ಕಾಫಿ ನಾಡು ಚಂದು ಈ ಹೆಸರು ಯಾರು ತಾನೇ ಕೇಳಿಲ್ಲ ಹೇಳಿ. ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಈ ಹೆಸರು ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಎಂದರೆ ತಪ್ಪಾಗುವುದಿಲ್ಲ. ಕೇವಲ ಒಂದೇ ರಾತ್ರಿಯಲ್ಲಿ ಈ ಕಾಫಿ ನಾಡು ಚಂದು ದೊಡ್ಡ ಸ್ಟಾರ್ ಆಗಿ ಬಿಟ್ಟಿದ್ದಾರೆ.
ಸೋಷಿಯಲ್ ಮಿಡಿಯಾದಲ್ಲಿ ಬರ್ಥ್ ಡೇ ಶುಭಾಶಯಗಳನ್ನು ಕೋರುವ ವಿಡಿಯೋಗಳನ್ನು ಮಾಡಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಕಾಫಿ ನಾಡು ಚಂದು ಬಹಳ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಮೊದಮೊದಲು ಆತನ ವಿಡಿಯೋ ನೋಡಿ ನಗುತ್ತಿದ್ದ ಜನರೇ ಇದೀಗ ಅವರನ್ನು ಹೋಗಳುತ್ತಿದ್ದಾರೆ.
ಹೌದು ಮೊದ ಮೊದಲು ಆತನ ವಿಡಿಯೋ ನೋಡಿ ಕಾಫಿ ನಾಡು ಚಂದುನನ್ನು ಸಾಕಷ್ಟು ಮಂದಿ ಟ್ರೋಲ್ ಮಾಡುತ್ತಿದ್ದರು. ಆದರೆ ಇದೀಗ ಕಾಫಿ ನಾಡು ಚಂದುಗೆ ದೊಡ್ಡ ಮಟ್ಟದಲ್ಲಿ ಫಾಲೋವರ್ಸ್ ಬೆಳೆದುಕೊಂಡಿದ್ದಾರೆ. ಆತನನ್ನು ಅದೆಷ್ಟೋ ಜನ ಭೇಟಿ ಮಾಡಿ ವಿಡಿಯೋ ಮಾಡು ಎಂದು ಕೇಳಿಕೊಳ್ಳುತ್ತಿದ್ದಾರೆ.
ಇಷ್ಟರ ಮಟ್ಟಿಗೆ ಒಬ್ಬ ಸಾಮಸ್ಯ ಮನುಷ್ಯ ಬೆಳೆಯುತ್ತಿರುವುದು ನಿಜಕ್ಕೂ ಹೆಮ್ಮೆ ಪಡುವಂತಹ ವಿಚಾರ. ಇನ್ನು ಕಾಫಿ ನಾಡು ಚಂದು ಬಹಳ ಆದರ್ಶದ ವ್ಯಕ್ತಿ. ಬೆಳ್ಳೆಗೆ 9 ರಿಂದ ಸಂಜೆ 4 ಗಂಟೆಯ ತನಕ ತನ್ನ ಜೀವನ ಸಾಗಿಸಲು ಆಟೋ ಓಡಿಸುತ್ತಾನೆ. ಇನ್ನು ಸಂಜೆ ನಾಲ್ಕರ ಮೇಲೆ ವೀಡಿಯೊ ಮಾಡಿ ಖುಷಿ ಪಡುತ್ತಾರೆ.
ಇನ್ನು ಕಾಫಿ ನಾಡು ಚಂದು ಇದೀಗ ಸ್ಟಾರ್ ಗಳ ಜೊತೆಗೂ ಸಹ ವಿಡಿಯೋ ಮಾಡಿ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಕಾಫಿ ನಾಡು ಚಂದು ಅವರಿಗೆ ನಿರೂಪಕಿ ಅನುಶ್ರೀ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಹಾಗಾದರೆ ಆ ಉಡುಗೊರೆ ಯಾವುದು ತಿಳಿಸುತ್ತೇವೆ ಈ ಪುಟವನ್ನು ಸಂಪೂರ್ಣವಾಗಿ ಓದಿ..
ಇತ್ತೀಚೆಗೆ ಕಾಫಿನಾಡ ಚಂದು ನಿರೂಪಕಿ ಅನುಶ್ರೀ ಅವರನ್ನು ಭೇಟಿ ಮಾಡಿ ಅವರ ಜೊತೆಗೆ ಒಂದು ವಿಡೀಯೋ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ಈ ವಿಡಿಯೋ ಸಕತ್ ವೈರಲ್ ಆಗಿತ್ತು. ಇದೀಗ ಅನುಶ್ರೀ ಚಂದು ಅವರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ.
ಹೌದು ಅನುಶ್ರೀ ಕಾಫಿನಾಡ ಚಂದು ಅವರಿಗೆ ಕೈಗಡಿಯಾರ ಉಡುಗೊರೆಯಾಗಿ ನೀಡಿದ್ದಾರೆ. ಇದನ್ನು ಸ್ವತಃ ಅನುಶ್ರೀ ಅವರೇ ಚಂದು ಕೈಗೆ ಹಾಕಿದ್ದು, ಇದೆ ರೀತಿ ಒಳ್ಳೆಯ ಹಾಡುಗಳನ್ನು ಹಾಡಿ ಇನ್ನಷ್ಟು ಎತ್ತರಕ್ಕೆ ಬೆಳೆಯುವಂತೆ ಹಾರೈಸಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.