ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಅಗಲಿ ಏಳು ತಿಂಗಳಾಗಿದೆ. ಆದರೆ ಈಗಲೂ ಈ ಸತ್ಯ ಅರಗಿಸಿಕೊಳ್ಳುವುದು ಕಷ್ಟ ಎನ್ನುವ ಹಾಗಿದೆ. ಕಣ್ಮುಂದೆಯೇ ಎಲ್ಲಾ ನಡೆದಿದ್ದರೂ, ಮನದ ಮೂಲೆಯಲ್ಲೆಲ್ಲೋ ಇದೆಲ್ಲವೂ ಒಂದು ಕೆಟ್ಟ ಕನಸಾಗಿರಲಿ ಎಂದೇ ಮನಸ್ಸು ಬಯಸುತ್ತಿದೆ.
ಅಭಿಮಾನಿಗಳು ಮತ್ತು ಕುಟುಂಬದವರ ಮನಸ್ಥಿತಿ ಹೀಗಿದೆ. ಅಜಾತಶತ್ರುವಾಗಿದ್ದ ಅಪ್ಪು ಇನ್ನಿಲ್ಲ ಎನ್ನುವುದನ್ನು ಒಪ್ಪಿಕೊಳ್ಳಲು ಈಗಲೂ ಸಾಧ್ಯವಾಗುತ್ತಿಲ್ಲ. ಇಂದಿಗೂ ಸಹ ಅದೆಷ್ಟೋ ಮನೆಗಳಲ್ಲಿ ಅಪ್ಪು ಇನ್ನಿಲ್ಲ ಎನ್ನುವುದನ್ನು ನೆನೆದು ಕಣ್ಣೀರು ಹಾಕುತ್ತಾರೆ.
ನಮಗೆಲ್ಲ ಗೊತ್ತಿರುವ ಹಾಗೆ ಅಪ್ಪು ಮತ್ತು ಕಿಚ್ಚ ಸುದೀಪ್ ಬಹಳ ಒಳ್ಳೆಯ ಸ್ನೇಹಿತರಾಗಿದ್ದರು. ಹಲವು ಕಾರ್ಯಕ್ರಮಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಈ ಇಬ್ಬರ ನಡುವಿನ ಸ್ನೇಹ ಎಂತದ್ದು ಎನ್ನುವುದರ ಬಗ್ಗೆ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ.
ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಕಿಚ್ಚ ಸುದೀಪ್ ಮಾತನಾಡುತ್ತಾ ಅಪ್ಪು ಅವರನ್ನು ನೆನದು ಬಹಳ ಬಾವುಕರಾಗಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಎಲ್ಲರೂ ಒಮ್ಮೆ ಜೋರಾಗಿ ಚಪ್ಪಾಳೆ ತಟ್ಟಿ ದಟ್ ಈಸ್ ದಾ ವೇ . ಈ ಸಿನಿಮಾ ಹೊರ ಬರಬೇಕಾದರೆ ಎಲ್ಲರೂ ಕೈ ಅಗಲಿಸಿ ತಬ್ಬಿಕೊಂಡು ನೋಡಿ ಈ ಸಿನಿಮಾವನ್ನು ಬೇಕಾಜ್ ಮತ್ತೆ ಬೇಕು ಎಂದರು ಸಿಗುವುದಿಲ್ಲ .
ಕೆಲವು ಇದ್ದಾಗ ಬೆಲೆ ಜಾಸ್ತಿ ಕೊಡ್ತೇವೆ, ಕೆಲವರನ್ನು ಕಳೆದುಕೊಂಡ ಮೇಲೆ ಮತ್ತಷ್ಟು ಜಾಸ್ತಿ ಬೆಲೆ ಕೊಡುತ್ತೇವೆ ಅಂತೆ. ಇಲ್ಲಿ ದೇವರು ಒಂದು ನಂಬಿಕೆ ಆ ವ್ಯಕ್ತಿ ಇದ್ದದ್ದೇ ಮನಸ್ಸಿನಿಂದಲೇ ಬಾಳಿದ್ರು ಇದ್ದರು.
ಇವತ್ತಿಗೂ ಕೂಡ ನಾವೆಲ್ಲರೂ ಆ ವ್ಯಕ್ತಿಯನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಏನು ಮಾಡೋದು ಅವರು ಈಗ ನೆನಪು ಮಾತ್ರ. ಅಪ್ಪು ಅವರ ಬಗ್ಗೆ ಎಷ್ಟು ಹೇಳಿದರೂ ಕೂಡ ಕಡಿಮೆ ಏಕೆಂದರೆ ಅಷ್ಟರ ಮಟ್ಟಿಗೆ ಒಳ್ಳೆಯತನ ಆ ವ್ಯಕ್ತಿಯಲ್ಲಿ ಇತ್ತು ಎಂದು ಹೇಳುತ್ತಾ ಸುದೀಪ್ ಭಾವುಕರಾಗಿದ್ದಾರೆ.