ಬಾಲಿವುಡ್ ನಟ ಹೃತಿಕ್ ರೋಷನ್ ಅವರು ಇದೀಗ ತಮ್ಮ ಅಭಿಮಾನಿ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. ನಟ ಹೃತಿಕ್ ರೋಷನ್ ಬಾಲಿವುಡ್ ನ ಫಿಟ್ ನಟರ ಪೈಕಿ ಮೊದಲ ಸ್ಥಾನದಲ್ಲಿದ್ದಾರೆ.
ಯಾವಾಗಲೂ ವರ್ಕೌಟ್ ಯೋಗ ಹಾಗೂ ಇನ್ನಿತರ ಕಾರ್ಯಗಳ ಮೂಲಕ ತಮ್ಮ ದೇಹವನ್ನು ಯಾವಾಗಲೂ ಫಿಟ್ ಆಗಿ ಇರಿಸಲು ಬಯಸುತ್ತಾರೆ ಹೃಕಿತ್ ರೋಷನ್. ಇನ್ನು ಫಿಟ್ ಆಗಿ ಇರುವುದರ ಜೊತೆಗೆ ನಟ ತಮ್ಮ ಗ್ಲಾಮರ್ ನ ಬಗ್ಗೆಯೂ ಸಹ ಹೆಚ್ಚಿನ ಕಾಳಜಿ ವಯಸುತ್ತಾರೆ.
ಇತ್ತೀಚೆಗೆ ನಟ ಹೃತಿಕ್ ರೋಷನ್ ಫೈಟನ್ಸ್ ಕಾರ್ಯಕ್ರಮ ಒಂದಕ್ಕೆ ಅಥಿತಿಯಾಗಿ ತೆರಳಿದ್ದರು. ಆ ಕಾರ್ಯಕ್ರಮದಲ್ಲಿ ನಟ ಹೃತಿಕ್ ರೋಷನ್ ಅನೇಕ ಸ್ಪರ್ಧಿಗಳಿಗೆ ಬಹುಮಾನ ವಿತರಣೆ ಮಾಡಿದರು. ಇನ್ನು ಆ ಸ್ಪರ್ಧಿಗಳಲ್ಲಿ ಅನೇಕರು ಹೃತಿಕ್ ಅವರ ಅಭಿಮಾನಿಳು ಸಹ ಆಗಿದ್ದರು.
ಇನ್ನು ಬಹುಮಾನ ವಿತರಣೆಯ ವೇಳೆ ವೇದಿಕೆ ಮೇಲೆ ಬಹುಮಾನ ಪಡೆಯಲು ಬಂದ ವ್ಯಕ್ತಿಯೊಬ್ಬರು, ಹೃತಿಕ್ ಅವರನ್ನು ನೋಡಿ ಅವರ ಕಾಲಿಗೆ ನಮಸ್ಕರಿಸಿದ್ದಾರೆ. ಇನ್ನು ಹೃತಿಕ್ ಕೂಡ ಆ ಅಭಿಮಾನಿಯ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದಾರೆ.
ಇನ್ನು ಬಾಲಿವುಡ್ ನ ದೊಡ್ಡ ಸ್ಟಾರ್ ನಟ ಹೃತಿಕ್ ರೋಷನ್ ಅಭಿಮಾನಿಯ ಕಾಲು ಮುಟ್ಟಿ ನಮಸ್ಕರಿಸಿದ್ದು, ಅಲ್ಲಿನ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಇನ್ನು ಈ ವಿಡಿಯೋ ಹಾಗೂ ಫೋಟೋಗಳು ಸದ್ಯ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ನಟ ಹೃತಿಕ್ ರೋಷನ್ ಅವರ ಈ ಸಹಜ ಗುಣವನ್ನು ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. ಇಷ್ಟು ದಿನ ಅವರ ನಟನೆಗೆ ಹೆಸರುವಾಸಿಯಾಗಿದ್ದ ಹೃತಿಕ ಅವರ ಇನ್ನೊಂದು ಮುಖ ನೋಡಿ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ.
ಇನ್ನು ಸದ್ಯ ಹೃತಿಕ್ ರೋಷನ್ ಅವರ ವೀಡಿಯೊ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ವಿಡಿಯೋ ನೋಡಿದ ಪ್ರತಿಯೊಬ್ಬ ಹೃತಿಕ್ ಅಭಿಮಾನಿ ನಮ್ಮ ಹೃತಿಕ್ ಯಾವಾಗಲೂ ಗ್ರೇಟ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..