ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಮುಖ ಧಾರಾವಾಹಿಗಳಲ್ಲಿ ಮನಸಾರೆ ಧಾರಾವಾಹಿ ಕೂಡ ಒಂದು. ಈ ಧಾರವಾಹಿಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ನಟಿ ಪ್ರಿಯಾಂಕ ಚಿಂಚೋಲಿ. ತಮ್ಮ ಅದ್ಭುತ ನಟನೆ ಹಾಗೂ ಗ್ಲಾಮರ್ ನ ಮೂಲಕ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ನಟಿ ಪ್ರಿಯಾಂಕ ಚಿಂಚೋಲಿ ಕಿರುತೆರೆ ಲೋಕದಲ್ಲಿ ಸಾಕಷ್ಟು ಧಾರವಾಹಿಗಳಲ್ಲಿ ನಟಿಸಿ ಸಕ್ರಿಯರಾಗಿದ್ದಾರೆ. ಹರ ಹರ ಮಹಾದೇವ, ಮನಸಾರೆ, ರಾಗ, ಮನಸ್ಸೆಲ್ಲಾ ನೀನೇ, ಇನ್ನು ಮುಂತಾದ ಧಾರವಾಹಿಗಳಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
ಇನ್ನು ನಟಿ ಪ್ರಿಯಾಂಕ ಇದೀಗ ಹಿರಿತೆರೆಯಲ್ಲಿ ಸಹ ಮಿಂಚಲು ರೆಡಿಯಾಗಿದ್ದಾರೆ. ಈ ಹಿಂದೆ ಕೂಡ ನಟಿ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದೀಗ ನಟಿ ಕೌಟಿಲ್ಯ ಸಿನಿಮಾದಲ್ಲಿ ನಾಯಕನಟಿಯಾಗಿ ಕಾಣಿಸಿಕೊಂಡಿದ್ದಾರೆ. ಕೌಟಿಲ್ಯ ಸಿನಿಮಾವನ್ನು ಪ್ರಭಾಕರ್ ಶೇರ್ಖಾನೆ ಅವರು ನಿರ್ದೇಶನ ಮಾಡಿದ್ದು, ಬಿ ಎ ವಿಜೇಂದ್ರ ಅವರು ನಿರ್ಮಾಣ ಮಾಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಅರ್ಜುನ್ ರಮೇಶ್ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.
ಮೊದಲನೆಯದಾಗಿ ನಿಮ್ಮೆಲ್ಲರಿಗೂ ನನ್ನ ನಮಸ್ಕಾರಗಳು ತುಂಬಾ ಖುಷಿಯಾಗುತ್ತದೆ ನಿಮ್ಮೆಲ್ಲರನ್ನು ನೋಡಿ ಬಿಕಾಸ್ ನಾವು ಸಾಂಗ್ ರಿಲೀಸ್ ಮಾಡಿದ್ದೆವು ಆಗಲು ನೀವು ಇದ್ದೀರಿ ಈಗ ಟ್ರೈಲರ್ ರಿಲೀಸ್ ಮಾಡುತಿದ್ದೇವೆ ಆಗಲು ನೀವು ಇದ್ದೀರಿ.
ನಿಮ್ಮ ಸಪೋರ್ಟ್ ನಮ್ಮ ಮೇಲೆ ಸದಾ ಹೀಗೆ ಇರಲಿ ಎಂದು ಆಶಿಸುತ್ತೇನೆ. ನನ್ನ ಪಾತ್ರದ ಬಗ್ಗೆ ಮಾತನಾಡಬೇಕೆಂದರೆ ನಾನು ಇದರಲ್ಲಿ ಒಂದು ಜರ್ನಲಿಸ್ಟ್ ಆಗಿ ಕಾಣಿಸಿಕೊಳ್ಳುತ್ತಿದ್ದೇನೆ. ವಿಭಿನ್ನವಾಗಿ ಇದ್ದೀನಿ ಒಂದೆಡೆ ಕ್ಯೂಟಾಗಿದ್ದರೆ ಮತ್ತೊಂದೆಡೆ ಜಗಳವಾಡುತ್ತಾ ಇದ್ದೀನಿ ಮತ್ತು ಎಸ್ ಇ ಪ್ಲೇರೋಲ್ ನನಗೆ ತುಂಬಾ ಅವಕಾಶವನ್ನು ಕೊಟ್ಟಿದ್ದಾರೆ.
ನಿರ್ದೇಶಕ ಪ್ರಭಾಕರ್ ಅವರಿಗೆ ಎಷ್ಟು ಧನ್ಯವಾದ ತಿಳಿಸಿದರೂ ಸಾಲದು. ಯಾವಾಗಲೂ ಒಂದು ಹೀರೋಯಿನ್ ಎಂದರೆ ವೈಟ್ ಆಗಿ ಚೆನ್ನಾಗಿ ಕಾಣಿಸಬೇಕು ಹೀರೋ ಹೀರೋಯಿನ್ ಹಿಂದೆ ಸುತ್ತಾಡಬೇಕು ಅಷ್ಟೇ ಆಗಿರುತ್ತದೆ ಆದರೆ ನಾನು ತುಂಬಾ ಲಕ್ಕಿ ನನ್ನನ್ನು ತುಂಬಾ ವಿಭಿನ್ನ ಪಾತ್ರದಲ್ಲಿ ನೀವು ನೋಡುತ್ತೀರಾ.
ಮತ್ತು ತುಂಬಾನೇ ಎಕ್ಸ್ಪರಿಮೆಂಟ್ ಕೂಡ ಮಾಡಿದ್ದೇವೆ ನನ್ನನ್ನು ಯಾವಾಗಲೂ ಪಾರ್ವತಿಯಾಗಿ ನೋಡಿದ್ದೀರಾ ಮತ್ತು ಪ್ರಾರ್ಥನಾ ಆಗಿ ನೋಡಿದ್ದೀರಾ ರಾಧಾ ಆಗಿ ನೋಡಿದ್ದೀರಾ ತುಂಬಾ ಸೈಲೆಂಟ್ ಹುಡುಗಿ ಬೈದ್ರೆ ಬೈಸ್ಕೊಳ್ಳುತ್ತಾಳೇ.
ಆದರೆ ಇಲ್ಲಿ ಹಾಗಲ್ಲ ಬೈದರೆ ತಿರುಗೆ ಬೈಯುತ್ತೇನೆ . ನಾನು ತುಂಬಾ ಎಂಜಾಯ್ ಮಾಡಿದ್ದೇನೆ ಈ ಪಾತ್ರ ಮಾಡುವಾಗ ನೀವು ಕೂಡ ಎಂಜಾಯ್ ಮಾಡುತ್ತೀರಾ . ನಿಮ್ಮ ಆಶೀರ್ವಾದ ನನ್ನ ಅಲ್ಲ ನಮ್ಮ ಅಂದರೆ ನಮ್ಮ ಮೂವಿ ತಂಡದ ಮೇಲೆ ಇರಲಿ ಎಂದು ಆಶಿಸ್ತೇನೆ ಧನ್ಯವಾದಗಳು ಎಂದಿದ್ದಾರೆ ನಟಿ ಪ್ರಿಯಾಂಕ ಚಿಂಚೋಲಿ.