ನಟ ವಿಜಯ್ ರಾಘವೇಂದ್ರ ತಮ್ಮ ಉತ್ತಮ ನಟನೆಯ ಮೂಲಕ ಸ್ಯಾಂಡಲ್ವುಡ್ ನ ಬೇಡಿಕೆಯ ನಟರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಇನ್ನು ಇದೀಗ ನಟ ವಿಜಯ್ ಅವರ ಹೊಸ ಸಿನಿಮಾ ಬಿಡುಗಡೆಯಾಗುತ್ತಿದ್ದು, ಅವರ ಅಭಿಮಾನಿಗಳು ಸಿನಿಮಾಗಾಗಿ ಕಾತುರಾಗಿದ್ದಾರೆ.
ವಿಜಯ್ ರಾಘವೇಂದ್ರ ಕದ್ಧ ಚಿತ್ರ ಎಂಬ ಸಿನಿಮಾದಲ್ಲಿ ನಟಿಸಿದ್ದು, ಈ ಸಿನಿಮಾದ ಟ್ರೇಲರ್ ಹಾಗೂ ಹಾಡನ್ನು ನೋಡಿದ ಶಿವಣ್ಣ ಇದೀಗ ಈ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಶಿವಣ್ಣ ಅಷ್ಟಕ್ಕೂ ಹೇಳಿದ್ದು ಏನು ಎನ್ನುವುದನ್ನು ನೋಡೋಣ ಬನ್ನಿ…
ಈ ಸಿನಿಮಾದ ಹಾಡು ನನಗೆ ತುಂಬಾ ಇಷ್ಟವಾಯಿತು. ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮೆಲ್ಲರಿಗೂ ಆಲ್ ಡಿ ಬೆಸ್ಟ್. ಇನ್ನು ನಾನು ರಾಘುನನ್ನು ಒಂದು ಲವರ್ ಬಾಯ್ ರೀತಿಯ ಪಾತ್ರಗಳಲ್ಲಿ ನೋಡಿದ್ದೇನೆ. ಇನ್ನು ಈ ರೀತಿಯ ಪಾತ್ರದಲ್ಲಿ ಸಹ ಅವರು ಅದ್ಭುತವಾಗಿ ನಟಿಸಿದ್ದಾರೆ.
ರಾಘು ನನ್ನ ಜೊತೆ ಜಗ ಮೆಚ್ಚಿದ ಹುಡುಗ ಸಿನಿಮಾದಲ್ಲಿ ಸಣ್ಣ ಹುಡುಗನ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ಹರಳಿದ ಹೂಗಳು ಸಿನಿಮಾದಲ್ಲಿ ನನ್ನ ತಮ್ಮನ ಪಾತ್ರ ಮಾಡಿದ್ದರು ರಾಘು. ನಂತರ ನಾವಿಬ್ಬರೂ ಸೇರಿ ರಿಷಿ ಸಿನಿಮಾದಲ್ಲಿ ಹೀರೋ ಪಾತ್ರದಲಿ ಅಭಿನಯಿಸಿದ್ದೆವು.
ಇನ್ನು ರಾಘು ಅವರ ಬೆಳವಣಿಗೆ ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ. ಇವರು ಒಬ್ಬ ಒಳ್ಳೆಯ ನಟ ಹಾಗೂ ತಮ್ಮ ಪಾತ್ರಗಳನ್ನು ತುಂಬಾ ಅದ್ಭುತವಾಗಿ ನಿಭಾಯಿಸುತ್ತಾರೆ. ಇನ್ನು ರಾಘು ಅವರ ಕಣ್ಣಲ್ಲಿ ಒಳ್ಳೆಯ ಕಾಂತಿ ಇದೆ. ಅವರ ಕಣ್ಣುಗಳು ನೋಡಲು ತುಂಬಾ ಸುಂದರವಾಗಿದೆ, ಅಲ್ಲದೆ ಯಾವುದೇ ಎಮೋಷನ್ ಆದರೂ ಅದನ್ನು ತಮ್ಮ ಕಣ್ಣಿನ ಮೂಲಕ ಎಸ್ಸ್ಪ್ರೆಸ್ ಮಾಡುತ್ತಾರೆ ಅದು ನನಗೆ ತುಂಬಾ ಇಷ್ಟ.
ಒಳ್ಳೆಯ ನಟನಾ ಜೊತೆಗೆ ರಾಘು ಒಳ್ಳೆಯ ಡ್ಯಾನ್ಸರ್ ಹಾಗೂ ಒಳ್ಳೆಯ ಸಿಂಗರ್ ಕೂಡ ಹೌದು, ಎಲ್ಲವನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ. ಇನ್ನು ರಾಘುನನ್ನು ಈ ರೀತಿಯ ಪಾತ್ರಗಳಲ್ಲಿ ನೋಡಿದಾಗ ತುಂಬಾ ಖುಷಿಯಾಗುತ್ತದೆ. ಇನ್ನು ಈ ಸಿನಿಮಾದಲ್ಲಿ ಸಿಗರೇಟ್ ಬೇರೆ ಇಟ್ಟುಕೊಂಡಿದ್ದಾರೆ ಎಂದು ಶಿವಣ್ಣ ನಕ್ಕಿದ್ದಾರೆ.
ಇನ್ನು ವೇಡಿಂಗ್ ಯನಿವರ್ಸರಿ ಬೇರೆ ಇದೆ, ಈ ಸಿನಿಮಾದಲ್ಲಿ ಹೀರೋಯಿನ್ ಜೊತೆಗೆ ಮಾಡಿರುವ ಪಾತ್ರ ನೋಡಿ ಮನೆಯಲ್ಲಿ ಏನು ಹೇಳುತ್ತಾರೋ ಎಂದು ಶಿವಣ್ಣ ವಿಜಯ್ ರಾಘವೇಂದ್ರ ಅವರ ಮೇಲೆ ತಮಾಷೆ ಮಾಡಿದ್ದಾರೆ. ಇನ್ನು ಇದನ್ನು ಕೇಳಿಸಿಕೊಂಡು ವಿಜಯ್ ರಾಘವೇಂದ್ರ ಕೂಡ ನಕ್ಕಿದ್ದಾರೆ. ಇದೀಗ ಈ ವೀಡಿಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ.