ಅನಂತ್ ನಾಗ್ ಅವರ ಮಗಳು ಈಗ ಹೇಗಿದ್ದಾರೆ ನೋಡಿ…

ಸ್ಯಾಂಡಲವುಡ್

ಕನ್ನಡ ಚಿತ್ರರಂಗದಲ್ಲಿ ಒಂದು ಒಳ್ಳೆಯ ಅಭಿನಯ ಚತುರತೆ ಇರುವಂತಹ ವ್ಯಕ್ತಿ ಎಂದರೆ ಅದು ನಮ್ಮ ಅನಂತ್ ನಾಗ್. ಇವರು ಸಂಭಾಷಣೆಯನ್ನ ಪ್ರಸ್ತುತ ಪಡಿಸುವ ವಿಭಿನ್ನವಾದ ರೀತಿ ಅದೆಷ್ಟೋ ಜನರಿಗೆ ಬಹಳ ಇಷ್ಟ. ಇನ್ನು ಸದಾ ಲವಲವಿಕೆಯಿಂದ ಇರುವಂತಹ ವ್ಯಕ್ತಿತ್ವ ನಮ್ಮ ಅನಂತ ನಾಗ್ ಅವರದ್ದು.

70 ಹಾಗೂ 80 ದಶಕದಲ್ಲಿ ತಮ್ಮ ಮುದ್ದು ಮುಖದ ಮೂಲಕ ಅದೆಷ್ಟೋ ಯುವತಿಯರ ನಿದ್ದೆ ಗೆಡಿಸಿದ ಚೆಲುವ ಎಂದರೆ ಅದು ನಮ್ಮ ಅನಂತ್ ನಾಗ್ ಅವರು. ಅವರ ಸಿನಿಮಾಗಳಲ್ಲಿನ ಅಭಿನಯ ಹಾಗೂ ಅವರು ರಾಜಕೀಯದಲ್ಲಿದ್ದಾಗ ಅವರ ಸರಳತೆಗೆ ಜನ ಮನಸೊತ್ತಿದ್ದರು.

ಸೆಪ್ಟೆಂಬರ್ 4 1948ರಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ಶಿರಾಲಿ ಎಂಬ ಗ್ರಾಮದಲ್ಲಿ ಅನಂತ್ ನಾಗ್ ಜನಿಸಿದ್ದರು. ಅನಂತ್ ನಾಗ್ ಅವರ ತಾಯಿ ಆನಂದಿ ಹಾಗೂ ತಂದೆ ಸದಾನಂದ ನಾಗರಕಟ್ಟೆ. ಇವರು ಮೂಲತಃ ರಂಗಭೂಮಿ ಕಲಾವಿದರು.

ಸುಮಾರು 8 ವರ್ಷಗಳ ಕಾಲ ಮರಾಠಿ ರಂಗಭೂಮಿಯಲ್ಲಿ ನಟ ಅನಂತ್ ನಾಗ್ ಪಳಗಿದ್ದರು. ಅಲ್ಲದೆ ನಟ ಅನಂತ್ ನಾಗ್ ಸಪ್ತ ಭಾಷಾ ನಟರು. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ ಇವರು ನಟಿಸಿದ್ದಾರೆ.

ಅನಂತ್ ನಾಗ್ ಅವರ ಸಹೋದರ ನಮ್ಮ ನಿಮ್ಮೆಲ್ಲರ ಪ್ರೀತಿಯ ಆಟೋರಾಜ ಶಂಕರ್ ನಾಗ್. ಇನ್ನು ನಟ ಶಂಕರ್ ನಾಗ್ ಅವರ ಪ್ರತಿಭೆ ಬಗ್ಗೆ ಎಷ್ಟು ಮಾತನಾಡಿದರು ಕೂಡ ಕಡಿಮೆಯಾಗುತ್ತದೆ. ಇನ್ನು ಇಂತಹ ಅದ್ಭುತ ನಟ ಶಂಕರ್ ನಾಗ್ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬರದಾಗಿದೆ ಎಂದರೆ ತಪ್ಪಾಗಲಾರದು.

ಇನ್ನು 1973 ರಲ್ಲಿ ತೆರೆಕಂಡ ಸಂಕಲ್ಪ ಎಂಬ ಚಿತ್ರದ ಮೂಲಕ ನಟ ಅನಂತ್ ನಾಗ್ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ಒಂದಾದ ಮೇಲೆ ಒಂದು ಕನ್ನಡದ ಹಿಟ್ ಸಿನಿಮಾಗಳಲ್ಲಿ ನಟಿಸಿ, ಕನ್ನಡದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ ನಟ ಅನಂತ್ ನಾಗ್.

ಹಂಸಗೀತೆ, ಉದ್ಭವ, ಮಿಂಚಿನ ಓಟ, ಆಕ್ಸಿಡೆಂಟ್, ಬೆಳದಿಂಗಳ ಬಾಲೆ, ನಾ ನಿನ್ನ ಬಿಡಲಾರೆ, ಬೆಂಕಿಯ ಬಲೆ, ಚಂದನದ ಗೊಂಬೆ, ನೋಡಿ ಸ್ವಾಮಿ ನಾವಿರೋದೆ ಹೀಗೆ, ಜನುಮ ಜನುಮದ ಅನುಬಂದ, ಇನ್ನು ಮುಂತಾದ ಚಿತ್ರಗಳು ಸಾಕಷ್ಟು ಬೇಡಿಕೆಯನ್ನ ತಂದುಕೊಟ್ಟಿದೆ.

ಇನ್ನು ಇವರು ಇತ್ತೀಚಿನ ಸಿನಿಮಾಗಳಲ್ಲಿ ಸಹ ಪೋಷಕ ಪಾತ್ರಗಳಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಇನ್ನು ಇವರ ಪತ್ನಿ ಗಾಯತ್ರಿ ಕೂಡ ಅನಂತ್ ನಾಗ್ ಕಾಲದ ನಾಯಕನಟಿ. ಇನ್ನು ಇವರಿಗೆ ಒಬ್ಬ ಮುದ್ದಾದ ಮಗಳಿದ್ದಾರೆ ಆಕೆಯ ಹೆಸರು ಅಧಿತಿ ನಾಗ್. ನಿಮಗೂ ಕೂಡ ಅನಂತ್ ನಾಗ್ ಅಭಿನಯದ ಸಿನಿಮಾಗಳು ಇಷ್ಟ ಎಂದರೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *