ಸದ್ಯ ನಟಿ ಮೇಘನಾ ರಾಜ್ ಅವರು ಹಲವಾರು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ಜೀವನದಲ್ಲಿ ಆದ ಕಹಿ ಘಟನೆಗಳನ್ನು ಎದುರಿಸಿ ಅವರು ಮುಂದಿನ ಹೆಜ್ಜೆ ಇಟ್ಟಿದ್ದಾರೆ. ಸಿನಿಮಾಗಳಲ್ಲಿ ಅವರು ನಟಿಸುವುದರ ಜೊತೆಗೆ ಕಿರುತೆರೆ ಶೋಗಳಲ್ಲಿ ಜಡ್ಜ್ ಆಗಿ ಸಹ ಅವರು ಸಕ್ರಿಯರಾಗಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ಮೇಘನಾ ರಾಜ್ ತಮ್ಮ ಅಭಿಮಾಣಿಗಳ ಜೊತೆಗೆ ಸದಾ ಸಪರ್ಕದಲ್ಲಿರಲು ಬಯಸುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಹಾಗೂ ರಾಯನ್ ಫೋಟೋ ಮತ್ತು ವಿಡಿಯೋಗಳ ಜೊತೆಗೆ ತಮ್ಮ ಪ್ರತಿದಿನದ ಅಪಡೆಟ್ಸ್ ಗಳನ್ನು ಅಭಿಮಾನಿಗಳಿಗೆ ನೀಡುತ್ತಿರುತ್ತಾರೆ.
ಇನ್ನು ರಾಯನ್ ನ ಫೋಟೋ ಮತ್ತು ಆತನ ತುಂಟಾಟದ ವಿಡಿಯೋಗಳನ್ನು ಮೇಘನಾ ರಾಜ್ ಅವರು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಕತ್ ವೈರಲ್ ಆಗುತ್ತವೆ. ಇನ್ನು ಇದೀಗ ನಟಿ ಮತ್ತೊಂದು ಫೋಟೋ ಪೋಸ್ಟ್ ಮಾಡಿದ್ದು, ಸದ್ಯ ಈ ಫೋಟೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಮೇಘನಾ ರಾಜ್ ಚಿರುವನ್ನು ಕಳೆದುಕೊಂಡು ಬಹಕ ದುಃಖದಲ್ಲಿದ್ದಾರೆ. ಮೇಲ್ನೋಟಕ್ಕೆ ನಗುತ್ತಿದ್ದರು ಸಹ ಮನಸ್ಸಿನಲ್ಲೆ ಚಿರುವನ್ನು ನೆನೆದು ಕಣ್ಣೀರು ಹಾಕುತ್ತಿದ್ದಾರೆ ಮೇಘನಾ ರಾಜ್. ಚಿರುವಿನ ನೆನಪುಗಳು ಮೇಘನಾ ಮನಸ್ಸಿನಲ್ಲಿ ಎಂದೆಂದಿಗೂ ಸಹ ಅಚ್ಚ ಹಸಿರಾಗಿರಲಿದೆ.
ಇದೀಗ ಇದಕ್ಕೆ ಸಾಕ್ಷಿಯಂಬಂತೆ ಮೇಘನಾ ರಾಜ್ ಒಂದ್ ಟ್ಯಾಟು ಹಾಕಿಸಿಕೊಂಡಿದ್ದಾರೆ. ಮೇಘನಾ ರಾಜ್ ಸದ್ಯ ತಮ್ಮ ಸಿನಿಮಾ ಕೆಲಸಗಳಿಗೆ ಕೊಂಚ ಬಿಡುವು ನೀಡಿ ವಿದೇಶಕ್ಕೆ ತೆರಳಿದ್ದಾರೆ. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಟಿ ಭಾಗಿಯಾಗಿದ್ದಾರೆ.
ಅಲ್ಲಿನ ಕೆಲವು ಫೋಟೊಗಳನ್ನು ನಟಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ನಟಿ ಹಂಚಿಕೊಂಡಿರುವ ಟ್ಯಾಟು ಫೋಟೋ ಎಲ್ಲರ ಘಮನ ಸೆಳೆಯುತ್ತಿದೆ. ಚಿರು ಹಾಗೂ ರಾಯನ್ ನ ಹೆಸರುಗಳು ತಮ್ಮ ಕೈ ಮೇಲೆ ಶಾಶ್ವತವಾಗಿರುವಂತೆ ಮೇಘನಾ ರಾಜ್ ಟ್ಯಾಟು ಹಾಕಿಸಿಕೊಂಡಿದ್ದಾರೆ.
ಮೇಘನಾ ಬದುಕಿನಲ್ಲಿ ಈ ಎರಡು ಹೆಸರುಗಳು ತುಂಬಾ ಮುಖ್ಯವಾಗಿರುವವು. ಇನ್ನು ವಿಶೇಷ ವಿನ್ಯಾಸದಲ್ಲಿರುವ ಈ ಟ್ಯಾಟು ನೋಡಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಇನ್ನು ಈ ಟ್ಯಾಟು ನೋಡಿ ಮೈದುನ ಧ್ರುವಸರ್ಜಾ ಕೂಡ ಫಿದಾ ಆಗಿದ್ದು, ಕಾಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.