ನಟಿ ಪ್ರಿಯಾಮಣಿ ಕನ್ನಡ ಸೇರಿ ಐದು ಭಾಷೆಗಳಲ್ಲಿ ನಟಿಸಿ, ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಅದ್ಭುತ ನಟನೆ ಹಾಗೂ ಸೌಂದರ್ಯದ ಮೂಲಕ ನಟಿ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆ ಗೇಡಿಸಿದ್ದಾರೆ.
ತಮ್ಮ ನಟನೆಗೆ ನ್ಯಾಷನಲ್ ಅವಾರ್ಡ್ ಪಡೆದು ನಟಿ ಪ್ರಿಯಾಮಣಿ ದಕ್ಷಿಣ ಸಿನಿಮಾರಂಗದ ಟಾಪ್ ನಟಿಯಾಗಿ ಮಿಂಚಿದ್ದಾರೆ. ಇನ್ನು ಇದೀಗ ನಟಿ ಸಿನಿಮಾಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಪ್ರಿಯಾಮಣಿ ಸದ್ಯ ಮದುವೆಯಾಗಿ ತಮ್ಮ ಗಂಡನ ಜೊತೆ ಖುಷಿಯಿಂದ ಇದ್ದಾರೆ. ಪ್ರಿಯಾಮಣಿ ಫ್ಯಾಮಿಲಿಗೂ ಹಾಗೂ ಸಿನಿಮಾರಂಗಕ್ಕೂ ಬಹಳ ಹತ್ತಿರದ ಸಂಬಂಧ ಇದೆ. ಅದು ಹೇಗೆ ಗೊತ್ತಾ? ಪ್ರಿಯಾಮಣಿ ಅವರ ಅಕ್ಕ ಕೂಡ ಬಾಲಿವುಡ್ ನ ಟಾಪ್ ನಟಿಯರ ಪೈಕಿ ಒಬ್ಬರು.
ಹಾಗಾದರೆ ಪ್ರಿಯಾಮಣಿ ಅವರ ಅಕ್ಕ ಯಾರು? ಅವರ ಹೆಸರೇನು? ಅವರು ಯಾವ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ರೀತಿಯ ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡುತ್ತೆವೆ. ಈ ಬಗ್ಗೆ ಸಂಪೂರ್ಣವಾಗಿ ತಿಳಿಯಲು ಈ ಪುಟವನ್ನು ಪೂರ್ತಿಯಾಗಿ ಓದಿ..
ಕನ್ನಡ ಬಹುತೇಕ ಸಿನಿಮಾಗಳಲ್ಲಿ ನಟಿಸಿರುವ ಪ್ರಿಯಾಮಣಿ ಅವರ ಅಕ್ಕನ ಬಗ್ಗೆ ಬಹುತೇಕ ಯಾರಿಗೂ ಸಹ ಗೊತ್ತಿಲ್ಲ. ಆದರೆ ನಾವು ಇಂದು ಪ್ರಿಯಾಮಣಿ ಅವರ ಅಕ್ಕ ಯಾರು ಎಂಬುದರ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತೇವೆ, ಹಾಗಾದರೆ ಪ್ರಿಯಾಮಣಿ ಅವರ ಅಕ್ಕ ಯಾರು ಬನ್ನಿ ನೋಡೋಣ.
ನಟಿ ಪ್ರಿಯಾಮಣಿ ಅವರ ಅಕ್ಕ ಬೇರೆ ಯಾರು ಅಲ್ಲ, ಅವರೇ ಬಾಲಿವುಡ್ ನ ನಟಿ ವಿದ್ಯಾಬಾಲನ್. ವಿದ್ಯಾಬಾಲನ್ ಪ್ರಿಯಾಮಣಿ ಅವರ ದೊಡ್ಡಮ್ಮನ ಮಗಳು. ನಟಿ ವಿದ್ಯಾಬಾಲನ್ ಅವರು ಬಾಲಿವುಡ್ ನಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.
ಇನ್ನು ಪ್ರಿಯಾಮಣಿ ಅವರ ಅತ್ತೆ ಕೂಡ ದೊಡ್ಡ ಸ್ಟಾರ್ ಸಿಂಗರ್, ಹೌದು ಪ್ರಿಯಾಮಣಿ ಅವರ ಅತ್ತೆಯ ಹೆಸರು, ಮಾಲ್ಗುಡಿ ಶುಭ. ಇನ್ನು ವಿದ್ಯಾಬಾಲನ್ ಹಾಗೂ ನಟಿ ಪ್ರಿಯಾಮಣಿ ಚಿತ್ರರಂಗದಲ್ಲಿ ಬೆಳೆಯಲು ಸಹಾಯ ಮಾಡಿದ್ದು ಬೇರೆ ಯಾರು ಅಲ್ಲ ಈ ಮಾಲ್ಗುಡಿ ಶುಭ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.