ರಾಜ್‌ಕುಮಾರ್ ಕುಟುಂಬದ ಕುಡಿ, ನಟ ರಾಮ್ ಕುಮಾರ್ ಅವರ ಮಗ ಧೀರೇನ್ ರಾಮ್‌ಕುಮಾರ್, ಇತ್ತೀಚೆಗೆ ಅನಿಲ್ ಕುಮಾರ್ ಅವರ ನಿರ್ದೇಶನದಲ್ಲಿ ಶಿವ 143 ಎನ್ನುವ ಚೊಚ್ಚಲ ಚಿತ್ರ ಮಾಡಿದರು.
ಈ ಸಿನಿಮಾ ರೋಮ್ಯಾಂಟಿಕ್ ಆಕ್ಷನ್-ಥ್ರಿಲ್ಲರ್ ಸಿನಿಮಾ ಆಗಿದ್ದು, ಈ ಸಿನಿಮಾ ಬಿಡುಗಡೆಯಾಗಿ ವೀಕ್ಷಕರಿಂದ ಉತ್ತಮ ರೆಸ್ಪಾನ್ಸ್ ಪಡೆದುಕೊಳ್ಳುತ್ತಿದೆ.
ಶಿವ143 ಸಿನಿಮಾ, 2018 ರಲ್ಲಿ ತೆರೆಕಂಡ ತೆಲುಗಿನ ಬ್ಲಾಕ್‌ಬಸ್ಟರ್ ಹಿಟ್ RX 100 ನ ರಿಮೇಕ್ ಆಗಿದೆ.
ಈ ಸಿನಿಮಾದಲ್ಲಿ ನಟಿ ಮಾನ್ವಿತ್ ಕಾಮತ್ ಗೆ ಧೀರೇನ್ ಜೋಡಿಯಾಗಿದ್ದಾರೆ. ಇನ್ನು ಧೀರೆನ್ ಅವರ ಮೊದಲ ಸಿನಿಮಾ ಆಗಿದ್ದು, ಮೊದಲ ಸಿನಿಮಾದಲ್ಲೇ ವೀಕ್ಷಕರಿಂದ ಧೀರೆನ್ ಸಾಕಷ್ಟು ಮೆಚ್ಚುಗೆ ಪಡೆದುಕೊಳ್ಳುತ್ತಿದ್ದಾರೆ.
ಧೀರನ್ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಮತ್ತು ಹಿರಿಯ ನಟ ರಾಮ್‌ಕುಮಾರ್ ಅವರ ಮಗ. ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್, ವಿನಯ್, ಯುವರಾಜ್‌ಕುಮಾರ್, ಶ್ರೀಮುರಳಿ ಮತ್ತು ಧನ್ಯ ರಾಮ್‌ಕುಮಾರ್ ಸೇರಿದಂತೆ ರಾಜ್‌ಕುಮಾರ್ ಕುಟುಂಬದ ನಟರ ಪಟ್ಟಿಗೆ ಇದೀಗ ತಮ್ಮ ಚೊಚ್ಚಲ ಸಿನಿಮಾದ ನಂತರ ನಟ ಧೀರೆನ್ ಕೂಡ ಸೇರಿಕೊಂಡಿದ್ದಾರೆ.
ಧೀರೇನ್ ರಾಮ್‌ಕುಮಾರ್ ಮತ್ತು ಮಾನ್ವಿತಾ ಕಾಮತ್ ಪ್ರಮುಖ ಪಾತ್ರಗಳಲ್ಲಿ ನಟಿಸುವುದರ ಜೊತೆಗೆ, ಚಿತ್ರದಲ್ಲಿ ಚರಣ್‌ರಾಜ್, ಅವಿನಾಶ್, ಶೋಬರಾಜ್, ಪುನೀತ್ ರುದ್ರನಾಗ್, ಬಾಲ ರಾಜವಾಡಿ, ಸಾಧು ಕೋಕಿಲಾ, ಚಿಕ್ಕಣ್ಣ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ.
ಈ ನಡುವೆ ಶಿವರಾಜಕುಮಾರ್ ಅವರು ಇತ್ತೀಚೆಗೆ ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಸಂತೋಷ್ ಥಿಯೇಟರ್ ನಲ್ಲಿ ಪತ್ನಿ ಗೀತಾ ಅವರೊಂದಿಗೆ ಸಿನಿಮಾ ವೀಕ್ಷಿಸಿದರು. ಸೆಂಚುರಿ ಸ್ಟಾರ್ ಅವರು ಧೀರೆನ್ ಅವರ ಪ್ರದರ್ಶನಕ್ಕಾಗಿ ಕ್ಲೀನ್ ಬೋಲ್ಡ್ ಆಗಿದ್ದಾರೆ.
ಇನ್ನು ಸಿನಿಮಾ ನೋಡಿದ ಶಿವಣ್ಣ ಸಿನಿಮಾ ತಂಡದ ಪರಿಶ್ರಮ ಹಾಗೂ ಅವರ ಪ್ರಯತ್ನಗಳಿಗಾಗಿ ತಂಡವನ್ನು ಅಭಿನಂದಿಸಿದ್ದಾರೆ. ರಾಜ್ಯಾದ್ಯಂತ 250ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ತೆರೆಕಾಣುತ್ತಿದೆ. ಇನ್ನು ಸಿನಿಮಾ ನೋಡಿದ ವೀಕ್ಷಕರು ಕೂಡ ಸಿನಿಮಾದ ಬಗ್ಗೆ ಉತ್ತಮ ರೆಸ್ಪಾನ್ಸ್ ನೀಡುತ್ತಿದ್ದಾರೆ.
ಇನ್ನು ಚಿತ್ರದ ಬಗ್ಗೆ ಮಾತನಾಡುತ್ತಾ ಶಿವಣ್ಣ, ಧೀರೆನ್ ಅವರ ಲುಕ್ ಬಗ್ಗೆ ಮಾತನಾಡಿದ್ದಾರೆ. ಮೊದಲೆಲ್ಲಾ ನಾವು ಕ್ಲೀನ್ ಶೇವ್ ನಲ್ಲಿ ಸಿನಿಮಾದಲ್ಲಿ ಕಾಣಿಸುತ್ತಿದ್ದೆವು, ಆದರೆ ಇದೀಗ ಬೆಯರ್ಡ್ ಬಿಡೋದೆ ಒಂದು ಕ್ರೇಜ್ ಆಗಿದೆ. ಹಾಗೂ ಈ ಲುಕ್ ನಲ್ಲಿ ಸಹ ಧೀರೆನ್ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾನೆ ಎಂದಿದ್ದಾರೆ. ಇನ್ನು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.