ಮೋಹಕ ತಾರೆ ರಮ್ಯಾ ಇತ್ತೀಚಿನ ದಿನಗಳಲ್ಲಿ ತಮ್ಮ ಸಿನಿಮಾ ವಿಚಾರಕ್ಕೆ ಬಹಳ ಸುದ್ದಿಯಾಗುತ್ತಿದ್ದಾರೆ. ಇಷ್ಟು ದಿನ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದ ನಟಿ ರಮ್ಯಾ ಇದೀಗ ಸಿನಿಮಾ ವಿಚಾರಗಳ ಕುರಿತು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.
ಒಂದಷ್ಟು ಸಿನಿಮಾ ವಿಚಾರಗಳಿಗೆ ನಟಿ ರಮ್ಯಾ ಸಾಮಾಜಿಕ ಜಾಲತಾಣಗಳ ಮೂಲಕ ಪ್ರತಿಕ್ರಿಯೆ ನೀಡುತ್ತಾ ಇರುತ್ತಾರೆ. ಜೊತೆಗೆ ಕೆಲವೊಂದು ಕನ್ನಡ ಸಿನಿಮಾ ಪೋಸ್ಟರ್ ಹಾಗೂ ಹಾಡುಗಳನ್ನು ಹಂಚಿಕೊಳ್ಳುವ ಮೂಲಕ ಆ ಚಿತ್ರಗಳಿಗೆ ಸಾತ್ ನೀಡುತ್ತಿರುತ್ತಾರೆ.
ನಟಿ ರಮ್ಯಾ ಅವರ ಕಮ್ ಬ್ಯಾಕ್ ಯಾವಾಗ? ನಟಿ ರಮ್ಯಾ ಅವರನ್ನು ಮತ್ತೆ ತೆರೆ ಮೇಲೆ ನೋಡೋದು ಯಾವಾಗ ಎಂದು ರಮ್ಯಾ ಅವರ ಅಭಿಮಾನಿ ಬಳಗ ಕಾಯುತ್ತಿತ್ತು. ಅದಕ್ಕೆ ಇದೀಗ ಕಾಲ ಕೂಡಿ ಬಂದಿದೆ ಎನ್ನಲಾಗುತ್ತಿದೆ. ನಟಿ ರಮ್ಯಾ ಹಂಚಿಕೊಂಡಿರುವ ಹೊಸದೊಂದು ಪೋಸ್ಟರ್ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ನಟಿ ರಮ್ಯಾ ಹಂಚಿಕೊಂಡಿರುವ ಪೋಸ್ಟ್ ನಲ್ಲಿ ಸಿಹಿ ಸುದ್ದಿ ನೀಡುವುದಾಗಿ ಬರೆದುಕೊಂಡಿರುವುದೇ ಕುತೂಹಲಕ್ಕೆ ಕಾರಣವಾಗಿದೆ. ಇದೀಗ ನಟಿ ರಮ್ಯಾ ಹಂಚಿಕೊಂಡಿರುವ ಪೋಸ್ಟ್ ತುಂಬಾ ವಿಶೇಷವಾಗಿದೆ. ಇಷ್ಟು ದಿನ ನಾನು ಸಮಯ ತೆಗೆದುಕೊಂಡಿದ್ದು ಸಾಕು ಅನಿಸುತ್ತೆ ಅಲ್ವಾ. ನಾನು ನಾಳೆ ಬೆಳ್ಳಿಗೆ 11:15 ಕ್ಕೆ ಸಿಹಿಸುದ್ದಿಯನ್ನು ಹಂಚಿಕೊಳ್ಳಲು ಕಾತುರಲಾಗಿದ್ದೇನೆ, ಇದು ಅಧಿಕೃತ ಎಂದು ನಟಿ ರಮ್ಯಾ ಬರೆದುಕೊಂಡಿದ್ದಾರೆ.
ನಟಿ ರಮ್ಯಾ ಈ ಪೋಸ್ಟ್ ಹಂಚಿಕೊಂಡಿರುವುದು ತಮ್ಮ ಮುಂದಿನ ಸಿನಿಮಾದ ಬಗ್ಗೆ ಮಾಹಿತಿ ಕೊಡಲಿಕ್ಕೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಇತ್ತೀಚೆಗೆ ರಮ್ಯಾ ರಾಜ್ ಬಿ ಶೆಟ್ಟಿ ಹಾಗೂ ನಟಿ ಅಮೃತ ಐಯಂಗರ್ ಜೊತೆಗೆ ಇರುವ ಫೋಟೋ ಒಂದನ್ನು ಹಂಚಿಕೊಂಡಿದ್ದರು.
ಇದಕ್ಕೂ ಮುನ್ನ ರಾಜ್ ಬಿ ಶೆಟ್ಟಿ ಜೊತೆಗೆ ನಟಿ ಕಾಣಿಸಿಕೊಂಡಿದ್ದರು. ಹಾಗಾಗಿ ಇವರ ಕಾಂಬಿನೇಷನ್ ನಲ್ಲಿ ಸಿನಿಮಾ ಬರಬಹುದು ಎನ್ನುವ ಚರ್ಚೆ ಶುರುವಾಗಿತ್ತು. ಇನ್ನು ನಟಿ ಈ ಪೋಸ್ಟ್ ಶೇರ್ ಮಾಡಿಕೊಂಡ ಬಳಿಕ ಶುಭಾಷಯದ ಮಹಾಪೂರವೇ ಹರಿದುಬರುತ್ತಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..