ನೀವು ಅತ್ಯಂತ ಉದ್ದವಾದ ನದಿಯ ಬಗ್ಗೆ ಕೇಳಿರಬಹುದು. ನೀವು ಅತ್ಯಂತ ಅಗಲವಾದ ನದಿಯ ಬಗ್ಗೆ ಕೇಳಿರಬಹುದು. ನೀವು ಅತ್ಯಂತ ಆಳವಾದ ನದಿ ಯನ್ನು ನೋಡಿರಬಹುದು. ಆದರೆ ನೀವು ಅತ್ಯಂತ ಸ್ವಚ್ಛವಾದ ನದಿಯ ಬಗ್ಗೆ ಕೇಳಿದ್ದೀರಾ ಅಥವಾ ಕೊನೆಯವರೆಗೂ ಓದಿ.
ನಮಸ್ಕಾರ ಸ್ನೇಹಿತರೇ ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಶೇಷತೆ ಇರುತ್ತದೆ. ಅದಕ್ಕೆ ನಮ್ಮ ಹಿರಿಯರು ಹೇಳಿದ್ದು. ದೇಶ ಸುತ್ತಿನೋಡು ಅಥವಾ ಕೋಶ ಓದಿ ನೋಡು. ಆದರೆ ಇದೊಂದು ಗಾದೆಗೆ ಹೊಸದೊಂದು ಲೈ ನ್ ಸೇರ್ಪಡೆಯಾಗಿದೆ ಅದೇನೆಂದರೆ.
ಯೂಟ್ಯೂಬ್ ನೋಡಿ ಎಂದು. ಭಾರತ ತನ್ನ ವಿಶೇಷತೆ ಹಾಗೂ ವೈಶಿಷ್ಟತೆಗೆ ಹೆಸರುವಾಸಿಯಾಗಿದೆ. ವಿಶ್ವದ ಅತ್ಯಂತ ಪ್ರತಿಭೆ ನಿರ್ಮಿಸಿರುವ ಗರ್ವ ನಮ್ಮ ಭಾರತಕ್ಕಿದೆ. ಹಾಗೆ ಇತ್ತೀಚಿಗಷ್ಟೇ ವಿಶ್ವದ ಅತ್ಯಂತ ಸುರಂಗ ಮಾರ್ಗವನ್ನು ಕೂಡ ಉದ್ಘಾಟಿಸಿದಾಗ ಗರ್ವ ನಮ್ಮ ಪ್ರಧಾನಮಂತ್ರಿಗಿದೆ.
ಈಗ ಅತ್ಯಂತ ವಿಶ್ವದ ಸ್ವಚ್ಛ ನದಿ ಕೂಡ ನಮ್ಮ ಭಾರತದಲ್ಲಿ ಇದೆ ಅಂದರೆ ನಿಜಕ್ಕೂ ನಾವು ಹೆಮ್ಮೆಪಡುವಂತಹ ವಿಷಯ ವಾಗಿದೆ. ಹೌದು ಈ ನದಿಯನ್ನು ನೋಡಿದರೆ ಅಬ್ಬ ಎನ್ನುವಷ್ಟು ನೀರಾಗಿದೆ. ನೀವು ಹತ್ತರಿಂದ ಹದಿನೈದು ಆಳ ವರೆಗೂ ನೋಡಿದರು ಕ್ಲಿಯರ್ ಆಗಿ ಕಾಣುವಂತಹ ಪ್ರತಿಯೊಂದು ಕಲ್ಲುಗಳು ಜೀವಿಗಳು ಸ್ಪಷ್ಟವಾಗಿ ನಿಮಗೆ ಈ ನದಿಯಲ್ಲಿ ಗೋಚರಿಸುತ್ತವೆ.
ಹೌದು ಇಂಥದ್ದೊಂದು ಮಹಾನ್ ನದಿ ನಮ್ಮ ಭಾರತದ ಮೇಘಾಲಯ ರಾಜ್ಯದ ಒಂದು ಅದ್ಭುತ ನದಿಯಾಗಿದೆ. ಮೇಘಾಲಯ ಈಶಾನ್ಯ ಭಾಗದಲ್ಲಿರುವ ಒಂದು ಸಣ್ಣ ರಾಜ್ಯ. ಶಾಸ್ತ್ರೀಯವಾಗಿ ಮೇಘಾಲಯ ಎನ್ನುವ ಶಬ್ದವು ಸಂಸ್ಕೃತ ಮತ್ತು ಇತರೆ ಭಾರತೀಯ ಭಾಷೆಯಲ್ಲಿ ಮೋಡಗಳ ನಿವಾಸ ಎಂದೇ ಅರ್ಥ.
ಮೇಘಾಲಯ ರಾಜ್ಯದ ಉತ್ತರಭಾಗದಲ್ಲಿ ಅಸ್ಸಾಂ ರಾಜ್ಯ ಹಾಗೂ ದಕ್ಷಿಣ ಭಾಗದಲ್ಲಿ ಬಾಂಗ್ಲಾದೇಶ ವಿದೆ. ಮೇಘಾಲಯದ ಹುಮನ್ ಗುತ್ ನದಿಯನ್ನು ದೇಶದ ಅತ್ಯಂತ ಸ್ವಚ್ಛ ನದಿ ಎಂದು ಕರೆಯುತ್ತಾರೆ. ನೀರು ಇಷ್ಟೊಂದು ಕ್ಲಿಯರ್ ಆಗಿ ಇರುತ್ತದೆ ಅಂದರೆ ಇಲ್ಲಿ ದೋಣಿ ಸಾಗಿದರೆ ಗಾಜಿನ ಮೇಲೆ ಓಡಾಡುವಂತಹ ಅನುಭವವಾಗುತ್ತದೆ.
ಮೇಘಾಲಯದ ಈ ನದಿಯ ನೀರು ಸ್ವಚ್ಛ ಮತ್ತು ಪಾರದರ್ಶಕ ನೀರಿನ ಆಳದಲ್ಲಿರುವ ಹಸಿರು ಮತ್ತು ಬಂಡೆಗಳು ಕೂಡ ನೀರಿನಿಂದ ನಿಮಗೆ ಅಷ್ಟೇ ಗೋಚರವಾಗಿ ಕಾಣಿಸುತ್ತವೆ. ಫೋಟೋದಲ್ಲಿ ಕಾಣುವಂತೆ ಸ್ವಚ್ ನದಿ ಇದು.ಭಾರತದ ಈಶಾನ್ಯ ರಾಜ್ಯದಲ್ಲಿರುವ ಮೇಘಾಲಯವು ತನ್ನ ನೈಸರ್ಗಿಕ ಅದ್ಭುತಗಳಿಗೆ ಹೆಸರುವಾಸಿಯಾಗಿದೆ, ಇದು ಸಂಪೂರ್ಣವಾಗಿ ಪ್ರಕೃತಿಯ ಆಶೀರ್ವಾದದಿಂದ ಆವೃತವಾಗಿದೆ.
ಉಮ್ಗೋಟ್ ನದಿ, ಅಥವಾ ಡವ್ಕಿ ನದಿಯು ಜನಪ್ರಿಯವಾಗಿ ತಿಳಿದಿರುವಂತೆ, ಇದು ಗಡಿ ಪಟ್ಟಣವಾದ ಡವ್ಕಿಯಲ್ಲಿದೆ ಮತ್ತು ನೀವು ಎಂದಾದರೂ ಭೇಟಿಯಾಗುವ ಅತ್ಯಂತ ಸ್ವಚ್ಛವಾದ ನದಿಗಳಲ್ಲಿ ಒಂದಾಗಿದೆ ಎಂದು ಹೇಳಲಾಗುತ್ತದೆ. ಇದು ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯಲ್ಲಿದೆ. ಚಿತ್ರವು ಟ್ವಿಟರ್‌ನಲ್ಲಿ ಹೆಚ್ಚಿನ ಗಮನವನ್ನು ಸೆಳೆಯಿತು ಮತ್ತು ಇದು ಖಂಡಿತವಾಗಿಯೂ ಪ್ರಯಾಣಕ್ಕೆ ಸೂಕ್ತವಾದ ಅನುಭವದಂತೆ ತೋರುತ್ತದೆ.
ಚಿತ್ರದಲ್ಲಿ ನೀವು ದೋಣಿಯಲ್ಲಿ ಐದು ಜನರನ್ನು ನೋಡಬಹುದು, ಮತ್ತು ನದಿಯ ಹಾಸಿಗೆ ಎಷ್ಟು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದರೆ ಅದು ಅವಾಸ್ತವವೆಂದು ತೋರುತ್ತದೆ. ಮೇಘಾಲಯ ರಾಜ್ಯದಲ್ಲಿರುವ ಡಾವ್ಕಿ ಪ್ರಮುಖ ಪ್ರವಾಸಿ ತಾಣವಾಗಿದೆ ಮತ್ತು ಇದು ಜನಪ್ರಿಯ ಪಿಕ್ನಿಕ್ ತಾಣವಾಗಿದೆ.