ಸ್ಯಾಂಡಲ್ವುಡ್ ನಲ್ಲಿ ನಟಿಯಾಗಿ ಎಂಟ್ರಿ ಕೊಟ್ಟ ಮೇಘನಾ ರಾಜ್ ಅವರು ಈಗ ಗುಡ್ ನ್ಯೂಸ್ ಒಂದನ್ನು ಹಂಚಿಕೊಂಡಿದ್ದಾರೆ. ಆ ನ್ಯೂಸ್ ಅನ್ನು ಕೇಳಿದರೆ ನೀವು ಕೂಡ ಬಹಳ ಖುಷಿಯಾಗ್ತಿರ ಹಾಗಾದ್ರೆ ಏನದು ಗುಡ್ ನ್ಯೂಸ್ ಅದನ್ನೆಲ್ಲ ಸಂಪೂರ್ಣವಾಗಿ ನೋಡೋಣ ಬನ್ನಿ.
ಕಳೆದ ಎರಡು ವರ್ಷಗಳಿಂದ ನಟಿ ಮೇಘನಾ ರಾಜ್ ಅವರ ಜೀವನದಲ್ಲಿ ಏನೆಲ್ಲಾ ನಡೆದು ಹೋಗಿದೆ ಎಂಬುದು ನಿಮ್ಮೆಲ್ಲರಿಗೂ ಗೊತ್ತೇ ಇದೆ. ಚಿರು ಅವರನ್ನು ಕಳೆದುಕೊಂಡು ನೋವಿನಲ್ಲಿದ್ದ ಮೇಘನಾ ಅವರಿಗೆ ಚಿರು ಮತ್ತು ಅವರ ಸ್ನೇಹಿತರು ಧೈರ್ಯ ತುಂಬಿ ಮತ್ತೆ ಅವರನ್ನು ಸಿನಿಮಾಗೆ ಮರಳಲು ಸಹಾಯ ಮಾಡಿದರು.
ಈಗ ಮೇಘನಾ ರಾಜ್ ಒಂದು ಹೆಜ್ಜೆ ಮುಂದೆ ಇಟ್ಟಿದ್ದನ್ನು ನೋಡಿ ಇಡೀ ಚಿತ್ರರಂಗವೇ ಆಶ್ಚರ್ಯ ಪಟ್ಟಿದೆ. ಹೌದು ಮೇಘನಾ ರಾಜ್ ಅವರು ಈಗ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ತಾವೇ ಮುಖ್ಯವಾಗಿ ನಟಿಸುತ್ತಿರುವ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಹಾಗಂತ ಇವರೊಬ್ಬರೇ ಸಿನಿಮಾವನ್ನು ಮಾಡುತ್ತಿಲ್ಲ, ಜೊತೆಗೆ ಚಿರು ಸ್ನೇಹಿತ ಪನ್ನಾಗ ಬಣ್ಣ ಕೂಡ ಕೈಜೋಡಿಸಿದ್ದಾರೆ. ಕಳೆದ ವರ್ಷ ಪನ್ನಾಗ ಬಣ್ಣ ಮತ್ತು ವಾಸುಕಿ ವೈಭವ್ ಅವರ ಜೊತೆಗಿದ್ದ ಫೋಟೋವನ್ನು ಶೇರ್ ಮಾಡಿದ್ದ ಮೇಘನಾ ಇದೀಗ ಹೊಸ ಸುದ್ದಿಯನ್ನು ಕೊಡಲಿದ್ದೇನೆ ಎಂದು ಹೇಳಿದ್ದಾರೆ.
ಏನಿದು ಸುದ್ದಿ ಆನಂತರ ಒಟ್ಟಿಗೆ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದರು. ಮೊನ್ನೆ ಮೊನ್ನೆ ಅಷ್ಟೇ ಮತ್ತೊಂದು ಫೋಟೋವನ್ನು ಹಂಚಿಕೊಂಡಿದ್ದ ಮೇಘನಾ ಈ ಸಿನಿಮಾವನ್ನ ವಿಶಾಲ್ ನಿರ್ದೇಶನ ಮಾಡುತ್ತಿದ್ದು ಪನ್ನಾಗಬಣ್ಣ ನಿರ್ಮಾಪಕರು ಎಂದು ಹೇಳಿದ್ದರು.
ಇದೀಗ ಸಿಕ್ಕಿರುವ ಸುದ್ದಿಯ ಪ್ರಕಾರ ಮೇಘನಾ ರಾಜ್ ಅವರೇ ನಿರ್ಮಾಪಕಿಯಾಗಿರುವುದು ಅದು ಅಲ್ಲದೆ, ಈ ಸಿನಿಮಾ ಮಹಿಳಾ ಪ್ರಾಮುಖ್ಯತೆಯನ್ನು ಹೊಂದಿದ್ದು ಮೇಘನಾ ರಾಜ್ ಅವರೆ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ .
ಇದು ಚಿರು ಮೇಘನಾ ಅವರ ನಿಜ ಜೀವನದ ಮಾತು ಎಂದು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಆದರೆ ಈ ಬಗ್ಗೆ ಮೇಘನಾ ಯಾವುದೇ ರೀತಿಯಾದಂತಹ ಮಾಹಿತಿಯನ್ನು ಬಿಟ್ಟು ಕೊಟ್ಟಿಲ್ಲ. ನಿಮ್ಮ ಪ್ರಕಾರ ಚಿರು ಮೇಘನಾ ಪ್ರೇಮಕಥೆ ಸಿನಿಮಾವಾಗಿ ಬರಬೇಕಾ ಬೇಡವಾ ಕಾಮೆಂಟ್ ಮಾಡಿ ತಿಳಿಸಿ.