ನಟಿ ದೀಪಿಕಾ ದಾಸ್ ಹಾಗೂ ನಟ ಯಶ್ ಇಬ್ಬರೂ ಅಣ್ಣ-ತಂಗಿಯಾದರೂ ಎಲ್ಲಿಯೂ ಈ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ ಯಾಕೆ ಗೊತ್ತಾ?..

ಸ್ಯಾಂಡಲವುಡ್

ನಮಸ್ಕಾರ ವೀಕ್ಷಕರೇ ನಟಿ ದೀಪಿಕಾ ದಾಸ್ ಎಲ್ಲರಿಗೂ ಸಹ ಚಿರಪರಿಚಿತ . ಏಕೆಂದರೆ ಜೀ ಕನ್ನಡ ವಾಹಿನಿಯಲ್ಲಿ ಮೂಡಿ ಬರುತ್ತಿದ್ದಂತ ನಾಗಿಣಿ ಎಂಬ ಧಾರವಾಹಿಯಲ್ಲಿ ಇವರು ನಟನೆ ಮಾಡುತ್ತಿದ್ದರು ನಂತರ ಡಿಕೆಡಿ ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದರು.

ನಂತರ ಬಿಗ್ ಬಾಸ್ ಸೀಸನ್ 6 ರಲ್ಲಿ ಇವರು ಭಾಗವಹಿಸಿದ್ದರು ಈ ಪ್ರತಿಯೊಂದು ಕಾರ್ಯಕ್ರಮದಿಂದ ದೀಪಿಕಾ ದಾಸ್ ಅವರು ಇನ್ನಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡರು .
ಬಿಗ್ ಬಾಸ್ ಕ್ಷೇತ್ರದಿಂದ ಹೊರಗೆ ಬಂದ ಬಳಿಕ ದೀಪಿಕಾ ದಾಸ್ ಮಾಡ್ಲಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಿರುತೆರೆಯಲ್ಲಿ ಸದ್ಯಕ್ಕೆ ಕೆಲಸ ಮಾಡಿದೆ ಇದ್ದರೂ ಕೂಡ , ಮಾಡ್ಲಿಂಗ್ ಕ್ಷೇತ್ರದಲ್ಲಿ ಸಿಕ್ಕಾಪಟ್ಟೆ ಬಿಸಿಯಾಗಿದ್ದಾರೆ. ಜೊತೆಗೆ ಹಲವಾರು ಫ್ಯಾಷನ್ ಶೋಗಳಲ್ಲಿ ಕೂಡ ಭಾಗವಹಿಸುತ್ತಿದ್ದಾರೆ . ಇದೆಲ್ಲ ಒಂದು ಕಡೆಯಾದರೆ ಮತ್ತೊಂದು ಕಡೆ ದೀಪಿಕಾ ದಾಸ್ ಅವರು ರಾಕಿಂಗ್ ಸ್ಟಾರ್ ಯಶ್ ಅವರ ತಂಗಿ ಎಂಬ ವಿಚಾರ ಸಾಕಷ್ಟು ಜನರಿಗೆ ತಿಳಿದಿಲ್ಲ.

ಮುಖ್ಯ ಕಾರಣ ಎಂದರೆ ದೀಪಿಕಾ ದಾಸ್ ಅವರು ರಾಕಿಂಗ್ ಸ್ಟಾರ್ ಯಶ್ ತಮ್ಮ ಅಣ್ಣ ಎಂಬ ವಿಚಾರ ಎಲ್ಲಿಯೂ ಕೂಡ ರಿವೀಲ್ ಮಾಡಿಲ್ಲ.
ಇದಕ್ಕೆ ಬೇರೆ ಕಾರಣವೂ ಇದೆ ಹೌದು ರಾಕಿಂಗ್ ಸ್ಟಾರ್ ಯಶ್ ಅವರ ಸ್ವಂತ ಚಿಕ್ಕಮ್ಮನ ಮಗಳೇ ದೀಪಿಕಾ ದಾಸ್ ಇವರಿಬ್ಬರ ನಡುವೆ ಅವಿನಾಭಾವ ಸಂಬಂಧವಿದ್ದರೂ ಕೂಡ ಎಲ್ಲಿಯೂ ಕೂಡ ಯಶ್ ಆಗಲಿ ದೀಪಿಕಾ ಆಗಲಿ ನಾವಿಬ್ಬರು ಅಣ್ಣ ತಂಗಿಯರು ಎಂಬ ಮಾತನ್ನು ಹೇಳಿಕೊಂಡಿಲ್ಲ .

ಇದಕ್ಕೆ ಮುಖ್ಯ ಕಾರಣ ಎಂದರೆ ದೀಪಿಕಾ ದಾಸ್ ಅವರು ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬರಬೇಕೆಂದಿದ್ದಾರಂತೆ . ಒಂದು ವೇಳೆ ನಾನು ಯಶ್ ತಂಗಿ ಎಂದು ಹೇಳಿಕೊಂಡರೆ ? ಆ ಒಂದು ಇನ್ಫ್ಲುಯೆನ್ಸ್ ಮೂಲಕ ನನಗೆ ಕೀರ್ತಿ ಮತ್ತು ಅವಕಾಶ ದೊರೆಯಬಹುದು ಆದರೆ ಅಂತಹ ಅವಕಾಶಗಳು ತುಂಬಾ ದಿನ ಉಳಿಯುವುದಿಲ್ಲ.

ಹಾಗಾಗಿ ನಾನು ನನ್ನ ಸ್ವಂತ ಪರಿಶ್ರಮದಿಂದ ಮುಂದೆ ಬರುವುದಕ್ಕೆ ಆಸೆ ಪಡುತ್ತೇನೆ .
ನನ್ನ ಅಣ್ಣನ ಹೆಸರನ್ನು ಹೇಳಿ ಆ ಹೆಸರಿನಿಂದ ನನಗೆ ಕೀರ್ತಿಯನ್ನು ಗಿಟ್ಟಿಸಿಕೊಳ್ಳಲು ಇಷ್ಟವಿಲ್ಲ ಎನ್ನುವುದನ್ನು ಅವರು ಹೇಳಿಕೊಂಡಿದ್ದಾರೆ.

ದೀಪಿಕಾ ದಾಸ್ ಅವರ ಈ ನಿರ್ಧಾರವನ್ನು ನಾವೆಲ್ಲರೂ ಮೆಚ್ಚಲೇಬೇಕು, ಈಗಿನ ಕಾಲದಲ್ಲಿ ಸಹ ತಮ್ಮ ಸ್ವಂತ ಪರಿಶ್ರಮದಿಂದ ಮೇಲೆ ಬರಬೇಕು ಎಂದುಕೊಳ್ಳುವ ನಟ ದೀಪಿಕಾ ಅವರ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ.

Leave a Reply

Your email address will not be published. Required fields are marked *