ಬಂಧುಗಳೇ ನಮಸ್ಕಾರ ಕನ್ನಡ ಸಿನಿಮಾದ ಕರಿಚಿರತೆ ಎಂದರೆ ಅದು ದುನಿಯಾ ವಿಜಯ್ ದುನಿಯಾ ವಿಜಯ್ ಒಂದಿಷ್ಟು ಕಾಂಟ್ರೋವರ್ಸಿಗಳು ಹೊರತಾಗಿ ಕೂಡ ಬಹಳ ದೊಡ್ಡ ಅಭಿಮಾನಿ ಬಳಗ ಸಂಪಾದಿಸಿದ್ದಾರೆ ಒಂದು ಅವರ ನಟನೆಗೆ ಅಭಿಮಾನಿ ಬಳಗ ಇದ್ದರೆ ಒಂದು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆದು ಬಂದಂತಹ ಪರಿಗೆ ಬಹಳ ದೊಡ್ಡದಾದ ಅಂತಹ ಒಂದು ಅಭಿಮಾನಿ ಬಳಗ ಇದೆ.
ಕಾರಣ ಹೇಳಿ ಕೊಳ್ಳುವಂತಹ ಬ್ಯಾಗ್ರೌಂಡ್ ಏನು ಇಲ್ಲ ಹಾಗೆ ತೀರ ಬಡತನವು ಕೂಡ ಅಲ್ಲ. ಆದರೆ ಸಿನಿಮಾದಲ್ಲಿ ಇಂಡಸ್ಟ್ರಿಯಲ್ಲಿ ಏನಾದ್ರೂ ಮಾಡಬೇಕು ಅಂತ ಚಿಕ್ಕಪುಟ್ಟ ಪಾತ್ರಗಳ ಮೂಲಕ ಹೀರೋ ಆಗಿ ಮಿಂಚಿದ ಅಂಥವರು. ಅದೇ ರೀತಿಯಲ್ಲಿ ಒಂದು ಜೋಗಿ ಸಿನಿಮಾದಲ್ಲಿ ಚಿಕ್ಕ ಪಾತ್ರ. ಅನಂತರ ಒಂದು ಅಷ್ಟು ಸಿನಿಮಾಗಳಲ್ಲಿ ಕಾಣಿಸಿಕೊಂಡು ಅಂತಿಮವಾಗಿ ದುನಿಯಾ ಸಿನಿಮಾ ಮೂಲಕ ತೆರೆ ಮೇಲೆ ವಿಜೃಂಭಿಸಿದ ಅಂಥವರು ದುನಿಯಾ ವಿಜಯ್.
ಆನಂತರ ಸಾಕಷ್ಟು ಏಳುಬೀಳುಗಳನ್ನು ಕಂಡು ವೈಯಕ್ತಿಕ ಬದುಕಿನಲ್ಲೂ ಕೂಡ ಸಾಕಷ್ಟು ರೀತಿಯಾದಂತಹ ಬೆಳವಣಿಗಳು ಆಯ್ತು. ನಂತರ ಸೋಲಿನ ಮೇಲೆ ಸೋಲು ಕಂಡು ಸಲಗ ಸಿನಿಮಾದ ಮೂಲಕ ಗೆಲುವನ್ನು ಕಂಡಿದ್ದಾರೆ ದುನಿಯಾ ವಿಜಯ್. ಇನ್ನು ದುನಿಯಾ ವಿಜಯ್ ಅವರ ಎಲ್ಲ ವಿಚಾರಗಳು ಕೂಡ ನಿಮಗೆ ಗೊತ್ತಿರುವುದೇ. ಇನ್ನು ತಂದೆ-ತಾಯಿ ಅವರನ್ನು ಎಷ್ಟರ ಮಟ್ಟಿಗೆ ಅವರು ಪ್ರೀತಿಸುತ್ತಿದ್ದರು ಎಂದು ಬಹುತೇಕರಿಗೆ ಗೊತ್ತಿಲ್ಲ.
ದುನಿಯಾ ವಿಜಯ್ ಹಾಗೂ ವಿಜಯಲಕ್ಷ್ಮಿ ಅಂದರೆ ಅವರ ಮೊದಲ ಪತ್ನಿ ಬೇರೆಬೇರೆ ಆಗುವುದಕ್ಕೆ ಅವರ ತಂದೆ-ತಾಯಿ ಕೂಡ ಕಾರಣ ಎನ್ನುವ ಮಾತಿದೆ. ತಂದೆ-ತಾಯಿ ಅಂದರೆ ತಂದೆ ತಾಯಿ ಏನು ಮಾಡಿಬಿಟ್ರು ಅಥವಾ ನೆಗೆಟಿವ್ ಆಗಿ ಅಂತಲ್ಲ. ಕಾರಣ ದುನಿಯಾ ವಿಜಯ್ ತಂದೆ-ತಾಯಿಯನ್ನು ವಿಪರೀತವಾಗಿ ಪ್ರೀತಿಸುತ್ತಿದ್ದರು. ಅವರು ಬಹುತೇಕ ಸಂದರ್ಶನಗಳನ್ನು ಹೇಳಿಕೊಂಡಿದ್ದಾರೆ.
ನನ್ನ ಬಹಳ ದೊಡ್ಡ ಆಸೆ ಏನಪ್ಪಾ ಅಂದರೆ ತಂದೆ-ತಾಯಿ ಕೊನೆಯವರೆಗೂ ಕೂಡ ಅದ್ಭುತವಾಗಿ ಅವರು ನೋಡಿಕೊಳ್ಳಬೇಕು. ಬಹಳ ಚೆನ್ನಾಗಿ ಅವರನ್ನು ಟ್ರೀಟ್ ಮಾಡಬೇಕು. ಜನ್ಮ ಕೊಟ್ಟಿದ್ದಾರೆ ಎಲ್ಲವೂ ಕೂಡ ಅವರಿಂದಲೇ. ನಾನು ಈ ಹಂತಕ್ಕೆ ನಿಂತಿದ್ದೇನೆ ಅಂದರೆ ಅವರೇ ಕಾರಣ ಎಂದು ದುನಿಯಾ ವಿಜಯ್ ಯಾವಾಗ ಕೂಡ ಹೇಳುತ್ತಿದ್ದರು. ಆದರೆ ಅವರ ಪತ್ನಿ ಮೊದಲ ಪತ್ನಿ ತಂದೆ-ತಾಯಿ ಕುರಿತಾಗಿ ಹೆಚ್ಚಿನ ಕಾಳಜಿ ತೋರುತ್ತಿರಲಿಲ್ಲ ಸ್ವಲ್ಪ ಮಟ್ಟಿಗೆ ತಾತ್ಸಾರವನ್ನು ಕೂಡ ಮಾಡುತ್ತಿದ್ದರು.
ಈ ಕಾರಣಕ್ಕಾಗಿ ಗಂಡ-ಹೆಂಡತಿಯ ನಡುವೆ ಆಗಾಗ ಭಿನ್ನಾಭಿಪ್ರಾಯ ಬಿರುಕು ಅದೆಲ್ಲವೂ ಕೂಡ ಕಾಣಿಸಿಕೊಳ್ಳುತ್ತಿತ್ತು ಎನ್ನುವಂಥ ಮಾತು ಕೂಡ ಇದೆ. ಅಂತಿಮವಾಗಿ ಅವರ ಬದುಕಿನಲ್ಲಿ ಕೀರ್ತಿ ಎಂಟ್ರಿಕೊಟ್ಟ ಅಂತಹ ಸಂದರ್ಭದಲ್ಲಿ ಆ ಜಗಳ ಎಲ್ಲವೂ ಕೂಡ ಜಾಸ್ತಿ ಆಗುತ್ತೆ. ಅವರು ಬೇರೆ ಬೇರೆ ಆಗುತ್ತರೆ.
ಒಟ್ಟಾರೆಯಾಗಿ ತಂದೆ-ತಾಯಿ ನೋಡಿಕೊಳ್ಳುತ್ತಿಲ್ಲ ಎನ್ನುವ ಕಾರಣಕ್ಕಾಗಿಯೂ ಕೂಡ ದುನಿಯಾ ವಿಜಯ್ ಮೊದಲ ಪತ್ನಿಯ ಮೇಲೆ ಮುನಿಸಿಕೊಂಡಿದ್ದಾರಂತೆ. ಅವರು ಬೇರೆ ಬೇರೆ ಆಗುವುದಕ್ಕೆ ಅದು ಕೂಡ ಮೇನ್ ರೀಜನ್ ಅಂತ ಹೇಳಲಾಗುತ್ತದೆ. ಪ್ರತಿ ಸಂದರ್ಭದಲ್ಲೂ ಕೂಡ ಅವರಿಗೆ ಯಾವುದೇ ರೀತಿ ಆಗದಂತಹ ಸಂದರ್ಭದಲ್ಲಿ ಕೂಡ ನೋಡಿಕೊಳ್ಳುತ್ತಿದ್ದರು.
ಇತ್ತೀಚಿಗಷ್ಟೇ ನಾವು ಗಮನಿಸಿದ್ದೇವೆ ಕೋರೋನ ಬಂದಂತಹ ಸಂದರ್ಭದಲ್ಲಿ ಯಾವ ರೀತಿಯಾಗಿ ಅವರ ತಂದೆ ತಾಯಿಯನ್ನ ಅವರು ಟ್ರೀಟ್ ಮಾಡಿ ದ್ದು ಅಂತ ಹೇಳಿ. ಏನೆಲ್ಲ ವ್ಯವಸ್ಥೆ ಬೇಕು ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು. ಅವರ ತಂದೆಗೆ 80 ವರ್ಷ ವಯಸ್ಸಾಗಿತ್ತು. ತಾಯಿಗೆ 76 ವರ್ಷ ವಯಸ್ಸಾಗಿತ್ತು. ಆ ವಯಸ್ಸಿನಲ್ಲೂ ಕೂಡ ಕೊರೋ ನ ಗೆಲ್ಲುವಲ್ಲಿ ಅವರ ತಂದೆ-ತಾಯಿ ಯಶಸ್ವಿಯಾಗಿದ್ದರು. ಅದಕ್ಕೆ ಕಾರಣ ಎಂದರೆ ದುನಿಯಾ ವಿಜಯ್.
ಅದಾದ ನಂತರ ಅವರ ತಂದೆಗೆ ಒಂದಷ್ಟು ಸಮಸ್ಯೆಗಳಿದ್ದು. ಬಹು ಅಂಗಾಂಗ ವೈಫಲ್ಯ ವಾಗಿತ್ತು. ಅವರ ತಾಯಿಗೂ ಕೂಡ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆಯಾಗಿತ್ತು. ಮೊದಲು ಅವರ ತಾಯಿಯನ್ನು ಕಳೆದುಕೊಳ್ಳುತ್ತಾರೆ. ತಾಯಿಯನ್ನು ಕಳೆದುಕೊಂಡಂತಹ ದುಃಖದಲ್ಲಿ ಇದ್ದಂತಹ ಸಂದರ್ಭದಲ್ಲಿ ಮೂರು ತಿಂಗಳ ಅಂತರದಲ್ಲಿ ಅವರ ತಂದೆಯನ್ನು ಕೂಡ ಕಳೆದುಕೊಳ್ಳುವಂತಹ ಪರಿಸ್ಥಿತಿ ಎದುರಾಗುತ್ತದೆ.
ತಂದೆ-ತಾಯಿಯ ಅಂತ್ಯಕ್ರಿಯೆಯನ್ನು ಕೂಡ ಸರಿಯಾದ ರೀತಿಯಲ್ಲಿ ಅವರು ನಿರ್ವಹಿಸಿರುತ್ತಾರೆ. ಆನಂತರ ಕು ಡ ದುನಿಯಾ ವಿಜಯ್ ಅವರಿಗೆ ಒಂದು ಆಸೆ ಇರುತ್ತೆ. ತಂದೆ ತಾಯಿಗೆ ಒಂದು ಅದ್ಭುತವಾದಂತಹ ಸಮಾಧಿ ಇರಬೇಕು ಅಂತ. ಸಮಾಧಿಗೆ ನಮ್ಮ ಹಿಂದೂ ಕಲ್ಚರಲ್ಲಿ ಅಥವಾ ಭಾರತ ಸಂಸ್ಕೃತಿಯಲ್ಲಿ ಯಾಕೆ ಅಷ್ಟರಮಟ್ಟಿಗೆ ಆದ್ಯತೆ ಕೊಡುತ್ತೇವೆ ಎಂದರೆ ಒಬ್ಬ ವ್ಯಕ್ತಿ ಹೋದ ನಂತರವೂ ಕೂಡ ಆ ವ್ಯಕ್ತಿಯ ಜೊತೆಗೆ ಭಾವನಾತ್ಮಕವಾಗಿ ಕನೆಕ್ಟ್ ಆಗುವುದಕ್ಕೆ ಒಂದು ಜಾಗ ಇದೆ ಅಂದರೆ ಅದು ಸಮಾಧಿ.
ಕಾರಣಕ್ಕಾಗಿ ಅದು ಎಷ್ಟು ಜನ ಎಷ್ಟೇ ಖರ್ಚಾದರೂ ಪರವಾಗಿಲ್ಲ. ಸಮಾಧಿ ಮಾತ್ರ ಬಹಳ ಅದ್ಭುತವಾಗಿ ಮಾಡಿಸಬೇಕು. ಈ ಕಾರಣಕ್ಕಾಗಿ ವಿಷ್ಣುವರ್ಧನ್ ಸಮಾಧಿ ಮಾತ್ರ ಯಾಕಾಗಿಲ್ಲ. ಶಂಕರ್ ನಾಗ್ ಅವರ ಸಮಾಧಿ ಯಾಕಾಗಿಲ್ಲ.ಈ ರೀತಿ ಪ್ರಶ್ನೆಗಳು ಸಹ ಉದ್ಭವವಾಗುತ್ತವೆ. ದುನಿಯಾ ವಿಜಯ್ ಕೂಡ ಅದೇ ರೀತಿಯಾಗಿ ಸಮಾಧಿ ಕಟ್ಟುವಂತಹ ಕಾರ್ಯ ಆರಂಭಿಸಿದರು. ಬಹಳ ದಿನಗಳಿಂದ ಆ ಕಾರ್ಯ ಆಗುತ್ತಿತ್ತು. ಸ್ವತಃ ದುನಿಯಾ ವಿಜಯ್ ಅವರೇ ಅದಕ್ಕೆ ಸಂಬಂಧಪಟ್ಟ ಹಾಗೆ ಕಾಳಜಿ ಮುತ್ತಜ್ಜಿ ಎಲ್ಲವನ್ನೂ ಕೂಡ ವಹಿಸುತ್ತಿದ್ದರು.