ಲೈಗರ್ ಚಿತ್ರ ಆಗಸ್ಟ್ 25 ರಂದು ದೇಶಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಚಿತ್ರ ಬಿಡುಗಡೆಗೂ ಮುನ್ನ ನಟ ವಿಜಯ್ ದೇವರಕೊಂಡ ಹಾಗೂ ನಟಿ ಅನನ್ಯ ಪಾಂಡೆ ಈ ಸಿನಿಮಾದ ಬಗ್ಗೆ ಭರ್ಜರಿ ಪ್ರಚಾರ ಮಾಡಿದ್ದರು. ಪ್ರಚಾರಕ್ಕೆ ಹೋದಲ್ಲೆಲ್ಲಾ ಸಿನಿಮಾದ ಬಗ್ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ.
ನರ್ಥ್ ನಲ್ಲಿಯೂ ನಟ ವಿಜಯ್ ಗೆ ಸಂಪೂರ್ಣ ಕ್ರೇಜ್ ಸೃಷ್ಟಿಯಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಲೈಗರ್ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ವಿಜಯ್ ಅಭಿಮಾನಿಯೊಬ್ಬರು, ವಿಜಯ್ ಗೆ ಉಂಗುರ ತೊಡೆಸಿ ಶಾಕ್ ನೀಡಿದ್ದಾರೆ.
ಲೈಗರ್ ಸಿನಿಮಾದ ಪ್ರಚಾರದಲ್ಲಿ ವಿಜಯ್ ಹಾಗೂ ಅನನ್ಯ ಜೊತೆಯಾಗಿ ಭಾಗವಹಿಸಿದ್ದು, ಅಭಿಮಾನಿಗಳಿಗೆ ಖುಷಿ ಕೊಟ್ಟಿತ್ತು. ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ ಸ್ವಾಗತಿಸಿದರು.
ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿರುವ ವಿಡಿಯೋದಲ್ಲಿ, ಅವರು ನಟನಿಗೆ ಪ್ರಪೋಸ್ ಮಾಡಲು ಮೊಣಕಾಲಿನ ಮೇಲೆ ಕೂತು ಬೆರಳಿಗೆ ಉಂಗುರವನ್ನು ಹಾಕಿರುವುದು ನಾವು ಕಾಣಬಹುದು.
ಇನ್ನು ನಟ ವಿಜಯ್ ದೇವರಕೊಂಡ ನಗರದಲ್ಲಿ ಪ್ರಚಾರ ಪೂರ್ಣಗೊಳಿಸುವವರೆಗೆ ಉಂಗುರವನ್ನು ಉಳಿಸಿಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಈ ಫೋಟೋಗಳು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೆಲವು ದಿನಗಳ ಹಿಂದೆ ಮತ್ತೊಬ್ಬ ಮಹಿಳಾ ಅಭಿಮಾನಿ ವಿಜಯ್ ದೇವರಕೊಂಡ ಅವರನ್ನು ಭೇಟಿಯಾಗಿದ್ದರು. ತಮ್ಮ ನೆಚ್ಚಿನ ನಟನ ಟ್ಯಾಟುವನ್ನು ನಟಿ ತಮ್ಮ ಬೆನ್ನಿನ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ. ಇನ್ನು ಲೈಗರ್ ಹೀರೋ ಯುವತಿಗೆ ಅಪ್ಪುಗೆ ಕೊಟ್ಟು ಫೋಟೋ ತೆಗಿಸಿಕೊಂಡರು.
ಇನ್ನು ಲೈಗರ್ ಚಿತ್ರವೂ ವಿಜಯ್ ದೇವರಕೊಂಡ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆಕಂಡಿದೆ. ಪೂರಿ ಜಗ್ಗನಾಥ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..