ರಮ್ಯಾಕೃಷ್ಣ ಕೃಷ್ಣವಂಶಿ ಡೈವೋರ್ಸ್? ಈ ಬಗ್ಗೆ ಕೃಷವಂಶಿ ಹೇಳಿದ್ದೇನು ಒಮ್ಮೆ ನೋಡಿ…

others

80 ಹಾಗೂ 90ರ ದಶಕದ ನಟಿಯರಲ್ಲಿ ಈಗಲೂ ಸಹ ಅದೇ ಚಾರ್ಮ್ ಉಳಿಸಿಕೊಂಡಿರುವ ನಟಿಯರಲ್ಲಿ ಒಬ್ಬರು ರಮ್ಯಾ ಕೃಷ್ಣನ್. ಇವರ ವಯಸ್ಸು 50 ದಾಟಿದ್ದರು ಸಹ, ಈಗಲೂ ಯಾವ ಹೀರೋಯಿನ್ ಗು ಕಡಿಮೆ ಇಲ್ಲ ಎನ್ನುವ ಹಾಗಿದ್ದಾರೆ.

ಈಗಿನ ನಟಿಯರಿಗೆ ಕಾಂಪಿಟೇಶನ್ ಕೊಡುವ ಹಾಗೆ ಸಂಭಾವನೆ ಪಡೆಯುತ್ತಾರೆ ನಟಿ ರಮ್ಯಾ ಕೃಷ್ಣನ್. ಆಗಲೂ ಈಗಲೂ ಅದೇ ಸೌಂದರ್ಯ ಚಾರ್ಮ್ ಉಳಿಸಿಕೊಂಡಿದ್ದಾರೆ ನಟಿ ರಮ್ಯಾ ಕೃಷ್ಣ.ನಟಿ ರಮ್ಯಾ ಕೃಷ್ಣನ್ ಹುಟ್ಟಿದ್ದು ಚೆನ್ನೈನಲ್ಲಿ, ಸೆಪ್ಟೆಂಬರ್ 15, 1970ರಲ್ಲಿ ಇವರ ಜನನವಾಯಿತು. ರಮ್ಯಾ ಕೃಷ್ಣನ್ ಅವರ ತಂದೆ ಕೃಷ್ಣನ್, ತಾಯಿ ಮಾಯಾ.

ಚಿಕ್ಕ ವಯಸ್ಸಿನಿಂದಲೇ ಡ್ಯಾನ್ಸ್ ನಲ್ಲಿ ಆಸಕ್ತಿ ಇದ್ದ ಕಾರಣ, ಹಾಗೂ ನೋಡಲು ಸುಂದರವಾಗಿದ್ದ ರಮ್ಯಾ ಕೃಷ್ಣನ್ ಅವರಿಗೆ ನಟನೆಯ ಅವಕಾಶ ಬೇಗ ಸಿಕ್ಕಿತು. 1986ರಲ್ಲಿ 16ನೇ ವಯಸ್ಸಿನಲ್ಲಿದ್ದಾಗ, ಪುಲಾರಂಬಲ್ ಎನ್ನುವ ಮಲಯಾಳಂ ಸಿನಿಮಾ ಮೂಲಕ ನಟಿ ರಮ್ಯಾ ಕೃಷ್ಣನ್ ನಟನೆ ಶುರು ಮಾಡಿದರು.

ಅದಾದ ಬಳಿಕ ತಮಿಳು ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಕನ್ನಡ ಚಿತ್ರರಂಗಕ್ಕೆ 1988ರಲ್ಲಿ ತೆರೆಕಂಡ ಶಕ್ತಿ ಸಿನಿಮಾ ಮೂಲಕ ಪಾದಾರ್ಪಣೆ ಮಾಡಿದರು. ಕನ್ನಡದಲ್ಲಿ ಕೃಷ್ಣ ರುಕ್ಮಿಣಿ, ಗಡಿಬಿಡಿ ಕೃಷ್ಣ, ಯಾರೇ ನೀ ಅಭಿಮಾನಿ, ಏಕಾಂಗಿ, ಮಾಂಗಲ್ಯಮ್ ತಂತುನಾನೇನಾ, ನೀಲಾಂಬರಿ, ರಾಜನರಸಿಂಹ, ರಕ್ತ ಕಣ್ಣೀರು, ಇತ್ತೀಚಿನ ಮಾಣಿಕ್ಯ, ಅಂಜನಿಪುತ್ರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡದಲ್ಲಿ ಕೂಡ ಇವರಿಗೆ ದೊಡ್ಡ ಫ್ಯಾನ್ ಬೇಸ್ ಇದೆ.

ತಮಿಳು, ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿ ಎಲ್ಲಾ ಭಾಷೆಗಳಲ್ಲೂ ಇವರು ಬಿಡುವಿಲ್ಲದೆ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿರುವ ಕಾರಣ ಎಲ್ಲಾ ಇಂಡಸ್ಟ್ರಿಯಲ್ಲಿ ಇವರಿಗೆ ಬೇಡಿಕೆ ಇದೆ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು ಹಾಗೂ ಇವರಿಗಿದ್ದ ಬೇಡಿಕೆ ಸಹ ಹೆಚ್ಚಾಯಿತು ಎಂದರೆ ತಪ್ಪಾಗುವುದಿಲ್ಲ.

ನಟಿ ರಮ್ಯಾಕೃಷ್ಣ ತೆಲುಗಿನ ಟಾಪ್ ನಿರ್ದೇಶಕ ಕೃಷ್ಣವಂಶಿ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಬ್ಬರದ್ದು ಲವ್ ಮ್ಯಾರೇಜ್ ಆಗಿದೆ. ಈ ದಂಪತಿಗೆ ಒಬ್ಬ ಮಗನಿದ್ದು, ಇವರ ಮಗನ ಹೆಸರು ರಿತ್ವಿಕ್ ವಂಶಿ. ಇನ್ನು ಇತ್ತೀಚೆಗೆ ನಟಿ ರಮ್ಯಾ ಕೃಷ ಹಾಗೂ ಕೃಷ ವಂಶಿ ವಿಚ್ಛೇಧನದ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಇದೀಗ ಇದಕ್ಕೆ ಕೃಷ್ಣವಂಶಿ ಸ್ಪಷ್ಟನೆ ನೀಡಿದ್ದಾರೆ.

ನಾನು ರಮ್ಯಾ ಕೃಷ್ಣ ಒಟ್ಟಾಗಿ ಇಲ್ಲ, ಹಾಗಂತ ನಾವು ಬೇರೆಯಾಗಿಲ್ಲ, ನಮ್ಮಿಬ್ಬರ ದಾಂಪತ್ಯ ತುಂಬಾ ಚೆನ್ನಾಗಿದೆ. ರಮ್ಯಾಕೃಷ್ಣ ತಮ್ಮ ಅಮ್ಮನ ಮನೆಯಲ್ಲಿದ್ದಾರೆ, ಸಮಯ ಸಿಕ್ಕಾಗ ನಾವು ಭೇಟಿ ಮಾಡುತ್ತೇವೆ. ಇನ್ನು ನಮ್ಮ ವಿಚ್ಛೇಧನದ ಬಗ್ಗೆ ಹರಡಿದ್ದ ವಂದಿಗಳಿಗೆ ನಾವು ತಲೆಕೆಡಿಸಿಕೊಂಡಿಲ್ಲ ಎಂದಿದ್ದಾರೆ.

Leave a Reply

Your email address will not be published. Required fields are marked *