ಸ್ಯಾಂಡಲ್ವುಡ್ ನ ಉತ್ತಮ ನಟರ ಪೈಕಿ ನಟ ನಿಖಿಲ್ ಕುಮಾರಸ್ವಾಮಿ ಕೂಡ ಒಬ್ಬರು. ನಟನೆಯ ಜೊತೆಗೆ ತಮ್ಮ ತಂದೆಯ ರಾಜಕೀಯ ಕೆಲಸಗಳಲ್ಲಿ ಸಹ ನಿಖಿಲ್ ಸಹಾಯ ಮಾಡಿರುವುದನ್ನು ನಾವೆಲ್ಲರೂ ಸಹ ನೋಡಿದ್ದೇವೆ. 2016 ರಲ್ಲಿ ಜಾಗ್ವಾರ್ ಸಿನಿಮಾದಲ್ಲಿ ನಾಯಕ ನಟನಾಗಿ ಅಭಿನಯಿಸುವ ಮೂಲಕ ನಿಖಿಲ್ ಕುಮಾರಸ್ವಾಮಿ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದರು.
ಮೊದಲ ಸಿನಿಮಾದಲ್ಲೇ ನಟ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಇನ್ನು ಅವರ ಮೊದಲ ಜಾಗ್ವಾರ್ ಸಿನಿಮಾದಲ್ಲಿ ನಟ ನಿಖಿಲ್ ಕುಮಾರ್ ಸ್ವಾಮಿ ದೊಡ್ಡ ಸ್ಟಾರ್ ಬಗಳದ ಜೊತೆ ಅಭಿನಯುಸಿದ್ದರು. ಇನ್ನು ಅವರ ಜಾಗ್ವಾರ್ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಗಳಲ್ಲಿ ಏಕ ಕಾಲಕ್ಕೆ ತಯಾರಾಗಿ ಬಿಡುಗಡೆಯಾಗಿತ್ತು.
ಎರಡು ಭಾಷೆಗಳಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು ನಿಖಿಲ್ ಅವರ ಜಾಗ್ವಾರ್ ಸಿನಿಮಾ. ಇನ್ನು ಇದಾದ ಬಳಿಕ ಸೀತಾರಾಮ ಕಲ್ಯಾಣ, ಕುರುಕ್ಷೇತ್ರ, ರೈಡರ್ ನಂತಹ ಒಂದಾದ ಮೇಲೆ ಒಂದು ಸೂಪರ್ ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ ನಟ ನಿಖಿಲ್.
ಇನ್ನು ನಟನೆಯ ಜೊತೆಗೆ ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯದಲ್ಲಿ ಸಹ ಸಕ್ರಿಯರಾಗಿದ್ದಾರೆ. ಇನ್ನು ತಮ್ಮ ತಂದೆಯ ರಾಜಕೀಯ ಕೆಲಸಗಳಲ್ಲಿ ನಟ ನಿಖಿಲ್ ಸಹಾಯ ಮಾಡುತ್ತಾ ಅವರು ಕೂಡ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇನ್ನು ಇತ್ತೀಚೆಗೆ ನಟ ನಿಖಿಲ್ ರೇವತಿ ಎಂಬುವವರನ್ನು ಮದುವೆಯಾದರು.
ಈ ಜೋಡಿಗೆ ಚಿತ್ರರಂಗದವರು ಸೇರಿದಂತೆ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದರು. ಇನ್ನು ಈ ಜೋಡಿಗೆ ಇತ್ತೀಚೆಗೆ ಒಂದು ಗಂಡು ಮಗು ಸಹ ಜನಿಸಿತ್ತು. ಇನ್ನು ಇತ್ತೀಚೆಗೆ ನಿಖಿಲ್ ಹಾಗೂ ರೇವತಿ ತಮ್ಮ ಮಗನಿಗೆ ಮುಡಿ ಕೊಟ್ಟಿದ್ದರು, ಈ ಫೋಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗಿದ್ದವು.
ಇನ್ನು ಇಂದು ಗಣೇಶ ಹಬ್ಬದ ಪ್ರಯುಕ್ತ ನಿಖಿಲ್ ಮನೆಯಲ್ಲಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ಇನ್ನು ತಮ್ಮ ಮನೆಯಲ್ಲಿ ಗೌರಿ ಹಾಗೂ ಗಣೇಶನ ಪ್ರತಿಮೆಯನ್ನು ಕೂರಿಸಿ, ಪೂಜೆ ಮಾಡಿ ನೈವೇದ್ಯ ಸಮರ್ಪಿಸಿದ್ದಾರೆ. ಇನ್ನು ನಿಖಿಲ್ ಮಗನಿಗೆ ಇದು ಮೊದಲ ಗಣೇಶನ ಹಬ್ಬವಾಗಿದ್ದು, ಮಗನ ಜೊತೆ ನಿಖಿಲ್ ಹಾಗೂ ರೇವತಿ ಗಣೇಶನಿಗೆ ಪೂಜೆ ಸಲ್ಲಿಸಿದ್ದಾರೆ.
ಸದ್ಯ ನಿಖಿಲ್ ಹಾಗೂ ಕುಟುಂಬದವರು ಗಣೇಶನಿಗೆ ಪೂಜೆ ಮಾಡುತ್ತಿರುವ ವಿಡೀಯೋ ಸೋಷಿಯಲ್ ಮಿಡಿಯಾದಲ್ಲಿ ಸಕತ್ ವೈರಲ್ ಆಗುತ್ತಿದೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.