ಈ ಬಾರಿಯ ಗಣೇಶ ಹಬ್ಬದ ಸಂಭ್ರಮ ಬಹಳ ವಿಶೇಷ. ಎಲ್ಲೆಡೆ ಗೌರಿ ಗಣೇಶ ಹಬ್ಬದ ಸಂಭ್ರಮ ಕಲೆ ಕಟ್ಟುತ್ತಿದೆ. ಎರಡು ವರ್ಷಗಳಿಂದ ಕೋವಿಡ್ ಕಾರಣಗಳಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗಿರಲಿಲ್ಲ. ಆಗಾಗಿ ಈ ಬಾರಿಯ ಗಣೇಶ ಹಬ್ಬ ಎಲ್ಲರಿಗೂ ಸಹ ತುಂಬಾ ವಿಶೇಷವಾಗಿತ್ತು.
ಕನ್ನಡದ ಸ್ಟಾರ್ ನಟ ನಟಿಯರು ಕೂಡ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಿದ್ದರು ಸಹ ಬಿಡುವು ಮಾಡಿಕೊಂಡು ಹಬ್ಬದ ದಿನ ಮನೆಯಲ್ಲಿ ಅದ್ದೂರಿಯಾಗಿ ಗಣೇಶ ಹಬ್ಬವನ್ನು ಆಚರಿಸಿ, ಆ ಫೋಟೋಗಳನ್ನು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ನಟಿ ಪ್ರಣೀತಾ, ನಟಿ ರಾಧಿಕಾ ಪಂಡಿತ್, ದರ್ಶನ್ ಪತ್ನಿ ವಿಜಯಲಕ್ಷ್ಮಿ, ನಟಿ ಅಮೂಲ್ಯ, ನಟಿ ಮೇಘನಾ ರಾಜ್ ಸೇರಿದಂತೆ ಅನೇಕ ನಟ ನಟಿಯರು ತಮ್ಮ ಮನೆಯಲ್ಲಿ ಈ ಬಾರಿ ಗಣೇಶ ಹಬ್ಬವನ್ನು ತುಂಬಾ ಅದ್ದೂರಿಯಾಗಿ ಆಚರಿಸುತ್ತಿದ್ದಾರೆ.
ಅದರಲ್ಲೂ ನಟಿ ಮೇಘನಾ ರಾಜ್ ಅವರು ತಮ್ಮ ಮುದ್ದು ಮಗನಾದ ರಾಯನ್ ಜೊತೆ ಗಣೇಶ ಹಬ್ಬವನ್ನು ತುಂಬಾ ಅದ್ದೂರಿಯಾಗಿ ಖುಷಿಯಿಂದ ಆಚರಿಸಿದ್ದಾರೆ. ಮಕ್ಕಳಿಗೆ ಗಣಪ ಎಂದರೆ ಅಚ್ಚುಮೆಚ್ಚು, ಗಣಪನ ಜೊತೆ ಆಟವಾಡುವುದೇ ಖುಷಿ.
ಮೇಘನಾ ರಾಜ್ ಅವರು ಪ್ರತಿ ವರ್ಷ ತಮ್ಮ ಪತಿ ಚಿರಂಜೀವಿ ಸರ್ಜಾ ಜೊತೆ ಗಣೇಶ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಚಿರು ನಿಧನರಾದ ಬಳಿಕ ಎರಡು ವರ್ಷಗಳ ಕಾಲ ನಟಿ ಮೇಘನ ಗಣೇಶ ಹಬ್ಬವನ್ನು ಆಚರಿಸಿರಲಿಲ್ಲ. ಆದರೆ ಈ ಬಾರಿ ಮೇಘನಾ ತಮ್ಮ ಮಗ ರಾಯನ್ ಜೊತೆ ಗೌರಿ ಗಣೇಶ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ.
ಮೇಘನಾ ರಾಜ್ ಇದೀಗ ಪತಿಯ ನೆನಪಿನಲ್ಲಿ ಮಗ ರಾಯನ್ ಜೊತೆ ಮನೆಯಲ್ಲಿ ಗಣೇಶ ಹಬ್ಬವನ್ನು ಖುಷಿಯಿಂದ ಆಚರಿಸಿದ್ದಾರೆ. ಇನ್ನು ಮನೆಗೆ ಪುಟ್ಟ ಗೌರಿ ಹಾಗೂ ಗಣೇಶ ಮೂರ್ತಿಯನ್ನು ತಂದು ರಾಯನ್ ಕೈಯಲ್ಲಿ ಪೂಜೆ ಮಾಡಿಸಿ, ಸಿಹಿ ತಿಂಡಿ ನೈವೇದ್ಯ ಮಾಡಿಸಿದ್ದಾರೆ.
ಇನ್ನು ರಾಯನ್ ಕೂಡ ಸಾಂಪ್ರದಾಯಿಕ ಉಡುಗೆಯಲ್ಲಿ ತುಂಬಾ ಚೆನ್ನಾಗಿ ಕಾಣುತ್ತಿದ್ದು, ಇನ್ನು ಪುಟ್ಟ ಗಣಪವನನ್ನು ನೋಡಿ ರಾಯನ್ ಕೂಡ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಇನ್ನು ನೀವು ಸಹ ಮೇಘನಾ ರಾಜ್ ಅವರಿಗೆ ಗಣೇಶ ಹಬ್ಬದ ಶುಭಾಶಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.