ನಟಿ ರಮ್ಯಾ ಕೃಷ್ಣ ದಕ್ಷಿಣ ಭಾರತ ಸಿನಿಮಾರಂಗದ ಖ್ಯಾತ ನಟಿ ಹಾಗೂ ಕಳೆದ 30 ವರ್ಷಗಳಿಂದ ಸಿನಿಮಾರಂಗದ ಬಹು ಬೇಡಿಕೆಯ ನಟಿ ಕೂಡ ಹೌದು. ತೆಲುಗು, ತಮಿಳು, ಮಲಯಾಳಂ, ಹಿಂದಿ, ಕನ್ನಡ ಎಲ್ಲಾ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿ ರಮ್ಯಾ ಕೃಷ್ಣ ನಟಿಸಿದ್ದಾರೆ.
ನಟಿ ರಮ್ಯಾ ಕೃಷ್ಣ ಅವರು 1984ರಲ್ಲಿ ವೆಳ್ಳಿಮನಸ್ಸು ಎಂಬ ತಮಿಳು ಚಿತ್ರದ ಮೂಲಕ ಕೇವಲ 14 ವರ್ಷಕ್ಕೆ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು. ಭಲೆಮಿತ್ರುಲು ಸಿನಿಮಾದಲ್ಲಿ ಅಭಿನಯಿಸುವ ಮೂಲಕ ನಟಿ ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟರು.
1999ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ರಮ್ಯಾ ಕೃಷ್ಣ, ಸೌಂದರ್ಯ, ಮೀನಾ, ರೋಜಾ, ನಗ್ಮಾ, ಇನ್ನು ಮುಂತಾದ ನಟಿಯರಿಗೆ ಪೈಪೋಟಿ ನೀಡಿದ್ದರು. ನಟಿ ರಮ್ಯಾಕೃಷ್ಣ ತಮಿಳಿನವರಾದ ಸಹ ತಮ್ಮ ಸಿನಿಮಾ ಬದುಕನ್ನು ತೆಲುಗು ಚಿತ್ರರಂಗಕ್ಕೆ ಬಹುತೇಕವಾಗಿ ಮೀಸಲಿಟ್ಟರು.
ನಟಿ ರಮ್ಯಾ ಕೃಷ್ಣ ತೆಲುಗಿನ ನಟಿಯೇನೋ ಎಂಬಂತೆ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಾರೆ. ಇನ್ನು ತೆಲುಗಿನ ಪ್ರೇಕ್ಷಕರು ಸಹ ನಟಿ ರಮ್ಯಾಕೃಷ್ಣ ಅವರನ್ನ ಬಹಳ ಇಷ್ಟಪಡುತ್ತಾರೆ. ನಟಿ ರಮ್ಯಾಕೃಷ್ಣ ತಮ್ಮ ವಯಸ್ಸಿಗೆ ತಕ್ಕ ಪಾತ್ರಗಳನ್ನು ಆಯ್ದುಕೊಳ್ಳುತ್ತಾ ಈಗಲೂ ಸಹ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ನಟಿ ರಮ್ಯಾಕೃಷ್ಣ ಹೆಚ್ಚು ತಮ್ಮ ಪೋಷಕ ಪಾತ್ರಗಳಿಗೆ ಫ್ಹೇಮಸ್ ಆದವರು. ರಾಜಮೌಳಿ ನಿರ್ದೇಶನದ ಬಹು ದೊಡ್ಡ ಸಿನಿಮಾ ಎಂದು ಖ್ಯಾತಿ ಗಳಿಸಿದ, ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿ ಪಾತ್ರದಲ್ಲಿ ನಟಿ ರಮ್ಯಾ ಕೃಷ್ಣ ಮಿಂಚಿದ್ದರು.
ಬಾಹುಬಲಿ ಚಿತ್ರದ ಅವರ ನಟನೆಗೆ ಅವರಿಗೆ ಪ್ರಶಸ್ತಿ ಕೂಡ ಬಂತು. ಇನ್ನು ಶೈಲಜಾರೆಡ್ಡಿ ಅಲ್ಲುಡು ಸಿನಿಮಾದಲ್ಲಿ ಕೂಡ ಅಭಿನಯಿಸಿ ನಟಿ ರಮ್ಯಾ ಕೃಷ್ಣ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು.
ಇನ್ನು ನಟಿ ರಮ್ಯಾಕೃಷ್ಣ ತೆಲುಗಿನ ಖ್ಯಾತ ನಿರ್ದೇಶಕ ಕೃಷ್ಣವಂಶಿ ಅವರನ್ನ 2003ರಲ್ಲಿ ಮದುವೆಯಾದರು. ಇನ್ನು ಕೃಷ್ಣವಂಶಿ ಆವರು ತೆಲುಗಿನಲ್ಲಿ ಹಲವಾರು ಹಿಟ್ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ನೀವು ಕೂಡ ನಟಿ ರಮ್ಯಾಕೃಷ್ಣ ಅವರ ಅಭಿಮಾನಿಯಾಗಿದ್ದರೆ ಕಾಮೆಂಟ್ ಮಾಡುವ ಮೂಲಕ ತಿಳಿಸಿ.