ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಎಲ್ಲರಲ್ಲಿ ಮನವಿ ಮಾಡಿಕೊಂಡ ಖ್ಯಾತ ಖಳನಟ ಹರೀಶ್ ರಾಯ್… ಒಮ್ಮೆ ನೋಡಿ..

ಸಿನಿಮಾ ಸುದ್ದಿ

ಕನ್ನಡದ ಖ್ಯಾತ ಖಳನಟರ ಪೈಕಿ ನಟ ಹರೀಶ್ ರಾಯ್ ಕೂಡ ಒಬ್ಬರು. ಸಿನಿಮಾರಂಗದಲ್ಲಿ ಸತತ ಎರಡು ದಶಕಗಳ ಕಾಲ ತಮ್ಮ ಉತ್ತಮ ನಟನೆಯಿಂದ ಇಂದಿಗೂ ಸಹ ಸಕ್ರಿಯರಾಗಿದ್ದಾರೆ. ಇನ್ನು ಕನ್ನಡದ ಜೊತೆಗೆ ಬೇರೆ ಭಾಷೆಗಳಲ್ಲಿ ಸಹ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.

ಇನ್ನು ನಟ ಹರೀಶ್ ರಾಯ್, ಕನ್ನಡದ ಟಾಪ್ ಬ್ಲಾಕ್ ಬಾಸ್ಟರ್ ಓಂ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಜೊತೆಗೆ ರಾಯ್ ಪಾತ್ರದಲ್ಲಿ ನಟಿಸುವ ಮೂಲಕ ಸಾಕಷ್ಟು ಘಮನ ಸೆಳೆದಿದ್ದರು. ಇನ್ನು ನಟ ಹರೀಶ್ ರಾಯ್ ಅವರ ಈಗಿನ ಸ್ಥಿತಿ ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ.

ಕೆಜಿಎಫ್ ಸಿನಿಮಾದಲ್ಲಿ ಚಾಚನಾಗಿ ಹಾಗೂ ಅನೇಕ ಕನ್ನಡ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟ ಹರೀಶ್ ರಾಯ್. ನಟ ಹರೀಶ್ ರಾಯ್ ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದಾರೆ.

ಇಷ್ಟು ದಿನ ತಮ್ಮ ಅನಾರೋಗ್ಯದ ಬಗ್ಗೆ ನಟ ಹರೀಶ್ ರಾಯ್ ಎಲ್ಲಿಯೂ ಸಹ ಮಾತನಾದಿರಲಿಲ್ಲ. ಆದರೆ ಇದೀಗ ಈ ವಿಷಯ ಎಲ್ಲೆಡೆ ಸದ್ದು ಮಾಡುತ್ತಿದೆ. ನಟ ಹರೀಶ್ ಅವರು ಇದೀಗ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರು ಇದೀಗ ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

ಇನ್ನು ನಟ ಹರೀಶ್ ರಾಯ್ ಈಗಾಗಲೇ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದಾರೆ. ಆದರೆ ಇನ್ನೂ ಅವರು ರೆಡಿಯೇಷನ್ ಥೆರಪಿ ಮಾಡಿಸಿಕೊಳ್ಳಬೇಕಾಗಿದೆ, ಆದರೆ ಇದಕ್ಕೆ ಸಾಕಷ್ಟು ಹಣ ಬೇಕಾಗಿದೆ. ಆದರೆ ಅವರ ಬಳಿ ಅಷ್ಟು ಹಣ ಇಲ್ಲದ ಕಾರಣ ಅವರು ಸಹಾಯಕ್ಕಾಗಿ ಎದುರು ನೋಡುತ್ತಿದ್ದಾರೆ.

ನಟ ಹರೀಶ್ ಅವರು ಈಗಲೂ ಸಹ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇನ್ನೂ ಚಿಕಿತ್ಸೆಗೆ ಲಕ್ಷಾಂತರ ಹಣ ಬೇಕಾಗಿದೆ. ಅಷ್ಟೊಂದು ಹಣ ಅವರ ಬಳಿ ಇಲ್ಲದ ಕಾರಣ ಅವರು ಇದೀಗ ಸಹಾಯ ಕೇಳುತ್ತಿದ್ದಾರೆ.

ಸಹಾಯ ಮಾಡುವವರು ನಮ್ಮ ನಂಬರ್ ಗೆ ಗೂಗಲ್ ಪೆ ಮಾಡಿ ಎಂದು ನಂಬರ್ ನೀಡಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಆದಷ್ಟು ಬೇಗ ನಟ ಹರೀಶ್ ರಾಯ್ ಚೇತರಿಸಿಕೊಳ್ಳಲಿ ಎಂದು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *