ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಯಾಗಿದ್ದ ಮಾಡ್ರನ್ ರೈತ ಶಶಿಕುಮಾರ್, ತಮ್ಮ ಉತ್ತಮ ಆಟ ಹಾಗೂ ಅವರ ಗುಣಗಳ ಮೂಲಕ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು. ನಂತರ ಬಿಗ್ ಬಾಸ್ ಸೀಸನ್ 6 ರ ವಿನ್ನರ್ ಆಗಿ ಹೊರ ಬಂದರು ಶಶಿ ಕುಮಾರ್.
ಇನ್ನು ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ತಮ್ಮ ತೋಟದ ವ್ಯವಸಾಯ ಕೆಲಸಗಳಲ್ಲಿ ಬ್ಯುಸಿಯಾಗಿರುವ ಶಶಿ ಕುಮಾರ್, ಇದೀಗ ತಮ್ಮ ಹೊಸ ಮನೆಯ ಗೃಹಪ್ರವೇಶ ಮಾಡಿದ್ದಾರೆ. ಹೊಸ ಮನೆ ಗೃಹಪ್ರವೇಶದ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ ಶಶಿಕುಮಾರ್.
ಬಿಗ್ ಬಾಸ್ ಸೀಸನ್ 6 ನ್ನು ಗೆದ್ದು ಜನರ ಪ್ರೀತಿಯನ್ನು ಪಡೆದು ಹೊರಬಂದ ಶಶಿಕುಮಾರ್ ತಾವು ಕಂಡಿದ್ದ ಕನಸುಗಳನ್ನು ಒಂದೊಂದಾಗಿ ಈಡೇರಿಸಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ ಸೀಸನ್ ನಲ್ಲಿ ತಮ್ಮ ಆಟದ ಮೂಲಕ ಜನರ ಪ್ರೀತಿಯನ್ನು ಸಂಪಾದಿಸಿದರು.
ಬಿಗ್ ಬಾಸ್ ಮನೆಯಲ್ಲಿಯೇ ಹಲವಾರು ಕನಸುಗಳನ್ನು ಹೊಂದಿದ್ದ ಶಶಿಕುಮಾರ್ ಮನೆಯಿಂದ ಹೊರ ಬಂದು ಒಂದೊಂದಾಗಿ ಕನಸುಗಳನ್ನು ಈಡೇರಿಸಿಕೊಳ್ಳುತ್ತಿದ್ದಾರೆ ಶಶಿಕುಮಾರ್. ಸಾಮಾನ್ಯ ಸ್ಪರ್ಧಿಯಾಗಿ ಒಳ ಹೋಗಿದ್ದ ಶಶಿ ಈಗ ಸೆಲೆಬ್ರಿಟಿಯಾಗಿ ಮಿಂಚುತ್ತಿದ್ದಾರೆ.
ಈಗ ತಮ್ಮ ಬಹುದೊಡ್ಡ ಕನಸು ಹೊಸ ಮನೆಯನ್ನು ಖರೀದಿಸಿದ್ದಾರೆ . ಅಂದಹಾಗೆ ಅಗಸ್ಟ್ ಆರು ಮತ್ತು ಏಳರಂದು ಶಶಿಕುಮಾರ್ ದೊಡ್ಡಬಳ್ಳಾಪುರದ ಸ್ವಾತಿ ಎಂಬ ಹುಡುಗಿಯೊಂದಿಗೆ ಅದ್ದೂರಿಯಾಗಿ ವಿವಾಹವಾಗಿದ್ದರು.
ಇನ್ನು ಬಿಗ್ ಬಾಸ್ ಬಳಿಕ ಶಶಿಕುಮಾರ್ ಗೆ ಸ್ಯಾಂಡಲ್ ವುಡ್ನ ಬಾಗಿಲು ಕೂಡ ತೆರೆದಿದೆ ಸಿನಿಮಾದಲ್ಲಿ ನಾಯಕನಟನಾಗಿ ನಟಿಸುತ್ತಿರುವ ಶಶಿ ಶೂಟಿಂಗ್ನಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಜೊತೆಗೆ ಶಶಿ ತಮ್ಮಗೆ ತಿಳಿದಿರುವ ವ್ಯವಸಾಯ ಟ್ರಿಕ್ಸ್ ಗಳನ್ನು ಬೇರೆ ರೈತರಿಗೂ ಸಹ ತಿಳಿಸಿ ಅವರನ್ನು ಸಹ ಉದ್ಧರಿಸುವ ಪ್ರಯತ್ನದಲ್ಲಿದ್ದಾರೆ.
ಆಗಾಗ ಸಿನಿಮಾ ಹಾಗೂ ಸಾಮಾಜಿಕ ಕಾರ್ಯಗಳಿಂದ ಸುದ್ದಿಯಲ್ಲಿರುವ ಶಶಿ, ಈಗ ಹೊಸ ಮನೆಯ ಪ್ರವೇಶ ಮಾಡ್ತಾ ಶಶಿಕುಮಾರ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇನ್ನು ನಿಮಗೂ ಕೂಡ ಶಶಿ ಇಷ್ಟವಾಗಿದ್ದರೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.