ಬಿಗ್ ಬಾಸ್ ಕನ್ನಡ ಓಟಿಟಿ ಶುರುವಾಗಿ ಈಗಾಗಲೇ 3 ವಾರಗಳು ಕಳೆದು ಹೋಗಿದೆ. ಬಿಗ್ ಬಾಸ್ ಶುರುವಾದಾಗ ಮನೆಗೆ 14 ಸ್ಪರ್ಧಿಗಳು ಎಂಟ್ರಿ ಕೊಟ್ಟರು. ಈಗಾಗಲೇ 5 ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ.
ದಿನದಿಂದ ದಿನಕ್ಕೆ ಮನೆಯಲ್ಲಿ ಕಾಂಪಿಟೇಶನ್ ಹೆಚ್ಚಾಗುತ್ತಿದೆ. ಇನ್ನು ಇದೀಗ ಇನ್ನು ಕೆಲವೇ ಕೆಲವು ವಾರಗಳಲ್ಲಿ ಬಿಗ್ ಬಾಸ್ ಓಟಿಟಿಯ ಫಿನಾಲೆ ಕೂಡ ಸಮೀಪಿಸುತ್ತಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಓಟಿಟಿಯ ಟ್ರೋಫಿ ಯಾರ ಕೈ ಸೇರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.
ಬಿಗ್ ಬಾಸ್ ಮನೆಯಲ್ಲಿ ಸದ್ಯ ಸೋನು ಶ್ರೀನಿವಾಸ್ ಗೌಡ ಹಾಗೂ ರಾಕೇಶ್ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ. ಇನ್ನು ಸೋನು ಗೌಡ ಅವರು ರಾಕೇಶ್ ಮೇಲೆ ತನಗೆ ಸಾಫ್ಟ್ ಕರ್ನಾರ್ ಇರುವುದಾಗಿ ಕೂಡ ಹೇಳಿಕೊಂಡಿದ್ದಾರೆ.
ಇನ್ನು ಇದೀಗ ರಾಕೇಶ್ ಅವರು ಶನಿವಾರದ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಇದನ್ನು ಅಲ್ಲೇ ಪಕ್ಕದಲ್ಲಿ ಕುಳಿತು ಕೇಳಿಸಿಕೊಂಡ ಸೋನು ಗೌಡ ಜೋರಾಗಿ ನಕ್ಕಿದ್ದಾರೆ. ಇದೀಗ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.
ಬಿಗ್ ಮನೆಯಲ್ಲಿ ಕೊನೆಯಲ್ಲಿ ಉದಯ್ ಹಾಗೂ ಜಯಶ್ರೀ ಉಳಿದಿದ್ದಾಗ, ಯಾರೂ ಉಳಿಯಬೇಕು, ಯಾರು ಮನೆಯಿಂದ ಹೋಗಬೇಕು ಎಂದು ಕಿಚ್ಚ ಸುದೀಪ್ ರಾಕೇಶ್ ಅವರಿಗೆ ಪ್ರಶ್ನೆಯನ್ನು ಕೇಳಿತ್ತಾರೆ. ಈ ವೇಳೆ ನಟ ರಾಕೇಶ್ ಇದಕ್ಕೆ ಉತ್ತರಿಸುತ್ತಾ ಕೊನೆಯಲ್ಲಿ ಹಾಸ್ಯ ಮಾಡಿದ್ದಾರೆ.
ಉದಯ್ ಕೆಲವು ತಪ್ಪುಗಳನ್ನು ಮಾಡಿದ್ದಾರೆ ಆ ಕಾರಣದಿಂದ ಅವರು ಮನೆಯಿಂದ ಹೋಗಬೇಕು. ಹಾಗೂ ಜಯಶ್ರೀ ಅವರು ತಪ್ಪು ಮಾಡಿದ್ದರು ಕೂಡ ಅವರಿಗೆ ಒಂದು ಚ್ಯನ್ಸ್ ಸಿಗಬೇಕು. ಹಾಗೆ ಮನೆಯಲ್ಲಿ ಲೈನ್ ಹಾಕುವುದಕ್ಕೆ ಉಳಿದಿರುವುದು ಕೆಲವೇ ಕೆಲವು ಹುಡುಗಿಯರು ಅದಕ್ಕಾಗಿ ಜಯಶ್ರೀ ಮನೆಯಲ್ಲಿ ಉಳಿದುಕೊಳ್ಳಬೇಕು ಎಂದಿದ್ದಾರೆ ರಾಕೇಶ್.
ಈ ಮಾತುಗಳನ್ನು ಕೇಳಿಸಿಕೊಂಡು ಕಿಚ್ಚ ಸುದೀಪ್ ಜೊತೆಗೆ ಮನೆಮಂದಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ಇನ್ನು ಅಲ್ಲೇ ರಾಕೇಶ್ ಪಕ್ಕದಲ್ಲಿ ಕುಳಿತಿದ್ದ ಸೋನು ಗೌಡ ಕೂಡ ಜೋರಾಗಿ ನಕ್ಕಿದ್ದಾರೆ. ಇನ್ನು ಈ ಬಾರಿಯ ಬಿಗ್ ಬಾಸ್ ಓಟಿಟಿಯಲ್ಲಿ ನಿಮ್ಮ ನೆಚ್ಚಿನ ಸದ್ಯಸ್ಯ ಯಾರು ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…