ಕರುನಾಡ ಕರ್ಣ ನಟ ಅಂಬರೀಷ್ ಅವರ ನಟನೆಯ ಬಗ್ಗೆ ಎಷ್ಟು ಮಾತನಾಡಿದರು ಸಹ ಕಡಿಮೆಯೇ. ಅವರು ಒಬ್ಬ ಅದ್ಭುತ ನಟ ಮಾತ್ರವಲ್ಲ ಒಬ್ಬ ಅದ್ಭುತ ಮನುಷ್ಯ ಕೂಡ ಹೌದು. ನಟನೆಯ ಜೊತೆಗೆ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ನಟ ಅಂಬರೀಷ್ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಇನ್ನು ಇಂತಹ ನಟನನ್ನು ಕಳೆದುಕೊಂಡು ನಮ್ಮ ಕನ್ನಡ ಚಿತ್ರರಂಗ ಅನಾಥವಾಗಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಅಂಬರೀಷ್ ಅವರನ್ನು ಕಳೆದುಕೊಂಡ ನಂತರ ನಟಿ ಸುಮಲತಾ ಅವರು ತುಂಬಾ ಕುಗ್ಗಿಹೋಗಿದ್ದರು. ನಂತರ ಮಂಡ್ಯದ ಜನರಿಗೆ ಸಹಾಯ ಮಾಡುವ ಉದ್ದೇಶದಿಂದ ರಾಜಕೀಯಕ್ಕೆ ಎಂಟ್ರಿ ಕೊಟ್ಟು, ಎಲೆಕ್ಷನಲ್ಲಿ ಗೆದ್ದಿದ್ದಾರೆ.
ಇನ್ನು ಅಂಬರೀಷ್ ಹಾಗೂ ಸುಮಲತಾ ಅವರ ಏಕೈಕ ಪುತ್ರ ನಟ ಅಭಿಷೇಕ್ ಅಂಬರೀಷ್ ಕೂಡ ಅವರ ತಂದೆಯ ರೀತಿ ಉತ್ತಮ ನಟ. ನಟನೆಯ ಜೊತೆಗೆ ಅಭಿಷೇಕ್ ತಮ್ಮ ತಾಯಿಯ ರಾಜಕೀಯ ಕೆಲಸಗಳಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಇನ್ನು ಮೊನ್ನೆ ನಟಿ ಸುಮಲತಾ ಅವರ ಹುಟ್ಟುಹಬ್ಬ ಜರುಗಿತ್ತು. ನಟಿಗೆ ದಕ್ಷಿಣ ಭಾರತ ಸಿನಿಮಾರಂಗದ ಅನೇಕ ನಟ ನಟಿಯರು ಹಾಗೂ ಅಭಿಮಾನಿಗಳು ಹುಟ್ಟುಹಬ್ಬದ ಶುಭ ಕೋರಿದ್ದರು. ಇನ್ನು ನಟಿಯ ಫೋಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು ಕೆಲವರು ಶುಭ ಹಾರೈಸಿದ್ದರು.
ಇನ್ನು ಆ ದಿನ ಸಂಜೆ ನಟ ಅಭಿಷೇಕ್ ತಮ್ಮ ತಾಯಿಗೆ ಸರ್ಪ್ರೈಸ್ ನೀಡಲು ಬರ್ಥ್ ಡೇ ಪಾರ್ಟಿಯನ್ನು ಅರೇಂಜ್ ಮಾಡಿದ್ದರು. ಇನ್ನು ಈ ಪಾರ್ಟಿಗೆ ಚಿತ್ರರಂಗದ ಅನೇಕ ಗಣ್ಯರು ಆಗಮಿಸಿದ್ದರು. ಸದ್ಯ ಸುಮಲತಾ ಅವರ ಹುಟ್ಟುಹಬ್ಬದ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಸುಮಲತಾ ಅವರ ಬರ್ಥ್ ಡೇ ಪಾರ್ಟಿಯಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್, ದರ್ಶನ್ ಹಾಗೂ ಅವರ ಕುಟುಂಬ ಹಾಗೂ ಸಿನಿಮಾರಂಗದ ಇನ್ನು ಅನೇಕ ಕಲಾವಿದರು ಆಗಮಿಸಿದ್ದರು. ಇನ್ನು ಪಾರ್ಟಿಗೆ ಆಗಮಿಸಿದ್ದ ಯಶ್ ಹಾಗೂ ದರ್ಶನ್ ಸುಮಲತಾ ಅವರಿಗೆ ವಿಶೇಷ ಉಡುಗೊರೆಯನ್ನು ಸಹ ನೀಡಿದ್ದಾರೆ.
ಇನ್ನು ಈ ಪಾರ್ಟಿಯಲ್ಲಿ ಸುಮಲತಾ ಅವರು ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾರೆ. ಸದ್ಯ ಸಿನಿಮಾಗಳ ಜೊತೆಗೆ ನಟಿ ಸುಮಲತಾ ರಾಜಕೀಯದಲ್ಲಿ ಸಹ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಇನ್ನು ಹೀಗೆ ನಟಿಯ ಜೀವನದಲ್ಲಿ ಸಂತೋಷ ಸದಾ ತುಂಬಿರಲಿ ಎಂದು ನಾವು ಹಾರೈಸೋಣ…