಎಲ್ಲರನ್ನೂ ಕೂರಿಸಿ ಪಂಚಾಯಿತಿ ಮಾಡುತ್ತಾರೆ. ಪ್ರತಿಯೊಬ್ಬರ ಪ್ಲಸ್ ಹಾಗೂ ಮೈನಸ್ ಗಳನ್ನು ಅವರು ಗಮನಿಸಿ ಹೇಳುತ್ತಾರೆ. ಕೆಲವೊಮ್ಮೆ ಖಡಕ್ ಆಗಿ ಎಚ್ಚರಿಕೆಯನ್ನು ನೀಡುತ್ತಾರೆ.
ಈ ವಾರ ಜಶ್ವ್ಂತ್ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ ಅದಕ್ಕೆ ಕಾರಣ ಕೂಡ ಇದೆ ಗರ್ಲ್ ಫ್ರೆಂಡ್ ನಂದು ಜೊತೆಗಿನ ಅತಿಯಾದ ಒಡನಾಟದ ಕಾರಣದಿಂದ ಜಶ್ವಂತ್ ಅವರಿಗೆ ಈ ಪರಿಸ್ಥಿತಿ ಬಂದಿದೆ.
ಆರಂಭದಲ್ಲಿ ಜಶ್ವಂತ್ ಮತ್ತು ನಂದು ಜೋಡಿಯಾಗಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು. ಕೆಲವೇ ದಿನಗಳಲ್ಲಿ ಅವರಿಬ್ಬರೂ ಪ್ರತ್ಯೇಕವಾಗಿ ಆಟ ನಡೆಸಬೇಕು ಎಂಬುದನ್ನು ಬಿಗ್ ಬಾಸ್ ತಿಳಿಸಿದರು.
ಆದರೂ ಕೂಡ ಜಶ್ವಂತ್ ವರ್ತನೆಯಲ್ಲಿ ಹೆಚ್ಚಿನ ಬದಲಾವಣೆ ಕಾಣಿಸಲಿಲ್ಲ ಕಿಚ್ಚ ಸುದೀಪ್ ಗಮನಿಸಿದ್ದಾರೆ.
ಈ ವಾರದ ಪಂಚಾಯಿತಿಯಲ್ಲಿ ಇದನ್ನು ನೇರವಾಗಿ ಜಶ್ವಂತ್ ಅವರಿಗೆ ಹೇಳಿದ್ದಾರೆ. ಪ್ರತೀವಾರ ಎಲ್ಲರೂ ಕೂಡ ನಾಮಿನೇಟ್ ಮಾಡಬೇಕು ಅದನ್ನು ತಮ್ಮ ಸ್ವಂತ ನಿರ್ಧಾರದಿಂದ ನಾಮಿನೇಟ್ ಮಾಡಬೇಕೆ ಹೊರತು ಇನ್ನೊಬ್ಬರ ಜೊತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರುವಂತಿಲ್ಲ.
ಆದರೆ ಜಶ್ವ್ಂತ್ ಅವರು ಆ ನಿಯಮ ಮುಂದುವರಿಸಿದ್ದಾರೆ. ನಂದು ಅವರ ಜೊತೆ ನಾಮಿನೇಷನ್ ಬಗ್ಗೆ ಚರ್ಚೆ ನಡೆಸಿದ್ದರು. ಅದನ್ನು ಗಮನಿಸಿದ ಸುದೀಪ್ ಅವರು ಎಚ್ಚರಿಕೆ ನೀಡಿದ್ದಾರೆ ಮುಂದಿನ ಬಾರಿ ಈ ರೀತಿ ಮಾಡಿದರೆ ನಿಮಗೆ ಬಾಗಿಲು ತೋರಿಸಬೇಕಾಗುತ್ತದೆ.
ನೀವಿಬ್ಬರೂ ಬೇರೆ ಬೇರೆ ಸ್ಪರ್ಧಿಗಳಾಗಿ ಆಡ್ತಾ ಇದ್ದೀರಿ ಹಾಗಿದ್ದಲ್ಲಿ ಚರ್ಚೆ ಮಾಡಿಕೊಂಡು ನಾಮಿನೇಟ್ ಮಾಡುವಂತಿಲ್ಲ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ . ಇದನ್ನು ಜಶ್ವಂತ್ ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು. ಈ ಮಾಹಿತಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ.