ಸ್ಯಾಂಡಲ್ವುಡ್ ನ ಮುದ್ದು ಮುಖದ ಚೆಲುವೆ ನಟಿ ಅಮೂಲ್ಯ. ತಮ್ಮ ಉತ್ತಮ ಅಭಿನಯ ಹಾಗೂ ಗ್ಲಾಮರ್ ನ ಮೂಲಕ ನಟಿ ಸ್ಯಾಂಡಲ್ವುಡ್ ನ ಗೋಲ್ಡನ್ ಕ್ವೀನ್ ಎಂದೇ ಗುರುತಿಸಿಕೊಂಡಿದ್ದಾರೆ. ಇನ್ನು ನಟಿ ಅಮೂಲ್ಯ ದೇಶಾದ್ಯಂತ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಬಾಲನಟಿಯಾಗಿ ಸಿನಿಮಾರಂಗ ಪ್ರವೇಶಿಸಿದ ನಟಿ ಅಮೂಲ್ಯ, ದೊಡ್ಡ ದೊಡ್ಡ ಸ್ಟಾರ್ ಕಲಾವಿದರ ಜೊತೆ ಬಾಲನಟಿಯಾಗಿ ಅಭಿನಯಿಸಿ ಸಿನಿಮಾರಂಗದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ.
2006 ರಲ್ಲಿ ತೆರೆಕಂಡ ಚೆಲುವಿನ ಚಿತ್ತಾರ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ನಟ ಗಣೇಶ್ ಅವರ ಜೊತೆಗೆ ಅಭಿನಯಿಸುವ ಮೂಲಕ ನಟಿ ಅಮೂಲ್ಯ ಕನ್ನಡ ಸಿನಿಮಾರಂಗದಲ್ಲಿ ನಾಯಕಿಯಾಗಿ ತಮ್ಮ ಜರ್ನಿ ಶುರು ಮಾಡಿದರು. ತಮ್ಮ ಉತ್ತಮ ಅಭಿನಯದ ಮೂಲಕ ತಮ್ಮ ಮೊದಲ ಸಿನಿಮಾದಿಂದಲೇ ನಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.
ತಮ್ಮ ಮೊದಲ ಸಿನಿಮಾದಲ್ಲೇ ಉತ್ತಮ ಯಶಸ್ವು ಕಂಡ ನಟಿ ಅಮೂಲ್ಯ ನಂತರ ತಿರುಗಿ ನೋಡಲೇ ಇಲ್ಲ. ಚೈತ್ರದ ಚಂದ್ರಮ, ನಾನು ನನ್ನ ಕನಸ್ಸು, ಪ್ರೇಮಿಸು, ಮನಸಾಲಜಿ, ಶ್ರಾವಣಿ ಸುಭ್ರಮಣ್ಯಂ, ಗಜಕೇಸರಿ, ಮಾಸ್ತಿ ಗುಡಿ, ಮುಗುಳು ನಗೆ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳಲ್ಲಿ ನಟಿ ಬಣ್ಣ ಹಚ್ಚಿದ್ದಾರೆ.
ಇನ್ನು ನಟಿ ಅಮೂಲ್ಯ 2017 ರಲ್ಲಿ ಜಗದೀಶ್ ಎಂಬುವವರ ಜೊತೆಗೆ ಗುರು ಹಿರಿಯರ ಸಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ನಟಿ ಮದುವೆಯಾದ ನಂತರ ಸಂಪೂರ್ಣವಾಗಿ ಸಿನಿಮಾರಂಗದಿಂದ ದೂರ ಉಳಿದು ಬಿಟ್ಟಿದ್ದಾರೆ.
ಇನ್ನು ಇತ್ತೀಚೆಗೆ ನಟಿ ಎರಡು ಮುದ್ದಾದ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು. ಇನ್ನು ಈ ಬಗ್ಗೆ ನಟಿ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದರು. ಇನ್ನು ಇತ್ತೀಚೆಗೆ ನಟಿ ತಮ್ಮ ಮುದ್ದಾದ ಮಕ್ಕಳ ಮುಖವನ್ನು ಸೋಷಿಯಲ್ ಮಿಡಿಯಾದಲ್ಲಿ ರಿವೀಲ್ ಮಾಡಿದ್ದರು. ಮಕ್ಕಳ ಫೋಟೋಗೆ ನೆಟ್ಟಿಗರು ಸಾಕಷ್ಟು ಮೆಚ್ಚುಗೆ ಸೂಚಿಸಿದ್ದರು.
ಇನ್ನು ಸೋಷಿಯಲ್ ಮಿಡಿಯಾದಲ್ಲಿ ಸಕತ್ ಆಕ್ಟಿವ್ ಇರುವ ನಟಿ ಅಮೂಲ್ಯ ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ನಟಿಯ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ವಿಡಿಯೋ ನಿಮಗೂ ಇಷ್ಟವಾದರೆ ನೋಡಿ ಆನಂದಿಸಿ ಮತ್ತು ಕಾಮೆಂಟ್ ಹಾಗೂ ಶೇರ್ ಮಾಡಿ..