ಬಿಗ್ ಬಾಸ್ ಕನ್ನಡ ಓಟಿಟಿ ಶುರುವಾಗಿ ಈಗಾಗಲೇ 3 ವಾರಗಳು ಕಳೆದು ಹೋಗಿದೆ. ಬಿಗ್ ಬಾಸ್ ಶುರುವಾದಾಗ ಮನೆಗೆ 14 ಸ್ಪರ್ಧಿಗಳು ಎಂಟ್ರಿ ಕೊಟ್ಟರು. ಈಗಾಗಲೇ 5 ಸ್ಪರ್ಧಿಗಳು ಮನೆಯಿಂದ ಹೊರ ಬಂದಿದ್ದಾರೆ.
ದಿನದಿಂದ ದಿನಕ್ಕೆ ಮನೆಯಲ್ಲಿ ಕಾಂಪಿಟೇಶನ್ ಹೆಚ್ಚಾಗುತ್ತಿದೆ. ಇನ್ನು ಇದೀಗ ಇನ್ನು ಕೆಲವೇ ಕೆಲವು ವಾರಗಳಲ್ಲಿ ಬಿಗ್ ಬಾಸ್ ಓಟಿಟಿಯ ಫಿನಾಲೆ ಕೂಡ ಸಮೀಪಿಸುತ್ತಿದೆ. ಇನ್ನು ಈ ಬಾರಿಯ ಬಿಗ್ ಬಾಸ್ ಓಟಿಟಿಯ ಟ್ರೋಫಿ ಯಾರ ಕೈ ಸೇರಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.
ಹೌದು ಕನ್ನಡದ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ಪ್ರಸಾರವಾದ ಮೊದಲ ದಿನದಿಂದಲೂ ವಿಕ್ಷಕರಿಂದ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಳ್ಳುತ್ತುದೆ. ಸ್ಪರ್ಧಿಗಳು ಕೂಡ ದಿನದಿಂದ ದಿನಕ್ಕೆ ಅವರದ್ದೇ ಅಭಿಮಾನಿ ಬಳಗವನ್ನು ಸಂಪಾದಿಸಿಕೊಳ್ಳುತ್ತಿದ್ದಾರೆ.
ಇನ್ನು ವಾರಕ್ಕೊಮ್ಮೆ ಕಿಚ್ಚ ಸುದೀಪ್ ಅವರು ಬಂದು ಒಬ್ಬ ಸ್ಪರ್ಧಿಯನ್ನು ಮನೆಯಿಂದ ಎಲಿಮಿನೇಟ್ ಮಾಡುತ್ತಿದ್ದಾರೆ. ಜೊತೆಗೆ ಮನೆಯವರಿಗೆ ತಮ್ಮ ಗೇಮ್ ಪ್ಲಾನ್ ಹೆಚ್ಚಿಸಿಕೊಳ್ಳುವಂತೆ ಹೆಚ್ಚರಿಕೆ ಹಾಗೂ ಸಲಹೆಗಳನ್ನು ಸಹ ನೀಡುತ್ತಿರುತ್ತಾರೆ.
ಇನ್ನು ಇದೀಗ ಮನೆಯಿಂದ ಈಗಾಗಲೇ 5 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ಇನ್ನು ಇದೀಗ ಈ ವಾರ ಲೆಕ್ಕಾಚಾರದ ವಿಷಯದಲ್ಲಿ ಯಡವಟ್ಟು ಮಾಡಿಕೊಂಡು ಬಿಗ್ ಮಂದಿ ಮನೆಯ ಲಕ್ಷುರಿ ಬಡ್ಜೆಟ್ ಅನ್ನು ಸಹ ಕಳೆದುಕೊಂಡಿದ್ದಾರೆ.
ಇನ್ನು ಇದೀಗ ಬಿಗ್ ಮನೆಯಲ್ಲಿ ಜಾಮೂನ್ ಮಾಡಲಾಗಿದೆ. ಇನ್ನು ಇದೀಗ ಜಾಮೂನ್ ಗಾಗಿ ಸ್ಪರ್ಧಿಗಳು ಕಿತ್ತಾಡುತ್ತಿದ್ದಾರೆ. ಹೌದು ಜಾಮೂನ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಇದೀಗ ಈ ಸಿಹಿಗಾಗಿ ಕಿತ್ತಾಡಿಕೊಂಡು ತಿನ್ನುತ್ತಿದ್ದಾರೆ ಸ್ಪರ್ಧಿಗಳು.
ರೂಪೇಶ್ ತನ್ನ ಜಾಮೂನ್ ಜೊತೆಗೆ ಮನೆಯ ಉಳಿದ ಜಾಮೂನ್ ಗಳನ್ನು ಸಹ ಕಿತ್ತು ತಿನ್ನಲು ಪ್ರಯತ್ನಿಸುತ್ತಿದ್ದಾರೆ. ಸಾನಿಯಾ, ಜಸ್ವಂತ್ ಹಾಗೂ ಅಕ್ಷತಾ ಭಾಗದ ಜಾಮುನ್ ನನ್ನು ಕಿತ್ತು ತಿನ್ನಲು ಪ್ರಯತ್ನಿಸುತ್ತಿದ್ದಾರೆ.
ಈ ವೇಳೆ ಜಸ್ವಂತ್ ಹಾಗೂ ಸಾನಿಯಾ ತಮ್ಮ ತಮ್ಮ ಜಾಮೂನ್ ನನ್ನು ರೂಪೇಶ್ ನಿಂದ ಕಾಪಾಡಿಕೊಳ್ಳುತ್ತಿದ್ದಾರೆ. ಹೀಗೆ ಬಿಗ್ ಮನೆಯಲ್ಲಿ ಸ್ಪರ್ಧಿಗಳು ಜಗಳದ ಜೊತೆಗೆ ಆಗಾಗ ಮಕ್ಕಳಂತೆ ತುಂಟಾಟ ಕೂಡ ಮಾಡಿ ವೀಕ್ಷಕರಿಗೆ ಮನರಂಜಿಸುತ್ತಿರುತ್ತಾರೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..