ಕೆಜಿಎಫ್ ಸಿನಿಮಾದಲ್ಲಿ ಚಾಚನ ಪಾತ್ರದಲ್ಲಿ ಕಾಣಿಸಿಕೊಂಡ ಹರೀಶ್ ರಾಯ್ ಅವರು ಇದೀಗ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ಎಲ್ಲರಿಗೂ ಸಹ ಇದೀಗ ಗೊತ್ತಾಗುತ್ತಿದೆ. ಇದುವರೆಗೂ ಅವರ ಅನಾರೋಗ್ಯದ ಬಗ್ಗೆ ಅವರು ಎಲ್ಲಿಯೂ ಸಹ ಹೇಳಿಕೊಂಡಿರಲಿಲ್ಲ.
ಈ ವಿಷಯದ ಬಗ್ಗೆ ತಿಳಿಯುತ್ತಿದ್ದಂತೆ ಸಿನಿಮಾರಂಗದ ಸಾಕಷ್ಟು ಕಲಾವಿದರು ಇದೀಗ ನಟ ಹರೀಶ್ ರಾಯ್ ನೆರವಿಗೆ ಬಂದಿದ್ದಾರೆ. ಇದೀಗ ಈ ಬಗ್ಗೆ ಸ್ವತಃ ಹರೀಶ್ ರಾಯ್ ಸಂದರ್ಶನ ಒಂದರಲ್ಲಿ ಮಾತನಾಡಿದ್ದಾರೆ.
ಇತ್ತೀಚೆಗೆ ನಡೆದ ಸಂದರ್ಶನ ಒಂದರಲ್ಲಿ ನಟ ಹರೀಶ್ ರಾಯ್, ನಾನು ಈವರೆಗೂ ಈ ವಿಷಯದ ಬಗ್ಗೆ ಎಲ್ಲಿಯೂ ಸಹ ಮಾತನಾಡಿರಲಿಲ್ಲ, ಆದರೆ ಇದೀಗ ನನ್ನ ಆರೋಗ್ಯ ಸ್ಥಿತಿ ಸರಿ ಇಲ್ಲ ಎನ್ನುವ ವಿಷಯ ಹೇಗೋ ಎಲ್ಲರಿಗೂ ಸಹ ಗೊತ್ತಾಗಿದೆ.
ಜನರು ಕೇವಲ ದೊಡ್ಡ ದೊಡ್ಡ ಸ್ಟಾರ್ ಕಲಾವಿದರನ್ನು ಮಾತ್ರ ಇಷ್ಟ ಪಡುತ್ತಾರೆ ಎಂದು ನಾನು ಅಂದುಕೊಂಡಿದೆ. ಆದರೆ ಜನರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿ ನೋಡಿ ನನ್ನ ಮನಸ್ಸಿಗೆ ತುಂಬಾ ಖುಷಿಯಾಗುತ್ತಿದೆ ಎಂದು ನಟ ಹರೀಶ್ ರಾಯ್ ಹೇಳಿಕೊಂಡಿದ್ದಾರೆ.
ಇನ್ನು ಇದೆ ವೇಳೆ ಸ್ಯಾಂಡಲ್ವುಡ್ ನ ದೊಡ್ಡ ಸ್ಟಾರ್ ನಟನೊಬ್ಬ ನಟ ಹರೀಶ್ ರಾಯ್ ಅವರ ಸಹಾಯಕ್ಕೆ ಬಂದಿದ್ದು, ಎಷ್ಟೇ ಕೋಟಿ ಖರ್ಚಾದರು ಸಹ ನಾನು ನೋಡಿಕೊಳ್ಳುತ್ತೆನೆ ತಲೆ ಕೆಡಿಸಿಕೊಳ್ಳಬೇಡಿ ಎಂದಿದ್ದಾರಂತೆ.
ನಿಮ್ಮ ಆರೋಗ್ಯ ಸ್ಥಿತಿ ಚೆನ್ನಾಗಿಲ್ಲ ಎನ್ನುವುದರ ಬಗ್ಗೆ ನೀವು ನನಗೆ ಮೊದಲೇ ತಿಳಿಸಬೇಕಿತ್ತು ಎಂದು ಆ ಸ್ಟಾರ್ ನಟ ಹೇಳಿದ್ದಾರಂತೆ. ಮತ್ತು ನಾನು ಸಹಾಯ ಮಾಡುವ ವಿಚಾರವನ್ನು ನೀವು ಯಾರ ಬಳಿಯೂ ಸಹ ತಿಳಿಸಬಾರದು ಎಂದು ಹರೀಶ್ ರಾಯ್ ಬಳಿ ಆ ಸ್ಟಾರ್ ನಟ ಹೇಳಿದ್ದಾರಂತೆ.
ಆ ಸ್ಟಾರ್ ನಟ ಕನ್ನಡ ಸಿನಿಮಾರಂಗವನ್ನು ಬೇರೆ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ, ಆ ಸ್ಟಾರ್ ನಟನ ಹೆಸರನ್ನು ನಾನು ಎಲ್ಲಿಯೂ ತಿಳಿಸಬಾರದು ಎಂದು ಆ ನಟ ನನಗೆ ಹೇಳಿದ್ದಾರೆ. ಹಾಗಾಗಿ ನಾನು ಆ ನಟನ ಹೆಸರನ್ನು ಹೇಳಲು ಇಚ್ಛೆ ಪಡುವುದಿಲ್ಲ ಎಂದಿದ್ದಾರೆ ಹರೀಶ್ ರಾಯ್. ನಿಮ್ಮ ಪ್ರಕಾರ ಆ ಸ್ಟಾರ್ ನಟ ಯಾರಾಗಿರಬಹುದು ಎನ್ನುವುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.