ಸ್ಯಾಂಡಲ್ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಸಿನಿಮಾರಂಗದ ಉತ್ತಮ ನಟರ ಪೈಕಿ ಒಬ್ಬರು. ಸದ್ಯ ಗಣೇಶ್ ಅವರ ಗಾಳಿಪಟ 2 ಸಿನಿಮಾ ಬಿಡುಗಡೆಯಾಗಿ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ನಟ ಗಣೇಶ್ ಗುರುವಾರದಂದು ಅವರ ಮಗ ವಿಹಾನ್ ಅವರ ಫೋಟೋವನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡು, ಮಗನಿಗೆ ಹುಟ್ಟುಹಬ್ಬದ ಶುಭಕೋರಿದ್ದರು. ಇನ್ನು ಈ ಫೋಟೋಗೆ ಸೋಷಿಯಲ್ ಮಿಡಿಯಾದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿತ್ತು.
ನಟ ಗಣೇಶ್ ತಮ್ಮ ಮಗ ವಿಹಾನ್ ಹುಟ್ಟಿದ ತಕ್ಷಣ ತೆಗೆದಿರುವ ಫೋಟೋವನ್ನು ಹಂಚಿಕೊಂಡು, ” 5 ವರ್ಷಗಳು ಕಳೆದುಹೋಗಿದೆ ಎಂದರೆ ನಂಬಲು ಸಾಧ್ಯವಿಲ್ಲ, ಸಮಯ ಹಾರುತ್ತದೆ.
ಜನ್ಮದಿನದ ಶುಭಾಶಯಗಳು ಮಗನೇ, ದೇವರು ನಿನಗೆ ಬಹಳಷ್ಟು ಸಂತೋಷವನ್ನು ನೀಡಲಿ” ಎಂದು ಗಣೇಶ್ ತಮ್ಮ ಮಗನ ಜನ್ಮದಿನದಂದು ಸೋಷಿಯಲ್ ಮಿಡಿಯಾದಲ್ಲಿ ಶುಭಾಶಯಗಳು ತಿಳಿಸಿದ್ದರು.
ಇನ್ನು ಮಗನ ಹುಟ್ಟುಹಬ್ಬದ ಸಲುವಾಗಿ ನಟ ಗಣೇಶ್ ಮನೆಯಲ್ಲಿ ಬರ್ಥ್ ಡೇ ಪಾರ್ಟಿಯನ್ನು ಆಯೋಜಿಸಿದ್ದರು. ಇನ್ನು ಈ ಪಾರ್ಟಿಗೆ ಚಿತ್ರರಂಗದ ಅನೇಕ ಸ್ಟಾರ್ ಗಳನ್ನು ನಟ ಗಣೇಶ್ ಆಹ್ವಾನಿಸಿದ್ದರು. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸ್ಟಾರ್ ಗಳು ಗಣೇಶ್ ಮಗ ವಿಹಾನ್ ಗೆ ಉಡುಗೊರೆ ನೀಡಿ ಹುಟ್ಟುಹಬ್ಬದ ಶುಭ ಕೋರಿದ್ದರು.
ಇನ್ನು ಇದೀಗ ಗಣೇಶ್ ಮಗ ವಿಹಾನ್ ಅವರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ನಟಿ ಅಮೂಲ್ಯ ಕೂಡ ಆಗಮಿಸಿರುವುದು ವಿಶೇಷ. ನಟಿ ಅಮೂಲ್ಯ ತಮ್ಮ ಪತಿ ಜಗದೀಶ್ ಜೊತೆಗೆ ಬರ್ಥ್ ಡೇ ಪಾರ್ಟಿಗೆ ಬಂದಿದ್ದು, ಗಣೇಶ್ ಮಗ ವಿಹಾನ್ ಗಾಗಿ ಭರ್ಜರಿ ಉಡುಗೊರೆಯನ್ನೇ ತಂದಿದ್ದಾರೆ.
ಇನ್ನು ನಟ ಗಣೇಶ್ ಹಾಗೂ ನಟಿ ಅಮೂಲ್ಯ ನಡುವೆ ಮೊದಲಿನಿಂದಲೂ ಒಳ್ಳೆಯ ಗೆಳೆತನ ಇದೆ. ಈ ಇಬ್ಬರೂ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ಈ ಇಬ್ಬರ ಕುಟುಂಬದ ನಡುವೆಯೂ ಒಳ್ಳೆಯ ಬಾಂಧವ್ಯ ಇದೆ.
ಇನ್ನು ಇದೀಗ ನಟಿ ಅಮೂಲ್ಯ ಗಣೇಶ್ ಮನೆಗೆ ಬಂದಿದ್ದು, ಗಣೇಶ್ ಮಗ ವಿಹಾನ್ ಅವರ ಹುಟ್ಟುಹಬ್ಬದಲ್ಲಿ ಸಖತ್ ಆಗಿ ಮಿಂಚಿದ್ದಾರೆ. ಇನ್ನು ಬರ್ಥ್ ಡೇ ಪಾರ್ಟಿಯ ಕೆಲವು ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಾಕ್ ಆಗುತ್ತಿದೆ. ಈ ಫೋಟೋಗಳನ್ನು ನೀವು ನೋಡಿ ಆನಂದಿಸಿ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..