ಶಿವಣ್ಣ ಅವರನ್ನು ಭೇಟಿ ಮಾಡಿ ಖುಷಿಯಾಗಿ ಹಾಡು ಹಾಡಿದ ಕಾಫಿನಾಡ ಚಂದು.. ವಿಡಿಯೋ ಒಮ್ಮೆ ನೋಡಿ…

ಸಿನಿಮಾ ಸುದ್ದಿ

ಸೋಷಿಯಲ್ ಮಿಡಿಯಾದಲ್ಲಿ ಹೆಸರು ಮಾಡುವುದು ಅಷ್ಟು ಸುಲಭದ ಮಾತಲ್ಲ. ಕೆಲವರು ಒಂದೆರಡು ವಿಡಿಯೋ ಮಾಡಿ ರಾತ್ರೋ ರಾತ್ರಿ ಫ್ಹೇಮಸ್ ಆಗಿ ಬಿಡುತ್ತಾರೆ. ಕೆಲವರು ಒಳ್ಳೆ ರೀತಿಯಲ್ಲಿ ಫ್ಹೇಮಸ್ ಆದರೆ ಇನ್ನೂ ಕೆಲವರು ಬೇರೆ ರೀತಿಯಲ್ಲೇ ಜನಪ್ರಿಯತೆ ಪಡೆದುಕೊಳ್ಳುವುದನ್ನು ನಾವು ನೋಡಿದ್ದೇವೆ.

ಇದೆ ಸಾಲಿಗೆ ಇತ್ತಿಚೆಗೆ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಸುದ್ದಿಯಲ್ಲಿರುವ ವ್ಯಕ್ತಿ ಎಂದರೆ ಅದು ನಮ್ಮ ಚಂದು. ಚಂದು ಬರ್ಥ್ ಡೇ ಹಾಡುಗಳನ್ನು ಹಾಡುವ ಮೂಲಕ ಸೋಷಿಯಲ್ ಮಿಡಿಯಾದಲ್ಲಿ ಸಕತ್ ಫ್ಹೇಮಸ್ ಆಗಿದ್ದಾರೆ. ಇನ್ನು ಈ ಚಂದು ಶಿವಣ್ಣ ಹಾಗೂ ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿದ್ದು, ಶಿವಣ್ಣ ಅವರ ಬಗ್ಗೆ ಇದೀಗ ಒಂದು ಹಾಡು ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಾನು ಪುನೀತ್ ರಾಜಕುಮಾರ್ ಮತ್ತು ಶಿವಣ್ಣ ಅವರ ಅಭಿಮಾನಿ ಕಾಪಿನಾಡ ಚಂದು ಮಾಡುತ್ತಿರುವ ನಮಸ್ಕಾರಗಳು. ಅಣ್ಣನ ನೋಡ್ಬಿಟ್ಟೆ ಅಣ್ಣ ನೋಡ್ಬಿಟ್ಟೆ ಅಣ್ಣ ನೋಡಿ ಬಿಟ್ಟೆ , ಶಿವಣ್ಣನ್ ನೋಡ್ಬಿಟ್ಟೆ ಶಿವಣ್ಣ ನೋಡ್ಬಿಟ್ಟೆ , ಅಣ್ಣನ್ ಜೊತೆ ಕಾಫಿ ಕುಡಿದು ಬಿಟ್ಟೆ ನನ್ನ ಜೊತೆ ಊಟ ಮಾಡ್ಬಿಟ್ಟೆ.

ಅಣ್ಣನ್ ಜೊತೆ ಸ್ನೇಹ ಹಂಚ್ಕೊಂಡ್ಬಿಟ್ಟೆ ಶಿವಣ್ಣನ ನೋಡೇ ಬಿಟ್ಟೆ ಕಾಫಿ ನಾಡ ಚಂದು ಚಂದು ಚಂದು ನೀವೇ ನನ್ನ ಬಂಧು ಬಂದು ಬಂದು ಎಲ್ಲಿ ನೋಡಿದ್ರು ಚಂದು ಚಂದು ಚಂದು ಕಾಫಿ ನಾಡ ಚಂದು ನನ್ನ ನೋಡಿ ಬಿಟ್ಟೆ ಅಣ್ಣ ನೋಡ್ಬಿಟ್ಟೆ.

ಶಿವಣ್ಣನ ನೋಡಿ ಬಿಟ್ಟೆ ಶಿವಣ್ಣ ನಿಮ್ಮನ್ನು ನೋಡಿ ಬಿಟ್ಟೆ ಶಿವಣ್ಣ ನೋಡಿ ಬಿಟ್ಟೆ ಕಾಫಿನಾಡ ಚಂದು ಚಂದು ಚಂದು ನೀವೇ ನನ್ನ ಬಂಧು ಬಂಧು ಬಂಧು ಬಳಿಗೆ ಬಂದರೂ ಇಂದು ಶಿವಣ್ಣ ಬಂದರು ಇಂದು ನನ್ನ ಅಣ್ಣ ಶಿವಣ್ಣ ಅವರಿಗೆ ವಂದನೆ ಅಭಿನಂದನೆ ಎಂದು ಚಂದು ಇದೀಗ ಒಂದು ಹೊಸ ವಿಡಿಯೋ ಮಾಡಿ ಶೇರ್ ಮಾಡಿಕೊಂಡಿದ್ದಾರೆ.

ಈ ವಿಡಿಯೋ ನೋಡಿ ಕೆಲವರು ಇದೆ ರೀತಿ ಖುಷಿಯಾಗಿರಿ ಎಂದು ಕಾಮೆಂಟ್ ಮಾಡಿದರೆ. ಇನ್ನು ಕೆಲವರು ನೆಗಟೀವ್ ಕಾಮೆಂಟ್ಸ್ ಮಾಡುತ್ತಿದ್ದಾರೆ. ಆದರೆ ಯಾರೂ ಏನೇ ಹೇಳಿದರೂ ಚಂದು ಮಾತ್ರ ತನಗೆ ಇಷ್ಟ ಬಂದಂತೆ ಇರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ.

ನಿಮಗೂ ಕೂಡ ಕಾಫಿ ನಾಡು ಚಂದು ಇಷ್ಟವಾಗಿದ್ದಾರೆ, ನೀವು ಸಹ ಅವರನ್ನು ಫಾಲೋ ಮಾಡುತ್ತಿದ್ದರೆ, ಈ ವಿಡಿಯೋ ಒಮ್ಮೆ ನೋಡಿ, ಹಾಗೆ ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *