ನಟ ಉಪೇಂದ್ರ ಅವರ ನಟನೆ ಹಾಗೂ ಡೈರೆಕ್ಷನ್ ಬಗ್ಗೆ ಹೇಳಲು ಒಂದು ಮಾತಿಲ್ಲ. ಉಪೇಂದ್ರ ಸಿನಿಮಾಗಳು ಎಂದರೆ ಅದನ್ನು ಒಮ್ಮೆಲೇ ನೋಡಿ ಅರ್ಥ ಮಾಡಿಕೊಳ್ಳುವುದು ಅಸಾಧ್ಯ. ಇನ್ನು ಅವರ ನಟನೆ ಸಿನಿಮಾದ ಜೊತೆಗೆ ಅವರ ನಿರ್ದೇಶನದ ಸಿನಿಮಾಗಳಿಗೆ ದೊಡ್ಡ ಅಭಿಮಾನಿ ಬಲಗವಿದೆ.
ಇನ್ನು ನಟ ಉಪೇಂದ್ರ ಅವರ ಮನೆಯಲ್ಲಿ ಇಂದು ಪ್ರತಿ ವರ್ಷದಂತೆ ಗಣೇಶನ ಹಬ್ಬವನ್ನು ಆಚರಣೆ ಮಾಡಿದ್ದು, ಇನ್ನು ತಮ್ಮ ಮನೆಯಲ್ಲಿ ಗಣೇಶ ಹಬ್ಬ ಶುರುವಾಗಿದ್ದು ಹೇಗೆ ಎನ್ನುವದರ ಬಗ್ಗೆ ನಟಿ ಪ್ರಿಯಾಂಕಾ ಉಪೇಂದ್ರ ಮಾಹಿತಿ ಹಂಚಿಕೊಂಡಿದ್ದಾರೆ.
ಮೊದಲಿಗೆ ಎಲ್ಲರಿಗೂ ಗಣೇಶ ಹಬ್ಬದ ಶುಭಾಶಯಗಳು, ನೀವೆಲ್ಲರೂ ನಮ್ಮ ಮನೆಗೆ ಬಂದು ಗಣೇಶ ಹಬ್ಬ ಆಚರಿಸುತ್ರಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ಇನ್ನು ಎಲ್ಲರೂ ಅವರವರ ಮನೆಯಲ್ಲಿ ಗಣೇಶ ಹಬ್ಬ ಆಚರಿಸುತ್ತಿದ್ದಾರೆ. ಆದರೆ ನೀವು ನಮ್ಮ ಮನೆಯವರೆಗೂ ಬಂದು ವಿಡಿಯೋ ಶೂಟ್ ಮಾಡಿ ಎಲ್ಲರಿಗೂ ತೋರಿಸುತ್ತಿದ್ದರೆ, ಎಲ್ಲರೂ ನಮ್ಮ ಜೊತೆ ಇದ್ದು ಹಬ್ಬ ಆಚರಿಸಿದಂತೆ ಅನಿಸುತ್ತಿದೆ.
ಇನ್ನು ಇತ್ತೀಚೆಗೆ ಕೋವಿಡ್ ಹಾಗೂ ಇನ್ನಿತರ ಕಾಯಿಲೆಗಳು ಇನ್ನು ಹಲವಾರು ಸಮಸ್ಯೆಗಳಿಂದ ಜನರು ಬಳಲುತ್ತಿದ್ದರು. ಇನ್ನು ಮುಂದೆಯಾದರು ಆ ನಮ್ಮ ವಿಘ್ನವಿನಾಯಾಕ ಎಲ್ಲಾ ವಿಘ್ನಗಳನ್ನು ಕಲೆಯಲ್ಲಿ ಎಂದು ನಾವು ಅವನಲ್ಲಿ ಪ್ರಾರ್ಥಿನೊಣ ಎಂದಿದ್ದಾರೆ ನಟ ಉಪೇಂದ್ರ.
ಇನ್ನು ಮಾತು ಮುಂದುರೆಸಿದ ನಟಿ ಪ್ರಿಯಾಂಕ ಉಪೇಂದ್ರ ಅವರು, ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಗಳಿಂದ ನಾವು ನಮ್ಮ ಮನೆಯವರ ಜೊತೆಗೆ ಸಿಂಪಲ್ ಆಗಿ ಗಣೇಶ ಹಬ್ಬ ಆಚರಣೆ ಮಾಡುತ್ತಿದ್ದೆವು, ಇನ್ನು ಈ ವರ್ಷ ನೀವೆಲ್ಲರೂ ಬಂದಿರುವುದು ನಿಜಕ್ಕೂ ಖುಷಿಯ ವಿಚಾರ.
ಇನ್ನು ನಮ್ಮ ಮನೆಯಲ್ಲಿ ಗಣೇಶ ಹಬ್ಬವನ್ನು ಶುರು ಮಾಡಿದ್ದೆ ನಮ್ಮ ಉಪ್ಪಿ ಅವರು, ಅಮ್ಮ ಅಂದರೆ ಉಪೇಂದ್ರ ಅವರ ತಾಯಿ ಕಥೆ ಹೇಳುತ್ತಿದ್ದರು. ಅದು ಉಪ್ಪಿ ಅವರು ಚಿಕ್ಕ ವಯಸ್ಸಿನಲ್ಲಿ ಗಣೇಶನನ್ನು ತಂದು ಮನೆಯಲ್ಲಿ ಇಟ್ಟು ಪೂಜೆ ಮಾಡಲು ಶುರು ಮಾಡಿದರಂತೆ, ಹೀಗೆ ಗಣೇಶನ ಹಬ್ಬವನ್ನು ಆಗಿನಿಂದ ಈಗಿನವರೆಗೂ ಆಚರಿಸುತ್ತಾ ಬಂದಿದ್ದೇವೆ.
ಇನ್ನು ಪ್ರತಿ ವರ್ಷ ನಮ್ಮ ಮನೆಯಲ್ಲಿ ಗಣೇಶನನ್ನು ತಂದು ಕೂರಿಸುತ್ತೇವೆ. ಇನ್ನು ಕಳೆದ 5-6 ವರ್ಷಗಳಿಂದ ನಮ್ಮ ಮನೆಯಲ್ಲಿ ಗಣ ಹೋಮ ಸಹ ಮಾಡಿಸುತ್ತಿದ್ದೇವೆ ಎಂದಿದ್ದಾರೆ. ಇನ್ನು ಇದೀಗ ನಟ ಉಪೇಂದ್ರ ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು ಸಹ ಹಬ್ಬದಂದು ಮನೆಯವರ ಜೊತೆಗೆ ಪೂಜೆಯಲ್ಲಿ ಕುಳಿತುಕೊಂಡು ಹಬ್ಬ ಆಚರಿಸಿರುವುದು ನಿಜಕ್ಕೂ ಖುಷಿಯ ವಿಚಾರ ಎನ್ನಬಹುದು.