ಪುನೀತ್ ರಾಜ್ ಕುಮಾರ್ ಅವರು ಕನ್ನಡಿಗರ ಪಾಲಿಗೆ ದೇವರು. ಕನ್ನಡ ಸಿನಿಮಾರಂಗಕ್ಕೆ ಅಪಾರ ಸೇವೆಯನ್ನು ಸಲ್ಲಿಸಿದ ಅವರು, ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಕೂಡ ಅದೆಷ್ಟೋ ಜನರ ಪಾಲಿಗೆ ಮಾನವ ರೂಪದ ದೇವರಾಗಿದ್ದಾರೆ.
ಅನಾಥಾಶ್ರಮಾ, ವೃದ್ದಾಶ್ರಮಾ, ಇನ್ನು ಅನೇಕ ಗೋಶಾಲೆಗಳು, ಅದೆಷ್ಟೋ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸವನ್ನು ನೋಡಿಕೊಳ್ಳುವುದರ ಜೊತೆಗೆ ಅದೆಷ್ಟೋ ಜನರಿಗೆ ದೇವರ ರೂಪದಲ್ಲಿ ಇದ್ದ ಪುನೀತ್ ರಾಜ್ ಕುಮಾರ್ ಅವರು ಇಂದು ನಮ್ಮ ಜೊತೆ ಇಲ್ಲ ಎಂಬುದು ನಿಜಕ್ಕೂ ಬೇಸರದ ಸಂಗತಿ.
ನಟ ರಾಘವೇಂದ್ರ ರಾಜ್ ಕುಮಾರ್ ಅವರು ಯಾವಾಗಲೂ ತಮ್ಮ ಪುನೀತ್ ರಾಜ್ ಕುಮಾರ್ ಅವರನ್ನು ನೆನೆದು ಕಣ್ಣೀರು ಹಾಕುತ್ತಾರೆ. ನಾನು ಬದುಕಿದ್ದೇನೆ ಎಂದರೆ ಅವನೇ ಕಾರಣ ಎಂದು ಎಲ್ಲಾ ಕಡೆ ಹೇಳುವ ಅವರು, ಇಂದು ಪುನೀತ್ ಅವರ ನಾಲ್ಕು ದೊಡ್ಡ ಕನಸ್ಸುಗಳ ರಹಸ್ಯವನ್ನು ಹೇಳಿಕೊಂಡು ಮತ್ತೆ ಕಣ್ಣೀರು ಹಾಕಿದ್ದಾರೆ.
ಪುನೀತ್ ಅವರ ಆ ನಾಲ್ಕು ಕನಸ್ಸುಗಳಲ್ಲಿ ಒಂದನ್ನು ಮಾತ್ರ ಈಡೇರಿಸಿಕೊಂಡರು ಎಂದು ರಾಘಣ್ಣ ಹೇಳಿದ್ದಾರೆ. ಆ ನಾಲ್ಕು ಆಸೆಗಳಲ್ಲಿ ದೇಶದ ದೊಡ್ಡ ಡ್ಯಾನ್ಸರ್ ಎನಿಸಿಕೊಂಡಿರುವ ಪ್ರಭುದೇವ ಅವರ ಜೊತೆ ಡ್ಯಾನ್ಸ್ ಮಾಡಬೇಕು ಎನ್ನುವ ಆಸೆ ಇದ್ದು, ಅದನ್ನು ಲಕ್ಕಿ ಮ್ಯಾನ್ ಸಿನಿಮಾದ ಮೂಲಕ ಈಡೇರಿಸಿಕೊಂಡರು ಎಂದು ರಾಘಣ್ಣ ಮಾದ್ಯಮದ ಮುಂದೆ ಹೇಳಿದ್ದಾರೆ.
ಅದೇ ರೀತಿ ಅಪ್ಪು ಅವರಿಗೆ ತಾನು ದೊಡ್ಡ ಸ್ಟಾರ್ ಆದ ನಂತರ ತಂದೆಯೊಂದಿಗೆ ನಟಿಸುವ ಆಸೆ ಹೊಂದಿದ್ದರಂತೆ, ಅದು ಈಡೇರಲಿಲ್ಲ. ಅದೇ ರೀತಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ನಿರ್ದೇಶನದ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಸಹ ಅಪ್ಪು ಅವರ ದೊಡ್ಡ ಆಸೆಯಾಗಿತ್ತಂತೆ.
ಅಷ್ಟೇ ಅಲ್ಲದೆ ಅಪ್ಪು ಅವರು ತಮ್ಮ ಚಿತ್ರಕ್ಕೆ ಎ ಆರ್ ರೆಹಮಾನ್ ಅವರು ಸಂಗೀತ ನಿರ್ದೇಶನ ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದರು. ಆದರೆ ಅಪ್ಪು ಅವರ ಈ ಮೂರು ದೊಡ್ಡ ಆಸೆಗಳು ಕೊನೆಗೂ ಈಡೇರಲಿಲ್ಲ ಎಂದು ರಾಘಣ್ಣ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.
ಅಪ್ಪು ಅಂತಹ ಅದ್ಬುತ ನಟನನ್ನು ಕಳೆದುಕೊಂಡ ಕನ್ನಡ ಸಿನಿಮಾರಂಗ ನಿಜಕ್ಕೂ ಅನಾಥ ಎಂದರೆ ತಪ್ಪಾಗಲಾರದು. ಕನ್ನಡ ಸಿನಿಮಾರಂಗಕ್ಕೆ ಅಪ್ಪು ಸಲ್ಲಿಸಿದ ಸೇವೆ ಅಪಾರ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..